Uppinangady: ಸಂಪೂರ್ಣ ಬತ್ತಿದ ಬಿಸಿ ನೀರ ಚಿಲುಮೆ
Team Udayavani, Apr 14, 2023, 6:05 AM IST
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆಯು ಈ ಬಾರಿಯ ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋಗಿದ್ದು, ನೀರಿನ ಅಂಶವೇ ಇಲ್ಲದಂತೆ ಒಣಗಿ ಹೋಗಿದೆ.
ಸರಿ ಸುಮಾರು 36.6 ಡಿಗ್ರಿ ಉಷ್ಣಾಂಶವನ್ನು ಹೊಂದಿದ್ದ ಇಲ್ಲಿನ ಬಿಸಿ ನೀರ ಚಿಲುಮೆಯು ಚರ್ಮರೋಗ ನಿವಾರಕ ಗುಣವನ್ನು ಹೊಂದಿದ್ದು ಇಲ್ಲಿ ಸ್ನಾನ ಮಾಡುವುದರಿಂದ ಬಹಳಷ್ಟು ಬಗೆಯ ಚರ್ಮ ವ್ಯಾಧಿಗಳು ಗುಣವಾಗುತ್ತಿದ್ದವು. ಬಹಳಷ್ಟು ಮಂದಿ ಇಲ್ಲಿನ ನೀರನ್ನು ಕ್ಯಾನ್‌ಗಳಲ್ಲಿ ತುಂಬಿಸಿ ಕೊಡೊಯ್ಯುತ್ತಿದ್ದರು.
ಸ್ಥಳೀಯ ನಿವಾಸಿ ಮಹಮ್ಮದ್ ಹೇಳುವಂತೆ ಈ ಪರಿಯಲ್ಲಿ ಬತ್ತಿರುವುದು ಇದೇ ಮೊದಲು. 4 ವರ್ಷದ ಹಿಂದೆ ಬತ್ತಿತ್ತಾದರೂ ಕೆರೆಯಲ್ಲಿ ನೀರಿನ ಅಂಶ ಗೋಚರಿಸುತ್ತಿತ್ತು. ಆದರೆ ಈ ಬಾರಿ ಸಂಪೂರ್ಣ ಒಣಗಿ ಹೋದಂತಾಗಿದ್ದು, ನೀರೇ ಇಲ್ಲದ ಸ್ಥಳವೇನೋ ಎಂಬಂತೆ ತೋರುತ್ತಿದೆ. ಸತತ ಬಿಸಿಲ ಝಳ ದಿಂದ ಪರಿಸರದೆಲ್ಲೆಡೆ ಜಲ ಮೂಲಗಳು ಬತ್ತುತ್ತಿರುವುದರ ಮಧ್ಯೆ ಪ್ರಾಕೃತಿಕ
ಸೋಜಿಗವನ್ನು ಮೂಡಿಸಿರುವ ಇಂತಹ ಬಿಸಿ ನೀರ ಚಿಲುಮೆಗಳು ಬತ್ತಲಾರಂಭಿ ಸಿದ್ದು, ಈ ಬಾರಿಯ ಬೇಸಗೆ ಹೇಗೋ ಎಂಬ ಭೀತಿ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.