ಉಜಿರೆ ಚಿಕ್ಕ ಮೇಳ: ಮಳೆಗಾಲದ ತಿರುಗಾಟ ಆರಂಭ
Team Udayavani, Jun 8, 2018, 12:49 PM IST
ಬೆಳ್ತಂಗಡಿ : ಮಳೆಗಾಲದಲ್ಲಿ ಮನೆ ಮನೆಗಳಲ್ಲಿ ಚಿಕ್ಕ ಮೇಳದ ಯಕ್ಷಗಾನ ಪ್ರದರ್ಶನದಿಂದ, ಚೆಂಡೆ, ಮದ್ದಲೆ, ಗೆಜ್ಜೆ ಕುಣಿತದಿಂದ ದುಷ್ಟ ಶಕ್ತಿಗಳು ದೂರವಾಗುವುದೆಂಬ ನಂಬಿಕೆಯಿದೆ. ದೇವಾಲಯಗಳು ಧರ್ಮ ಪ್ರಚಾರದ ಜತೆಗೆ ಜಿಲ್ಲೆಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವನ್ನು ಪೋಷಿಸಿ ಬೆಳೆಸಿಕೊಂಡು ಬರುವುದರಿಂದ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಪೌರಾಣಿಕ ಕಥೆಗಳಲ್ಲಿ ಅಭಿರುಚಿ, ಆಸಕ್ತಿ ಮೂಡಿ ಸಂಸ್ಕೃತಿ-ಸಂಸ್ಕಾರದ ಉದ್ದೀಪನವಾಗುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಹೇಳಿದರು.
ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಜನಾರ್ದನ ಸ್ವಾಮಿ ಕೃಪಾಶ್ರಿತ ಚಿಕ್ಕಮೇಳದ ಮಳೆಗಾಲದ 4ನೇ ವರ್ಷದ ತಿರುಗಾಟದ ಪ್ರಾರಂಭದಲ್ಲಿ ವಿಶೇಷ ಸೇವಾ ಪೂಜೆಯ ಬಳಿಕೆ ಗೆಜ್ಜೆಯನ್ನು ಕಲಾವಿದರಿಗೆ ವಿತರಿಸಿ, ಶ್ರೀ ದೇವರ ಭಾವಚಿತ್ರವನ್ನು ಚಿಕ್ಕಮೇಳದ ವ್ಯವಸ್ಥಾಪಕ ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರಿಗೆ ನೀಡಿ ಮಾತನಾಡಿದರು. ಅರ್ಚಕ ವೇ| ಮೂ| ಶ್ರೀನಿವಾಸ ಹೊಳ್ಳ ಅವರು ಶ್ರೀ ಜನಾರ್ದನ ಸ್ವಾಮಿಗೆ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.
2 ತಿಂಗಳ ಕಾಲ ಪ್ರದರ್ಶನ
ಚಿಕ್ಕಮೇಳದ ತಿರುಗಾಟ ಪ್ರತಿ ಸಂಜೆ 6ರಿಂದ ರಾತ್ರಿ 11.30ರ ವರೆಗೆ ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ ಪರಿಸರದಲ್ಲಿ ಪೂರ್ವ ಸೂಚನೆಯಂತೆ ಮನೆ ಮನೆಗೆ ತೆರಳಿ 5-10 ನಿಮಿಷಗಳ ಪೌರಾಣಿಕ ಕಥಾಭಾಗದ ಆಖ್ಯಾನವನ್ನು ಹಾಡುಗಾರಿಕೆ, ಕುಣಿತ, ಅರ್ಥಗಾರಿಕೆಯೊಂದಿಗೆ ಸುಮಾರು 2 ತಿಂಗಳ ಕಾಲ ಪ್ರದರ್ಶನ ನೀಡಲಿದೆ. ಕುಶಾಲಪ್ಪ ಗೌಡ ಅವರ ಸಂಯೋಜನೆಯ ಚಿಕ್ಕಮೇಳದ ತಿರುಗಾಟ ದಲ್ಲಿ ಹಾಡುಗಾರಿಕೆಯಲ್ಲಿ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಮೃದಂಗದಲ್ಲಿ ಸರಪಾಡಿ ಚಂದ್ರಶೇಖರ, ಪಾತ್ರವರ್ಗದಲ್ಲಿ ರಾಘವೇಂದ್ರ ಪೇತ್ರಿ, ಮುರಳೀಧರ ಕನ್ನಡಿಕಟ್ಟೆ ಮತ್ತು ಸತೀಶ ನೀರ್ಕೆರೆ ಹಾಗೂ ಅವಿನಾಶ್ ಶೆಟ್ಟಿ ಧರ್ಮಸ್ಥಳ ಸಹಕರಿಸಲಿದ್ದಾರೆ. ತಿರುಗಾಟದ ಪ್ರಾರಂಭದ ಗಣಪತಿ ಸ್ತುತಿಯಲ್ಲಿ ಧರ್ಮಸ್ಥಳ ಯಕ್ಷಗಾನ ಮೇಳದ ವ್ಯವಸ್ಥಾಪಕ ಗಿರೀಶ ಹೆಗ್ಡೆ, ನರೇಂದ್ರ ಕುಮಾರ್, ವೆಂಕಟರಮಣ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.