ಚಂಪಾಷಷ್ಠಿ ಮಹೋತ್ಸವಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸಜ್ಜು
Team Udayavani, Nov 29, 2019, 4:00 AM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಡಿ. 1 ಮತ್ತು 2ರಂದು ನಡೆಯುವ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸಿದ್ಧತೆಗಳನ್ನು ಪರಿಶೀಲಿಸಿ ಮಾರ್ಗದರ್ಶನಗಳನ್ನು ನೀಡಿದರೆ, ಕ್ಷೇತ್ರದ ಆಡಳಿತಾಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿ ರೂಪಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸಂಬಂಧಿಸಿದ ಎಲ್ಲ ಇಲಾಖೆಗಳೂ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕುಮಾರಧಾರೆಯಿಂದ ದೇವಸ್ಥಾನದ ತನಕ ಬೀದಿ ಮಡೆಸ್ನಾನ (ಉರುಳು ಸೇವೆ) ಆರಂಭಗೊಂಡಿದ್ದು. ಬೆಳಗ್ಗೆ ಮತ್ತು ಸಂಜೆ ಭಕ್ತರು ಹರಕೆ ಪೂರೈಸುತ್ತಿದ್ದಾರೆ. ಸೇವಾರ್ಥಿಗಳ ಸುರಕ್ಷೆಗಾಗಿ ಅಲ್ಲಲ್ಲಿ ಸೂಚನ ಫಲಕಗಳನ್ನು ಅಳವಡಿಸುವ ಮೂಲಕ ವಾಹನಗಳನ್ನು ನಿಧಾನವಾಗಿ ಎಚ್ಚರದಿಂದ ಚಲಾಯಿಸುವಂತೆ ಸೂಚಿಸಲಾಗಿದೆ. ರಾತ್ರಿ ಹೊತ್ತು ಬೀದಿಗಳಲ್ಲಿ ಹ್ಯಾಲೋಜಿನ್ ದೀಪ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುವರಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಭೋಜನ ವ್ಯವಸ್ಥೆ, ಸ್ವಯಂಸೇವಕರು ಇತ್ಯಾದಿ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡಿವೆ.
ಬೀದಿ ಮಡೆಸ್ನಾನ ನಡೆಸುವ ವೇಳೆ ಭಕ್ತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.
ರಿಕ್ಷಾ ಚಾಲಕರಿಗೆ ಮನವಿ
ಪಾದಚಾರಿಗಳಿಗೆ ಮತ್ತು ಉರುಳು ಸೇವೆ ಸಲ್ಲಿಸುವವರಿಗೆ ಅನುಕೂಲವಾಗಲು ಅಟೋ ರಿಕ್ಷಾಗಳು ನಗರದೊಳಗಡೆ ಬಾಡಿಗೆ ನಡೆಸದೆ ಸಹಕರಿಸುವಂತೆ ಸುಬ್ರಹ್ಮಣ್ಯ ಪಿಎಸ್‌ಐ ಓಮನ ಮನವಿ ಮಾಡಿದ್ದಾರೆ.
ಬಿಗಿ ಭದ್ರತೆ
ಭದ್ರತೆಗಾಗಿ ದೇವಸ್ಥಾನದ ಒಳ ಹೊರಗೆ ಈಗಾಗಲೇ 90 ಕೆಮರಾಗಳಿದ್ದು, ಹೆಚ್ಚುವರಿ ಯಾಗಿ 67 ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಕುಮಾರಧಾರೆಯ ಬಳಿ ಪೊಲೀಸ್ ಇಲಾಖೆ ಸಿಸಿ ಕೆಮರಾಗಳನ್ನು ಅಳವಡಿಸಿದೆ. ಹೆಚ್ಚುವರಿ ಪೊಲೀಸರನ್ನು ನಿಯೋ ಜಿಸಲು ಸೂಚಿಸಲಾಗಿದೆ.
ಪಾರ್ಕಿಂಗ್ ಸೌಲಭ್ಯ; ಉಚಿತ ಬಸ್
ಪಂಜ, ಕಡಬ ಧರ್ಮಸ್ಥಳ, ಗುಂಡ್ಯ ಮಾರ್ಗವಾಗಿ ಮತ್ತು ಧರ್ಮಸ್ಥಳ ಮಾರ್ಗವಾಗಿ ಬರುವ ಬಸ್‌ಗಳಿಗೆ ಕುಮಾರಧಾರೆಯ ಬಳಿ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು ಅಲ್ಲಿಂದ ದೇವಸ್ಥಾನದ ವರೆಗೆ ಉಚಿತ ಬಸ್ ಇರುತ್ತದೆ. ಲಘು ವಾಹನಗಳಿಗೆ ಕುಮಾರಧಾರಾ ಹೆಲಿಪ್ಯಾಡ್ ಮೈದಾನ, ಜೂ. ಕಾಲೇಜು ಮೈದಾನದಲ್ಲಿ, ದ್ವಿಚಕ್ರ ವಾಹನಗಳಿಗೆ ಸೀನಿಯರ್ ಕಾಲೇಜು, ಪೊಲೀಸ್ ಕವಾಯತು ಮೈದಾನದಲ್ಲಿ, ಸುಳ್ಯ ಕಡೆಯಿಂದ ಬರುವ ಬಸ್‌ಗಳಿಗೆ ಸವಾರಿ ಮಂಟಪದ ಬಳಿ ಮತ್ತು ಇತರ ಲಘು ವಾಹನಗಳಿಗೆ ಇಂಜಾಡಿ ಬಳಿ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.
ಜಾತ್ರೆಯ ಯಶಸ್ವಿ ನಿರ್ವಹಣೆಗೆ ಸರ್ವ ಸಿದ್ಧತೆಗಳಾಗಿವೆ. ಭಕ್ತರ ಅನುಕೂಲತೆಗೆ ಆದ್ಯತೆ ನೀಡಿದ್ದೇವೆ. ವಿವಿಧ ಇಲಾಖೆಗಳ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ.
– ರೂಪಾ, ಅಪರ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.