ಉಗ್ರರಾರು, ಜನಸಾಮಾನ್ಯರಾರು – ತಿಳಿಯುವುದೇ ಕಷ್ಟ

Team Udayavani, Aug 22, 2021, 6:00 AM IST

ಉಗ್ರರಾರು, ಜನಸಾಮಾನ್ಯರಾರು – ತಿಳಿಯುವುದೇ ಕಷ್ಟ

ಬೆಳ್ತಂಗಡಿ: ಜೀವನ ನಿರ್ವಹಣೆಗೆ ಬೇಕಾದ ಎಲ್ಲವೂ ಅಫ್ಘಾನಿಸ್ಥಾನದಲ್ಲಿದೆ. ಆದರೆ ಮತೀಯ ಚಿಂತನೆ ಯಿಂದ ಹೊರಬರಲಾಗದೆ ಆ ದೇಶ ಬಡವಾಗಿದೆ. ಅಮೆರಿಕದ ಸೇನೆ ಆ ದೇಶವನ್ನು ತೊರೆಯುವ ಮುನ್ನ 3.40 ಲಕ್ಷ ಅಫ್ಘಾನ್‌ ಸೈನಿಕರನ್ನು ಸಿದ್ಧಪಡಿಸಿ ಮೂಲಸೌಕರ್ಯ, ಶಸ್ತ್ರಾಸ್ತ್ರ ಒದಗಿಸಿದೆ.

ಹೀಗೆಂದು ಅಲ್ಲಿನ ವಾಸ್ತವದ ಚಿತ್ರಣ ಬಿಚ್ಚಿಟ್ಟವರು ಆಮೆರಿಕ ವಾಯು ನೆಲೆಯ ಹಝಮತ್‌ (Hazmat)) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ಜೂನ್‌ನಲ್ಲಿ ಮರಳಿದ ಬೆಳ್ತಂಗಡಿ ತಾಲೂಕಿನ ಕೊಕ್ಕಡದವರಾದ ಉಮೇಶ್‌ ಬಾರ್ಯ.

2007 ಕತಾರ್‌ನಲ್ಲಿ ಕ್ಯಾಟರಿಂಗ್‌ ಸಪೋರ್ಟರ್‌ ಆಗಿದ್ದ ಉಮೇಶ್‌ 2011ರಲ್ಲಿ ಅಮೆರಿಕ ವಾಯು ನೆಲೆಯ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಲೇವಾರಿ ಮಾಡುವಂತ ಹಝÕಮತ್‌ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಅಮೆರಿಕದ ಸೇನೆ ಕಳೆದ ಮೂರು ತಿಂಗಳ ಹಿಂದೆಯೇ ಅಫ್ಘಾನ್‌ ತೊರೆಯುವ ಮುನ್ಸೂಚನೆ ನೀಡಿದ್ದು, ಅಲ್ಲಿದ ತನ್ನೆಲ್ಲ ಪರಿಕರಗಳನ್ನು ವಿಲೇವಾರಿ ಮಾಡಲು ಮುಂದಾಗಿತ್ತು. ಕಂಪೆನಿಯಲ್ಲಿದ್ದ ಸಾವಿರಾರು ವಿದೇಶೀ ಸಿಬಂದಿಗಳನ್ನು ಅವರ ದೇಶಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿತ್ತು. ಅದರಂತೆ ಉಮೇಶ್‌ ಜೂ. 2ರಂದು ಮರಳಿದ್ದರು.

ಪಾಕಿಸ್ಥಾನ ವಜಿರಿಸ್ಥಾನ ಮೂಲ :

ಅಫ್ಘಾನ್‌ನ ಬಾಗ್ರಾಂ ಅಂತಾರಾಷ್ಟ್ರೀಯ ವಾಯು ನೆಲೆಯ 35 ಕಿ.ಮೀ. ವ್ಯಾಪ್ತಿಯಲ್ಲಿ 20 ಅಡಿ ಎತ್ತರದ ಕಾಂಕ್ರೀಟ್‌ ಬೇಲಿ ನಿರ್ಮಿಸಿ ಅಮೆರಿಕ ಸೇನಾ ನೆಲೆಯನ್ನು  ಸ್ಥಾಪಿಸಿದ್ದಲ್ಲದೆ ಉಗ್ರರನ್ನು ಸದೆಬಡಿಯುವಲ್ಲಿ ಕಾರ್ಯ ಪ್ರವೃತ್ತವಾಗಿತ್ತು. ಆದರೆ ಅಲ್ಲಿನ ಜನ ಅಮೆರಿಕ ಸೈನಿಕರಿಗೆ ಬೆಂಬಲ ನೀಡುತ್ತಿರಲಿಲ್ಲ. ಪಾಕಿಸ್ಥಾನ ಗಡಿಯ ವಜಿರಿಸ್ಥಾನ್‌ ಸಹಿತ ಕಂದಹಾರ್‌, ಗಝಿ°, ಕಾಬೂಲ್‌ನಲ್ಲಿ ಉಗ್ರರ ಚಟುವಟಿಕೆಗಳು ಮಿತಿ ಮೀರಿ ನಡೆಯುತ್ತಿದ್ದವು. ಅಲ್ಲಿ ಉಗ್ರರು ಯಾರು, ಸಾಮಾನ್ಯರು ಯಾರು ಎಂಬುದನ್ನು ಪತ್ತೆಹಚ್ಚುವುದೇ ಸವಾಲಾಗಿತ್ತು.

ಬಾಗ್ರಾಂ ವಾಯುನೆಲೆಯಲ್ಲಿ ಅಮೆರಿಕದ 12,000 ಸೈನಿಕರಿದ್ದರು. ಅವರೆಲ್ಲ ಮರಳುತ್ತಿದ್ದಂತೆ ಉಗ್ರರು ಪೂರ್ತಿಯಾಗಿ ದೇಶವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ  ಎಂದು ವಾಸ್ತವ ತೆರೆದಿಟ್ಟಿದ್ದಾರೆ ಉಮೇಶ್‌.

ಇಬ್ಬಗೆ ನೀತಿ :

ಅಲ್ಲಿ 2 ರೀತಿಯ ವ್ಯಕ್ತಿಗಳಿದ್ದಾರೆ. ಅವರದೇ ಸರಕಾರ ಬೇಕು ಎನ್ನುವವರು ಕೆಲವರಾದರೆ ಬೇಡ ಎನ್ನುವವರು ಮತ್ತೆ ಕೆಲವರು. ತಾಲಿಬಾನಿಗಳು ಮೂಲ ನಿವಾಸಿಗಳ ಬಡತನವನ್ನೇ ದಾಳವಾಗಿಸಿಕೊಂಡು ಅವರ ಮನಃ ಪರಿವರ್ತಿಸಿ ಅಮೆರಿಕ ಸೈನಿಕರನ್ನು ಹೇಗಾದರೂ ಓಡಿಸಬೇಕೆಂಬ ಚಿಂತನೆ ತುಂಬಿ ಸ್ಥಳೀಯರಿಂದ ದಾಳಿ ಮಾಡಿ ಸುತ್ತಿದ್ದರು. ನಾನು ಬರುವ 15 ದಿನಕ್ಕೆ ಮುನ್ನ ಜಲಲಾಬಾದ್‌ನಲ್ಲಿ ಪತ್ರಿಕಾ ಕಚೇರಿಗೆ ದಾಳಿ ಮಾಡಿ ಮೂವರು ಮಹಿಳಾ ಸಿಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು ಎನ್ನುತ್ತಾರವರು.

ಮಿಲಿಟರಿ ಮೇಲೆ ಮಕ್ಕಳಿಂದ ಬಾಂಬ್‌! :

ಪ್ರತೀ 10 ಕಿ.ಮೀ. ಅಂತರದಲ್ಲಿ ಅಮೆರಿಕ ಸೇನೆಯ ತುಕಡಿಗಳಿದ್ದವು. ನಾನು ವಾಹನದಲ್ಲಿ ಸುತ್ತಾಡುವಾಗ ಸ್ಥಳೀಯ ಮಕ್ಕಳು ಮಿಲಿಟರಿ ಸಿಬಂದಿಯ ಮೇಲೆ ಬಾಂಬ್‌ ಎಸೆಯುವುದನ್ನು ಕಂಡಿದ್ದೇನೆ. ಅದೊಂದು ಯುದ್ಧಭೂಮಿ ಇದ್ದಂತೆ; ಯಾವಾಗ ಏನಾಗುತ್ತದೆ ಎನ್ನಲಸಾಧ್ಯ. ಮಹಿಳೆಯರು ಕೇವಲ ವಂಶಾಭಿವೃದ್ಧಿಯ ವಸ್ತುಗಳಷ್ಟೇ, ಅವರ ಭಾವನೆಗಳಿಗೆ ಬೆಲೆಯೇ ಇಲ್ಲ. 2014ರಲ್ಲಿ ಸ್ಥಳೀಯ ಮಹಿಳಾ ಶಾಲೆಯ ನೀರಿನ ಟ್ಯಾಂಕ್‌ ಒಂದಕ್ಕೆ ವಿಷ ಹಾಕಿ ಅನೇಕ ಮಕ್ಕಳನ್ನು ಕೊಂದು ಹಾಕಿದ ದೃಶ್ಯವನ್ನು ಕಂಡಿದ್ದೇನೆ  ಎಂದರು ಉಮೇಶ್‌.

ಭಾರತವೇ ಸ್ವರ್ಗ :

ಭಾರತವೇ ಸ್ವರ್ಗ; ಅಫ್ಘಾನ್‌ ನರಕ ಸ್ವರೂಪ. ಅಲ್ಲಿನ ಮಂದಿ ಶಿಸ್ತು ಏನೆಂಬುದೇ ಅರಿವಿಲ್ಲದ ಅನಾಗರಿಕರು. ಅವರನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಅಮೆರಿಕ ಸೈನ್ಯವು ಹಿಂದೆ ಸರಿದಿದೆ. ನನ್ನ ಜತೆಗೆ ಕೆಲಸ ಮಾಡುತ್ತಿದ್ದ ಕೆಲವು ಸ್ನೇಹಿತರು ಈಗಲೂ ಅಲ್ಲಿದ್ದಾರೆ.ಉಮೇಶ್‌ ಬಾರ್ಯ

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.