ಉದ್ಘಾಟನೆಗೊಂಡು ತಿಂಗಳಾದರೂ ಕಾಮಗಾರಿ ಇನ್ನೂ ಅಪೂರ್ಣ
ಎಪಿಎಂಸಿ ರೈಲ್ವೇ ಮಾರ್ಗದ ಅಂಡರ್‌ಪಾಸ್ ಕಾಮಗಾರಿ
Team Udayavani, May 19, 2023, 3:10 PM IST
ಪುತ್ತೂರು: ಪುತ್ತೂರು ನಗರದ ಎಪಿಎಂಸಿ ರೈಲ್ವೇ ಅಂಡರ್‌ಪಾಸ್‌ನ ಕಾಮಗಾರಿ ಮುಗಿಯದಿದ್ದರೂ ಚುನಾವಣೆ ಘೋಷಣೆಯ ಕಾರಣದಿಂದ ತರಾತುರಿಯಲ್ಲಿ ಉದ್ಘಾಟನೆಗೊಂಡಿದ್ದು, ಸದ್ಯ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಬಹುವರ್ಷದ ಬೇಡಿಕೆಯಾಗಿದ್ದ ಎಪಿಎಂಸಿ ರೈಲ್ವೇ ಮಾರ್ಗದ ಅಂಡರ್‌ಪಾಸ್ ಕಾಮಗಾರಿ ಉದ್ಘಾಟನೆಗೊಂಡು ತಿಂಗಳು ಕಳೆದಿದೆ. ಆದರೆ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಇದರಿಂದ ವಾಹನ ಸವಾರರು ಹಳೆಯ ರೈಲ್ವೇ ಗೇಟಿನ ಮಾರ್ಗದಲ್ಲೇ ಸಂಚಾರ ಮುಂದುವರಿಸಿದ್ದಾರೆ.
ಏನಿದು ಯೋಜನೆ
ನಗರದ ಅರುಣಾ ಚಿತ್ರ ಮಂದಿರದ ಬಳಿಯಿಂದ ಸಾಲ್ಮರ ಎಪಿಎಂಸಿ ಮೂಲಕ ಕೇಪುಳು ಸಂಪರ್ಕ ರಸ್ತೆಯಲ್ಲಿ ರೈಲ್ವೇ ಮಾರ್ಗ ಇದ್ದು ಅಲ್ಲಿ ರೈಲು ಹಾದು ಹೋಗುವ ವೇಳೆ ಗೇಟು ಅಳವಡಿಕೆಯಿಂದ ನೂರಾರು ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಕಾಯಬೇಕಾದ ಸ್ಥಿತಿ ಇತ್ತು. ಹಲವು ದಶಕಗಳ ಬೇಡಿಕೆಗೆ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಅವರ ಪ್ರಯತ್ನದ ಫಲವಾಗಿ ರಾಜ್ಯ ಸರಕಾರ ಹಾಗೂ ರೈಲ್ವೇ ಇಲಾಖೆಯ ಸಹಭಾಗಿತ್ವದಲ್ಲಿ 13 ಕೋ.ರೂ. ವೆಚ್ಚದ ಅಂಡರ್‌ಪಾಸ್ ನಿರ್ಮಾಣಕ್ಕೆ 2022ರ ಮೇ 21ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು.
ಅಪೂರ್ಣ ಕಾಮಗಾರಿಯ ಉದ್ಘಾಟನೆ
ರೈಲ್ವೇ ರಸ್ತೆಯ ಅಂಡರ್‌ಪಾಸ್ ಕಾಮಗಾರಿಗೆ 10 ತಿಂಗಳು ಕಾಲಾವಕಾಶ ನೀಡಲಾಗಿತ್ತು. ವಿಧಾನಸಭಾ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ (ಮಾ. 26) ಉದ್ಘಾಟನೆ ನಡೆಸಲಾಗಿತ್ತು. ಸುಮಾರು 600 ಮೀಟರ್ ಉದ್ದದ ಈ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲಾಗಿತ್ತಾದರೂ, ಉದ್ಘಾಟನೆಯ ಸಮಯದಲ್ಲಿ ದ್ವಿಪಥ ರಸ್ತೆಗೆ ಜಲ್ಲಿ ಹಾಕಿಬಿಡಲಾಗಿತ್ತು. ಪ್ರಸ್ತುತ ಕಾಮಗಾರಿ ನಡೆಯುತ್ತಿದೆ. ಚತುಷ್ಪಥದ ರಸ್ತೆಯಲ್ಲಿ ದ್ವಿಪಥ ಮಾರ್ಗ ತೆರೆದುಕೊಂಡಿದ್ದು ವಾಹನ ಸಂಚಾರಕ್ಕೆ ಅವಕಾಶ ಇದೆಯೋ ಅನ್ನುವುದನ್ನು ರೈಲ್ವೇ ಇಲಾಖೆ ಇನ್ನೂ ಸ್ಪಷ್ಟಪಡಿಸದ ಕಾರಣ ವಾಹನ ಸವಾರರು ಹಳೆ ಮಾರ್ಗದಲ್ಲೇ ಸಂಚಾರ ಮುಂದುವರಿಸಿದ್ದಾರೆ.
ಖಾಸಗಿ ಜಾಗ
ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅಂಡರ್ ಪಾಸ್ ಸಮೀಪ ಖಾಸಗಿ ಜಾಗ ಸ್ವಾಧೀನ ಪ್ರಕ್ರಿಯೆ ನಡೆ ಯಬೇಕಾಗಿದೆ. ಜಾಗದ ಮಾಲಕರು ತಕ್ಕ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದ್ದು ಇದು ಸರಕಾರದ ಹಂತದಲ್ಲಿ ತೀರ್ಮಾನವಾಗಬೇಕಿದ್ದು , ಕಾಮಗಾರಿ ನಡೆಯದೆ ಉಳಿದುಕೊಂಡಿದೆ. ಇದರಿಂದ ಸದ್ಯ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ.
ಅನುದಾನ ಬಾಕಿ
ರೈಲ್ವೇ ಇಲಾಖೆ ಹಾಗೂ ಕರ್ನಾಟಕ ಸರಕಾರ ಶೇ. 50ರ ಒಪ್ಪಂದದಲ್ಲಿ ಕಾಮಗಾರಿಯನ್ನು ಮುಂದುವರಿಸುವ ಒಪ್ಪಂದ ಮಾಡಿಕೊಂಡಿದ್ದು, ಕಾಮಗಾರಿ ಪೂರ್ಣವಾಗಿದ್ದರೂ, 2023ರ ಫೆ. 1ರ ವರೆಗೆ ಕರ್ನಾಟಕ ಸರಕಾರದಿಂದ ಬರಬೇಕಾಗಿದ್ದ ಶೇ.50 ಅನುದಾನ ಬಾಕಿ ಉಳಿದಿದೆ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದ ಮಾಹಿತಿಗೆ ರೈಲ್ವೇ ಇಲಾಖೆ ಮಾಹಿತಿ ನೀಡಿತ್ತು.
ಪೂರ್ಣಗೊಂಡ ಬಳಿಕವೇ ಉದ್ಘಾಟನೆಯಾಗಲಿ
ಕಾಮಗಾರಿ ಪೂರ್ಣವಾಗದೆ ಅಂಡರ್ ಪಾಸ್ ಉದ್ಘಾಟನೆ ಮಾಡಿದ್ದರಿಂದ ಎಲ್ಲರಿಗೂ ರಸ್ತೆ ತೆರೆದುಕೊಂಡಿದೆ ಎಂಬ ಸಂದೇಶ ಹೋಗಿದೆ. ಯಾವುದೇ ಕೆಲಸ ಪೂರ್ಣಗೊಂಡ ಬಳಿಕವಷ್ಟೇ ಉದ್ಘಾಟನೆ ಆಗಬೇಕು.
-ದಿನೇಶ್ ಪೂಜಾರಿ,
ವಾಹನ ಸವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
Sullia: ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
Puttur: ಬಸ್ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ
Guttigaru: ಕಮರಿಗೆ ಉರುಳಿದ ಕಾರು; ಗಾಯ
Kadaba ಕೋಡಿಂಬಾಳ ಮರಬಿದ್ದು ವ್ಯಕ್ತಿ ಸಾವು ಪ್ರಕರಣ: 2 ದಿನವಾದರೂ ಸ್ಥಳ ಬಿಟ್ಟು ಕದಲದ ಕೋಳಿ!
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.