ಉಜಿರೆಯ ಬಾಲಕನ ಅಪಹರಣ ಪ್ರಕರಣ: ಅಪಹರಣಕಾರರು 10 ದಿನ ಪೊಲೀಸ್‌ ಕಸ್ಟಡಿಗೆ

ಸೂತ್ರಧಾರನಿಗೆ ಶೋಧ ಕಾರ್ಯ ಚುರುಕು

Team Udayavani, Dec 21, 2020, 6:12 AM IST

ಉಜಿರೆಯ ಬಾಲಕನ ಅಪಹರಣ ಪ್ರಕರಣ: ಅಪಹರಣಕಾರರು 10 ದಿನ ಪೊಲೀಸ್‌ ಕಸ್ಟಡಿಗೆ

ಕುಟುಂಬದೊಂದಿಗೆ ಅನುಭವ್‌

ಬೆಳ್ತಂಗಡಿ: ಉಜಿರೆ ರಥಬೀದಿ ಸಮೀಪ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಸೂತ್ರಧಾರನಿಗೆ ಪೊಲೀಸರ ತನಿಖೆ ಚುರುಕುಗೊಂಡಿದೆ. ಹಣದ ವ್ಯವಹಾರದಲ್ಲಿ ಬಾಲಕನ ತಂದೆ ಬಿಜೊಯ್‌ ಅವರ ಪರಿಚಿತನಿಂದಲೇ ಕೃತ್ಯ ನಡೆದಿರುವುದಾಗಿ ಪೊಲೀಸರು ಈಗಾಗಲೇ ತಿಳಿಸಿದ್ದು, ಮೂಲ ಆರೋಪಿ ಸೆರೆಸಿಕ್ಕ ಬಳಿಕ ಪ್ರಕರಣದ ಆಯಾಮ ಯಾವುದೇ ಸ್ವರೂಪವನ್ನು ಪಡೆಯುವ ಸಾಧ್ಯತೆ ಇದೆ. 6 ಮಂದಿಯನ್ನು ರವಿವಾರ ಮುಂಜಾನೆ 5.30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಅಪಹರಣಕ್ಕೊಳಗಾದ ಮಗು ಅನುಭವ್‌ ಹಾಗೂ ತಂದೆ ತಾಯಿ ಶನಿವಾರ ತಡರಾತ್ರಿ 2 ಗಂಟೆಗೆ ಮನೆ ತಲುಪಿದ್ದರು.

ಕೋ.ರೂ. ವ್ಯವಹಾರದ ಅನುಮಾನ?
ಲಭ್ಯ ಮಾಹಿತಿಗಳ ಪ್ರಕಾರ ಅಪಹರಣದ ರೂವಾರಿಗೆ ಬಿಜೋಯ್‌ 1.30 ಕೋ.ರೂ. ನೀಡಲು ಬಾಕಿ ಇತ್ತೇ? ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪಹರಣಕಾರ ಹಾಸನ ಜಿಲ್ಲೆಯವನಾಗಿದ್ದು, ಈತನಿಗೆ ಬಾಲಕನ ಮನೆಯವರ ಬಗ್ಗೆ ಸ್ಪಷ್ಟ ಮಾಹಿತಿಗಳಿವೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಬಿಟ್‌ ಕಾಯಿನ್‌ ಲಿಂಕ್‌
ಆರೋಪಿಗಳು ಬಿಟ್‌ ಕಾಯಿನ್‌ಗಾಗಿಯೇ ಬೇಡಿಕೆ ಮುಂದಿಟ್ಟಿರುವುದು ಒಟ್ಟು ಪ್ರಕರಣದ ಹಿಂದೆ ಬಿಟ್‌ ಕಾಯಿನ್‌ ವ್ಯವಹಾರವೇ ಇದೆ ಎಂಬ ಅನುಮಾನವೂ ಮೂಡುತ್ತಿದೆ. ಬಿಜೋಯ್‌ ಅವರ ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸರು ಅವರ ವ್ಯವಹಾರಗಳ ಮೇಲೆ ನಿಗಾ ಇರಿಸಿದ್ದಾರೆ. ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್‌ ಡಿ’ಸೋಜಾ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ., ಉಪನಿರೀಕ್ಷಕ ನಂದಕುಮಾರ್‌ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಪ್ರಕರಣದ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ. ಸ್ಥಳ ಮಹಜರಿಗಾಗಿ ಆರೋಪಿಗಳನ್ನು ಮತ್ತೆ ಕೋಲಾರಕ್ಕೆ ಕರೆದೊಯ್ಯಲಿದ್ದಾರೆ.

ಮಕ್ಕಳಲ್ಲಿ ಇರಲಿ ಜಾಗೃತಿ
ಮಗನನ್ನು ಕ್ಷೇಮವಾಗಿ ಕರೆತಂದ ಪೊಲೀಸರಿಗೆ, ತನಿಖೆಗೆ ಮಾಹಿತಿಗಳನ್ನು ನೀಡಿದ ಊರವರಿಗೆ ತಾಯಿ ಸರಿತಾ ಕೃತಜ್ಞತೆ ಅರ್ಪಿಸಿದ್ದಾರೆ. ಇದೇ ವೇಳೆ ಅವರು ಮಕ್ಕಳ ಪೋಷಕರಿಗೊಂದು ಸಂದೇಶವನ್ನೂ ನೀಡಿದ್ದಾರೆ. ಇದು ಎಲ್ಲ ಪೋಷಕರೂ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಕ್ಷಣವಾಗಿದೆ. ಮಕ್ಕಳನ್ನು ನಿಗಾದಲ್ಲಿಡುವ ಜತೆಗೆ ಇಂತಹ ಸಂದರ್ಭ ಸ್ವಯಂ ರಕ್ಷಣೆಯ ಪಾಠವನ್ನು ಅಗತ್ಯವಾಗಿ ಕಲಿಸಬೇಕಿದೆ ಎಂದಿದ್ದಾರೆ.

ಕಾರಿಗೆ ತುರುಕಿದವನಿಗೆ ಎರಡು ಹೊಡೆಯಬೇಕು!
ಅಪಹರಣಕಾರರಿಂದ ಬಿಡುಗಡೆ ಯಾದ ಬಳಿಕ ಅನುಭವ್‌ ಯಾವುದೇ ಆತಂಕವಿಲ್ಲದೆ ಅಜ್ಜ- ಅಜ್ಜಿಯೊಂದಿಗೆ ಸಮಯ ಕಳೆಯುತ್ತಿದ್ದಾನೆ.ಎಲ್ಲ ರೊಂದಿಗೆ ಸೆಲ್ಫಿ ತೆಗೆಯುತ್ತ, ಆಟ ಪಾಠದ ಜತೆ ಮತ್ತೆ ಶೈಕ್ಷಣಿಕೆ ಚಟುವಟಿಕೆ ಗಳಲ್ಲಿ ತೊಡಗಿದ್ದಾನೆ. ಆದರೆ ತನ್ನನ್ನು ಎಳೆದೊಯ್ದು ಕಾರಿಗೆ ತುರುಕಿದವನಿಗೆ ಮಾತ್ರ ಎರಡು ಹೊಡೆಯಬೇಕು ಎಂದು ಮುಗ್ಧ ಮಾತುಗಳಲ್ಲಿ ಹೇಳುತ್ತಾನೆ. ನಾವು ನಿನ್ನೆ ತಂದೆಯ ಸ್ನೇಹಿತ ರಾಗಿದ್ದು, ಅವರಿಗೆ ಸರ್‌ಪ್ರೈಸ್‌ ನೀಡಲು ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದರಿಂದ ನಾನು ಸುಮ್ಮ ನಿದ್ದೆ. ಆಟವಾಡಲು ಹಲವು ವಸ್ತುಗಳನ್ನು ಕೊಡಿಸಿದ್ದರು. ನನಗೆ ಭಯವಾಗುತ್ತಿತ್ತು. ಅಮ್ಮನನ್ನು ನೋಡ ಬೇಕು ಎಂದು ಕೇಳಿದ್ದೆ. ಕೆಲವು ಬಾರಿ ಅತ್ತೆ. ಅವರು ಬೇರೆ ಯಾವುದೇ ರೀತಿಯಲ್ಲಿ ಏನೂ ಮಾಡಲಿಲ್ಲ. ಆದರೂ ಏನಾದರು ಮಾಡಿಯಾರೇ ಎಂಬ ಸಣ್ಣ ಭಯ ಇದ್ದೇ ಇತ್ತು ಎನ್ನುತ್ತಾನೆ ಪುಟಾಣಿ ಅನುಭವ್‌.

ನಾನು ನಿವೃತ್ತ ಸೇನಾನಿಯಾಗಿದ್ದು, ನಮ್ಮ ಪೊಲೀಸರ ದಕ್ಷತೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ. ಅದರಂತೆ ಅವರು ನನ್ನ ಮೊಮ್ಮಗನನ್ನು ತ್ವರಿತ ಕಾರ್ಯಾ  ಚರಣೆಯಲ್ಲಿ ಕ್ಷೇಮವಾಗಿ ಕರೆ ತಂದಿದ್ದಾರೆ. ಅವರಿಗೆ ನಾನು ಕೃತಜ್ಞ.
– ಶಿವನ್‌ ನಾಯರ್‌, ಬಾಲಕನ ಅಜ್ಜ

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.