ಅವೈಜ್ಞಾನಿಕ ರಸ್ತೆ: ನಿರಂತರ ಅಪಘಾತ
ಪುತ್ತೂರು-ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ
Team Udayavani, May 14, 2019, 5:45 AM IST
ಸವಣೂರು: ಪುತ್ತೂರು- ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ-100ರಲ್ಲಿ ಬರುವ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿನ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ನಿರಂತರ ವಾಹನ ಅಪಘಾತಗಳು ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆ ತತ್‌ಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
20 ಮೀ. ರಸ್ತೆಯೂ ಕಾಣುವುದಿಲ್ಲ
ಪುತ್ತೂರು ಕಡೆಯಿಂದ ಬರುವ ವಾಹನಗಳ ಸವಾರರಿಗೆ ಭಕ್ತಕೋಡಿ ಪಶು ಚಿಕಿತ್ಸಾಲಯದ ಬಳಿ ಬಂದಾಗ ಸವಣೂರು ಕಡೆಯಿಂದ ಬರುವ ವಾಹನಗಳು ಕಾಣಿಸುವುದೇ ಇಲ್ಲ. ಅದೇ ರೀತಿ ಸವಣೂರು ಕಡೆಯಿಂದ ಬರುವ ವಾಹನಗಳು ಪುತ್ತೂರು ಕಡೆಯಿಂದ ಬರುವ ವಾಹನಗಳಿಗೆ ಕಾಣಿಸುವುದಿಲ್ಲ. ಇಲ್ಲಿ ರಸ್ತೆ ನೇರವಾಗಿದ್ದರೂ ಕೂಡ 20 ಮೀ. ಅಂತರದಲ್ಲಿ ಎದುರು- ಬದುರು ಬರುವ ವಾಹನಗಳು ಕಾಣಿಸದಷ್ಟು ರಸ್ತೆ ಎತ್ತರವಾಗಿದೆ.
ಚಾಲಕರ ಅತಿಯಾದ ವೇಗ ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೆ ಇದೆ ಸ್ಥಳದಲ್ಲಿ ಸರಕಾರಿ ಹಿ.ಪ್ರಾ. ಶಾಲೆ ಇದ್ದು, ಮಕ್ಕಳು ರಸ್ತೆ ದಾಟಲು ಭಯ ಪಡುವಂತಾಗಿದೆ. ಪಾಲೆತ್ತಗುರಿ ಕಾಲನಿ ಹಾಗೂ ದೋಳ ರಸ್ತೆಗಳಿಗೆ ಇದೇ ಸ್ಥಳದಲ್ಲಿ ತಿರುವು ತೆಗೆದುಕೊಳ್ಳಬೇಕಾಗಿರುವುದರಿಂದ ಮುಖ್ಯ ರಸ್ತೆಯಲ್ಲಿ ಅತೀ ವೇಗವಾಗಿ ಸಂಚರಿಸುವ ವಾಹನಗಳಿಂದ ಅಪಘಾತಕ್ಕೆ ಕಾರಣವಾಗುತ್ತಿವೆ.
ಎರಡು ತಿಂಗಳಲ್ಲಿ ನಾಲ್ಕು ಅಪಘಾತ
ಕಳೆದ 2 ತಿಂಗಳಲ್ಲಿ ಇಲ್ಲಿ ನಾಲ್ಕು ವಾಹನ ಅಪಘಾತಗಳಾಗಿವೆ. ಯಾವುದೇ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಆದರೆ ಪ್ರತಿನಿತ್ಯ ಇಲ್ಲಿ ವಾಹನ ಸವಾರರು ಅಪಘಾತದ ಭಯದಿಂದ ಸಂಚರಿಸುವ ವಾತಾವರಣ ಇದೆ. ಪೊಲೀಸ್ ಠಾಣೆಯಲ್ಲಿ ದಾಖಲಾಗುವಂತಹ ಗಂಭೀರ ಅಪಘಾತ ನಡೆಯುವ ಮೊದಲು ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಭಕ್ತಕೋಡಿ ಸರಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಎಸ್.ಡಿ. ಹೇಳಿದ್ದಾರೆ.
ಇದೇ ರೀತಿ ಪುರುಷರಕಟ್ಟೆ ಹಾಗೂ ಗಡಿಪಿಲ ಎನ್ನುವ ಸ್ಥಳಗಳಲ್ಲಿ ರಸ್ತೆಗಳು ಎದುರು ಬದುರು ಬರುವ ವಾಹನಗಳ ಚಾಲಕರಿಗೆ ಕಾಣದಂತೆ ಇದ್ದ ಅವೈಜ್ಞಾನಿಕ ಉಬ್ಬುಗಳನ್ನು ಸಮತಟ್ಟು ಮಾಡಿ ವಾಹನ ಸವಾರರಿಗೆ ಆಗುತ್ತಿದ್ದ ಸಮಸ್ಯೆಗಳನ್ನು ಲೋಕೋಪಯೋಗಿ ಇಲಾಖೆ ಕಳೆದ ವರ್ಷ ನಿವಾರಿಸಿತ್ತು.
ಇದೇ ರೀತಿ ಭಕ್ತಕೋಡಿ ಹಾಗೂ ಮಾಂತೂರು ಅಂಬೇಡ್ಕರ್ ಭವನದ ಮುಂಭಾಗ ಇರುವ ಅವೈಜ್ಞಾನಿಕ ರಸ್ತೆಗಳ ದುರಸ್ತಿ ಶೀಘ್ರಗತಿಯಲ್ಲಿ ಮಾಡಲು ಇಲಾಖೆ ಮುಂದಾದರೆ ಸಾರ್ವಜನಿಕರ, ವಾಹನ ಸವಾರರ ನಿತ್ಯ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ.
ಸಮಸ್ಯೆ ಬಗೆಹರಿಸಿದ ಪಿಡಬ್ಲ್ಯೂಡಿ
ಇದೇ ರೀತಿ ಪುರುಷರಕಟ್ಟೆ ಹಾಗೂ ಗಡಿಪಿಲ ಎನ್ನುವ ಸ್ಥಳಗಳಲ್ಲಿ ರಸ್ತೆಗಳು ಎದುರು ಬದುರು ಬರುವ ವಾಹನಗಳ ಚಾಲಕರಿಗೆ ಕಾಣದಂತೆ ಇದ್ದ ಅವೈಜ್ಞಾನಿಕ ಉಬ್ಬುಗಳನ್ನು ಸಮತಟ್ಟು ಮಾಡಿ ವಾಹನ ಸವಾರರಿಗೆ ಆಗುತ್ತಿದ್ದ ಸಮಸ್ಯೆಗಳನ್ನು ಲೋಕೋಪಯೋಗಿ ಇಲಾಖೆ ಕಳೆದ ವರ್ಷ ನಿವಾರಿಸಿತ್ತು. ಇದೇ ರೀತಿ ಭಕ್ತಕೋಡಿ ಹಾಗೂ ಮಾಂತೂರು ಅಂಬೇಡ್ಕರ್ ಭವನದ ಮುಂಭಾಗ ಇರುವ ಅವೈಜ್ಞಾನಿಕ ರಸ್ತೆಗಳ ದುರಸ್ತಿ ಶೀಘ್ರಗತಿಯಲ್ಲಿ ಮಾಡಲು ಇಲಾಖೆ ಮುಂದಾದರೆ ಸಾರ್ವಜನಿಕರ, ವಾಹನ ಸವಾರರ ನಿತ್ಯ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.