ಉಜಿರೆ ಟಿ.ಬಿ. ಆಸ್ಪತ್ರೆ ಕ್ವಾರಂಟೈನ್ ಕೇಂದ್ರ; ಬೆಳ್ತಂಗಡಿ ಶಾಸಕರ ಮಾದರಿ ಪ್ರಯತ್ನ
Team Udayavani, Jul 14, 2020, 11:31 AM IST
ಹರೀಶ್ ಪೂಂಜ ಆಸ್ಪತ್ರೆಯಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
ಬೆಳ್ತಂಗಡಿ: ತಾಲೂಕಿನ ವ್ಯಕ್ತಿಗಳಲ್ಲಿ ಕೋವಿಡ್ ಲಕ್ಷಣ ಕಂಡುಬಂದಲ್ಲಿ ಅವರ ಆರೋಗ್ಯ ರಕ್ಷಣೆಗೆ ಉಜಿರೆ ಹಳೆಪೇಟೆ ಬಳಿಯ ಟಿ.ಬಿ. ಆಸ್ಪತ್ರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ನೆರವಿನಿಂದ ಸಿದ್ಧಪಡಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಧರ್ಮಸ್ಥಳದ ಅಂಗ ಸಂಸ್ಥೆಯಾದ ಲಾೖಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಹಳೇ ಕ್ಷಯ ರೋಗ ಆಸ್ಪತ್ರೆಗೆ ರವಿವಾರ ಕೋವಿಡ್ ಸೋಂಕು ದೃಢ ಪಟ್ಟರೂ ಗುಣಲಕ್ಷಣವಿಲ್ಲದೇ ಆರೋಗ್ಯವಾಗಿರುವ 6 ಮಂದಿಯನ್ನು ಸ್ಥಳಾಂತರಿಸಿ ಬಳಿಕ ಮಾತನಾಡಿದರು. ಆರೋಗ್ಯ ಸೇವಾ ನಿರತರಿಗೂ ಕೋವಿಡ್ ಬಂದಿರುವುದು ಆತಂಕಕಾರಿ ವಿಷಯ. ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣ ಬಂದವರಿಗೆ ಬೇರೆಯೆ ವಾಸ್ತವ್ಯಕ್ಕೆ ವ್ಯವಸ್ಥೆ ಮತ್ತು ಚಿಕಿತ್ಸೆ ನೀಡಲು ಚಿಂತಿಸಿದ್ದು ಅದಕ್ಕಾಗಿ ನಾನು ಮತ್ತು ಜಿಲ್ಲಾಡಳಿತ ಡಾ| ಹೆಗ್ಗಡೆಯವರಲ್ಲಿ ಲಾೖಲದ ಹಳೆ ಕ್ಷಯ ಆಸ್ಪತ್ರೆಯನ್ನು ನೀಡುವಂತೆ ವಿನಂತಿಸಿದ್ದೆ. ಅದಕ್ಕೆ ಅವರು ಒಪ್ಪಿದ್ದಾರೆ. ಇಲ್ಲಿ 159 ಮಂದಿಗೆ ಉತ್ತಮವಾದ ಸೌಕರ್ಯದೊಂದಿಗೆ ಚಿಕಿತ್ಸೆ ನೀಡಬಹುದಾಗಿದೆ. ಊಟ, ಉಪಾಹಾರದ ವ್ಯವಸ್ಥೆಯನ್ನು ಡಾ| ಹೆಗ್ಗಡೆಯವರೇ ಭರಿಸುತ್ತಿದ್ದಾರೆ. 10 ದಿನಗಳ ಬಳಿಕ ಸ್ವಂತ ಖರ್ಚಿನಲ್ಲಿ ಮತ್ತೂಮ್ಮೆ ಗಂಟಲ ಮಾದರಿ ಪರೀಕ್ಷೆ ನಡೆಸಿ ಸಂಪೂರ್ಣ ಗುಣಮುಖರಾಗುವವರೆಗೆ 14 ದಿನ ಕ್ವಾರಂಟೈನ್ ಸೌಲಭ್ಯ ನೀಡಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.