ವಿದ್ಯುತ್‌ ಕಂಬಗಳಲ್ಲಿ ಅನಧಿಕೃತ ಫ್ಲೆಕ್ಸ್‌

ಪ್ರಾಣಪಕ್ಷಿ ಹಾರಿದ ಬಳಿಕ ಕ್ರಮ? ;ಜವಾಬ್ದಾರಿಯುತ ನಾಗರಿಕನೂ ಹೊಣೆ

Team Udayavani, Nov 11, 2022, 9:12 AM IST

4

ಬೆಳ್ತಂಗಡಿ: ಕಾರ್ಯಕ್ರಮಗಳ ಪ್ರಚಾರದ ಅಮಲಿನಲ್ಲಿ ಯುವಕರನ್ನು ಬಳಸಿಕೊಂಡು ರಾತ್ರಿ ಹಗಲೆನ್ನದೆ ಅಳವಡಿಸುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳಿಂದಾಗಿ ಅತ್ತ ಅಮಾಯಕರ ಜೀವ ತೆರುವ ಸಂದರ್ಭಗಳು ಎದುರಾಗುತ್ತಿದೆ. ವಿದ್ಯುತ್‌ ಕಂಬ, ಪರಿವರ್ತಕಗಳ ಅಪಾಯದ ಮಟ್ಟವನ್ನು ತಿಳಿಯದೆ ಕಟೌಟ್‌ಗಳು ಎಲ್ಲೆಂದರಲ್ಲಿ ಅಳವಡಿಸುತ್ತಿರುವುದು ಕಂಡು ಬಂದರೂ ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸುತ್ತಿರುವ ಪರಿಣಾಮ ಅವಘಡಗಳು ಸಂಭವಿಸುತ್ತಿವೆ.

ನಿಯಮದಂತೆ ಪೇಟೆ, ಪಟ್ಟಣಗಳ ವ್ಯಾಪ್ತಿಯಲ್ಲಿ ರಸ್ತೆ, ಫುಟ್‌ಪಾತ್‌ ಸಹಿತ ಜನಸಂಚಾರಕ್ಕೆ ಅಡ್ಡಿಯಾಗುವಂತ ಸ್ಥಳದಲ್ಲಿ ಫ್ಲೆಕ್ಸ್‌ ಕಟ್ಟುವಂತಿಲ್ಲ. ಮೆಸ್ಕಾಂ ಇಲಾಖೆ ನಿಯಮದಂತೆ ವಿದ್ಯುತ್‌ ಪರಿವರ್ತಕ, ವಿದ್ಯುತ್‌ ಕಂಬಗಳಿಗೆ ಯಾವುದೇ ನಿಯಮ ಬಾಹಿರ ಬಂಟಿಂಗ್ಸ್‌ ಕಟ್ಟುವಂತಿಲ್ಲ. ಕೇವಲ ಟಿ.ವಿ.ಕೇಬಲ್‌ ಗಳಿಗಷ್ಟೆ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿ ನಿಯಮ ಗಾಳಿಗೆ ತೂರಿ ಅನಧಿಕೃತ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಪ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಸಂತೆಕಟ್ಟೆ, ಅಯ್ಯಪ್ಪಗುಡಿ, ಬಸ್‌ ನಿಲ್ದಾಣದ ಆಯ್ದ ಸ್ಥಳದಲ್ಲಿ ಮಾತ್ರ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಹಾಕಲು ಅನುಮತಿ ನೀಡಲಾಗುತ್ತದೆ. ಆದರೆ ರಸ್ತೆಯುದ್ದಕ್ಕೂ ಸಿಕ್ಕ ಸಿಕ್ಕಲ್ಲಿ ಅಳವಡಿಸುತ್ತಿರುವುದು ಮಾಮೂಲಿಯಾಗಿದೆ. ಮತ್ತೂಂದೆಡೆ ವಿದ್ಯುತ್‌ ಕಂಬಗಳಲ್ಲಿ ಅಳವಡಿಸಿದ ಬ್ಯಾನರ್‌ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿದ್ದುದರಿಂದ ಇಂತಹ ಪ್ರಕರಣ ಹೆಚ್ಚಾಗುತ್ತಿದೆ.

ಈ ನಡುವೆ ಅನುಮತಿ ಇಲ್ಲದೆ ಇರುವ ಫ್ಲೆಕ್ಸ್‌ ತೆರವುಗೊಳಿಸುವಲ್ಲಿ ಸ್ಥಳೀಯಾಡಳಿತಗಳು ಆಸಕ್ತಿ ವಹಿಸದ ಪರಿಣಾಮ ದಿನೇ ದಿನೇ ಅವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೂಂದೆಡೆ ಪ್ಲಾಸ್ಟಿಕ್‌ ಬಂಟಿಂಗ್ಸ್‌, ಬ್ಯಾನರ್ಸ್‌ ಅಳವಡಿಸಬಾರದೆಂಬ ನಿಯಮಿವಿದ್ದರು ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಈ ವಿಚಾರ ಪ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿದ್ದರೂ ಯಾವುದೇ ಮಹತ್ವದ ಕಾರ್ಯ ಆಗುತ್ತಿಲ್ಲ.

ಪ.ಪಂ. ನಿಯಮದಂತೆ ಫ್ಲೆಕ್ಸ್‌ ಅಳವಡಿಸಿದ ಅನಂತರ 7 ದಿವಸಗಳ ಕಾಲವಕಾಶವಿದೆ. ಜತೆಗೆ ನಿರ್ದಿಷ್ಟವಾಗಿ ಸೂಚಿಸಿದ ಸ್ಥಳದಲ್ಲೆ ಬ್ಯಾನರ್‌ ಅಳವಡಿಸಬೇಕೆಂದಿದೆ. ಇದನ್ನು ನೋಡುವ ಜವಾಬ್ದಾರಿ ಪ.ಪಂ.ನದ್ದಾಗಿದೆ. ಸಣ್ಣಪುಟ್ಟ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಇದ್ದರೆ ದಂಡ ವಿಧಿಸುವ ಅಧಿಕಾರಿಗಳು ಇಂತಹಾ ವ್ಯವಸ್ಥೆಗೆ ಕಾನೂನು ಕ್ರಮ ಇಲ್ಲವೇ ಎಂಬುದು ಪ್ರಶ್ನೆಯಾಗಿದೆ. ಇಲ್ಲಿ ಕೇವಲ ಪ.ಪಂ. ಮೆಸ್ಕಾಂ ಹೊಣೆಯಾಗುವುದಿಲ್ಲ, ನಮ್ಮದೇ ನಿಯಮ ನಾವೇ ಗಾಳಿಗೆ ತೂರಿದರೆ ಬೇಲಿಯೇ ಎದ್ದು ಹೊಲ ಮೇದಂತೆ. ಹಾಗಾಗಿ ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಬೇಕಾಗಿದೆ.

ಬ್ಯಾನರ್‌ ತೆರವಿಗೆ ಕ್ರಮ: ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಅಯ್ಯಪ್ಪಗುಡಿ, ಸಂತೆಕಟ್ಟೆ, ಬಸ್‌ ನಿಲ್ದಾಣಗಳಲ್ಲಿ ಫ್ಲೆಕ್ಸ್‌ ಅಳವಡಿಸಲು ಅವಕಾಶವಿದೆ. ಈಗಾಗಲೆ ಅನಧಿಕೃತ ಬ್ಯಾನರ್‌ ತೆರವಿಗೆ ಕ್ರಮವಹಿಸಲಾಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ದಿಷ್ಟ ಸ್ಥಳವನ್ನು ಗುರುತಿಸಿ ನಿರ್ಣಯ ಕೈಗೊಳ್ಳಲಾಗುವುದು. –ರಾಜೇಶ್‌ ಕೆ., ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ, ಬೆಳ್ತಂಗಡಿ

ಕಾನೂನು ಕ್ರಮ ಕೈಗೊಳ್ಳಲಾಗುವುದು: ನಿಯಮಬಾಹಿರವಾಗಿ ವಿದ್ಯುತ್‌ ಕಂಬಗಳಿಗೆ ಫ್ಲೆಕ್ಸ್‌ ಅಳವಡಿಸುತ್ತಿದ್ದಾರೆ. ಅನೇಕ ಬಾರಿ ಕ್ರಮ ಕೈಗೊಳ್ಳಲಾಗಿದ್ದರೂ ಅದೇ ಸ್ಥಿತಿ ಇದೆ. ಟಿ.ವಿ.ಕೇಬಲ್‌ ಹೊರತುಪಡಿಸಿ ಬೇರೆ ಯಾವುದನ್ನು ವಿದ್ಯುತ್‌ ಕಂಬಗಳಿಗೆ ಅಳವಡಿಸಲು ಅವಕಾವಿಲ್ಲ. ಕಾನೂನು ಕ್ರಮ ಕೈಗೊಳ್ಳಲಾಗುವುದು. –ಶಿವಶಂಕರ್‌, ಎಇಇ, ಮೆಸ್ಕಾಂ ಇಲಾಖೆ, ಬೆಳ್ತಂಗಡಿ

 ತಡೆಬೇಲಿ ಹಾಕಬೇಕು: ಮೆಸ್ಕಾಂ ವಿದ್ಯುತ್‌ ಪರಿವರ್ತಕ ಇರುವಲ್ಲಿ ತಡೆಬೇಲಿ ಹಾಕಬೇಕು. ಆದರೆ ಇಲ್ಲಿ ಪಾಲಿಸದೆ ಇರುವುದರಿಂದ ಈ ರೀತಿಯ ದುರ್ಘ‌ಟನೆ ಸಂಭವಿಸುತ್ತಿದೆ. ಅನಧಿಕೃತ ಬ್ಯಾನರ್‌ ಅಳವಡಿಸಿದರೆ ಶಿಸ್ತು ಕ್ರಮ ಅಳವಡಿಸಬೇಕು. ಇದಕ್ಕೆ ಮೆಸ್ಕಾಂ ಇಲಾಖೆ ಹಾಗೂ ನ.ಪಂ. ನೇರ ಹೊಣೆಯಾಗಿದೆ. –ಜಗದೀಶ್‌ , ಸದಸ್ಯ ನ.ಪಂ. ಬೆಳ್ತಂಗಡಿ

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

Sonu Sood: ನನಗೆ ಸಿಎಂ, ಡಿಸಿಎಂ ಆಗುವ ಆಫರ್ ಬಂದಿತ್ತು ಆದರೆ.. ನಟ ಸೋನು ಸೂದ್ ಹೇಳಿದ್ದೇನು?

Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?

ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

courts-s

Belthangady: ಬೈಕ್‌ ಸವಾರ ಸಾವು ಪ್ರಕರಣ; ಸರಕಾರಿ ಬಸ್‌ ಚಾಲಕನಿಗೆ ಶಿಕ್ಷೆ;ದಂಡ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

Sonu Sood: ನನಗೆ ಸಿಎಂ, ಡಿಸಿಎಂ ಆಗುವ ಆಫರ್ ಬಂದಿತ್ತು ಆದರೆ.. ನಟ ಸೋನು ಸೂದ್ ಹೇಳಿದ್ದೇನು?

Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.