ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆ ದುರಸ್ತಿ ಕಳಪೆ: ದೂರು
Team Udayavani, Mar 21, 2019, 6:03 AM IST
ಉಪ್ಪಿನಂಗಡಿ : ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯ ನೂಜಿ ತನಕ 2 ಕಿ.ಮೀ. ಉದ್ದಕ್ಕೆ ದುರಸ್ತಿ, ತೇಪೆ ಡಾಂಬರು ಕಾಮಗಾರಿ ನಡೆಯುತ್ತಿದ್ದು, ಇದು ಅತ್ಯಂತ ಕಳಪೆಯಾಗಿ ನಡೆಯುತ್ತಿದೆ ಎನ್ನುವ ದೂರು ಗ್ರಾಮಸ್ಥರಿಂದ ಕೇಳಿಬಂದಿದೆ.
ಉಪ್ಪಿನಂಗಡಿ-ಹಿರೇಬಂಡಾಡಿ ರಸ್ತೆಯಲ್ಲಿ ನೂಜಿ ತನಕ 2 ಕಿ.ಮೀ. ರಸ್ತೆ ದುರಸ್ತಿಗೆ ಪ್ರಾಕೃತಿಕ ವಿಕೋಪ, ಮಳೆ ಹಾನಿ ಅನುದಾನದ ಅಡಿಯಲ್ಲಿ 28 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಅದರ ಡಾಮರು ಕಾಮಗಾರಿ ಆರಂಭವಾಗಿದೆ. ಆದರೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಕಾಟಾಚಾರಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಮಗಾರಿ ತೀರಾ ಬೇಜವಾಬ್ದಾರಿತನದಿಂದ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.
ರಸ್ತೆಯಲ್ಲಿ ಈಗಾಗಲೇ ಇದ್ದ ಹೊಂಡಗಳನ್ನು ಮುಚ್ಚಿ ಅದರ ಮೇಲೆ ಡಾಮರು ಹಾಕಲಾಗಿದೆ. ಬಹುತೇಕ ಕಡೆಗಳಲ್ಲಿ ಈ ಹಿಂದೆ ಇದ್ದ ಹೊಂಡಗಳನ್ನು ಸರಿಯಾಗಿ ಮುಚ್ಚದೆ ಡಾಮರು ಸುರಿಯಲಾಗಿದ್ದು, ಹೊಂಡ ಇನ್ನೂ ಅರ್ಧ ಕಾಣುವಂತಿದೆ. ರಸ್ತೆಯ ಬದಿಯಲ್ಲಿ ಸುರಿದ ಡಾಮರನ್ನು ಸಮತಟ್ಟು ಮಾಡಿಲ್ಲ. ಹೀಗಾಗಿ ಭಾರೀ ಉಬ್ಬು, ತಗ್ಗು ಕಂಡುಬರುತ್ತಿದ್ದು, ವಾಹನ ಸವಾರಿಗೆ ಸಮಸ್ಯೆಯಾಗುತ್ತಿದೆ. ನಿರ್ದಿಷ್ಟ ದಪ್ಪಕ್ಕಿಂತ ಕಡಿಮೆ ಪ್ರಮಾಣದ ಡಾಮರು ಹಾಕಿರುವುದು ಕಂಡುಬರುತ್ತಿದೆ. ಕೈಯಲ್ಲಿ ಮುಟ್ಟಿದರೆ ಕಿತ್ತು ಬರುವಂತಿದೆ. ಈ ಡಾಮರು ಮಳೆಗಾಲದ ತನಕವೂ ಉಳಿಯಲಿಕ್ಕಿಲ್ಲ. ಮತ್ತೆ ಹೊಂಡಗಳಲ್ಲಿ ಸವಾರಿಯೇ ಗತಿಯಾಗಲಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.
ಮೊದಲ ಮಳೆಗೇ ಹಾನಿ ಆಗಬಹುದೇ?
ಮಳೆಹಾನಿ ಅನುದಾನದಿಂದ ಕಾಮಗಾರಿ ನಡೆಯುತ್ತಿದ್ದು, ಡಾಮರು ಆದ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಕಳಪೆ ಕಾಮಗಾರಿಯ ದರ್ಶನವಾಗುತ್ತಿದೆ. ಮೊದಲ ಮಳೆಗೇ ಡಾಮರು ಕೊಚ್ಚಿ ಹೋಗಬಹುದೇ? ಎನ್ನುವ ಪ್ರಶ್ನೆಗಳು ಕೇಳಿಬರಲಾರಂಭಿಸಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಗಮನ ಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪರಿಶೀಲನೆ ನಡೆಸುವೆ
ಈ ರಸ್ತೆ ತೀರಾ ಇಕ್ಕಟ್ಟಾಗಿರು ವುದರಿಂದಾಗಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕಾಮಗಾರಿ ನಡೆಯುತ್ತಿದ್ದಂತೆಯೇ ವಾಹನಗಳು ಓಡಾಡುತ್ತಿದ್ದು, ಇಲ್ಲಿ ಇದೊಂದು ಸಮಸ್ಯೆ ಇದೆ. ಹೀಗಾಗಿ ಡಾಮರು ಕಿತ್ತು ಹೋಗಿರಬಹುದು. ಅದಾಗ್ಯೂ ಕಳಪೆ ಆಗಿದ್ದಲ್ಲಿ ಪರಿಶೀಲನೆ ನಡೆಸಿ ಸರಿಪಡಿಸಲು ಸೂಚಿಸುತ್ತೇನೆ.
- ಸಂದೀಪ್
ಜಿ.ಪಂ. ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.