Uppinangady: ಪ್ರವಾಸಿ ಮಂದಿರ ಜಾಗದಲ್ಲಿ ಬಸ್ ನಿಲ್ದಾಣ?
ಉಪ್ಪಿನಂಗಡಿಯ ಹೆದ್ದಾರಿ ಪಕ್ಕದಲ್ಲೇ ಪಾಳುಬಿದ್ದ ಸ್ಥಿತಿಯಲ್ಲಿದೆ ಹಿಂದಿನ ವೈಭವದ ಕಟ್ಟಡ
Team Udayavani, Jan 6, 2025, 1:00 PM IST
ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಗಾಂಧಿ ಪಾರ್ಕ್ ಪಕ್ಕದಲ್ಲೇ ಇರುವ ಪ್ರವಾಸಿ ಮಂದಿರ ಕಟ್ಟಡ ಯಾರೂ ಹೇಳುವವರು, ಕೇಳುವವರು ಇಲ್ಲದೆ ಪಾಳುಬಿದ್ದು ಹೋಗಿದೆ, ಅದರ ಪರಿಕರಗಳು, ಛಾವಣಿಗೆಲ್ಲ ಗೆದ್ದಲು ಹಿಡಿದಿದೆ.
ಶಿರಾಡಿ ಘಾಟಿಯಿಂದ ಇಳಿದ ಬಳಿಕ ಸಿಗುವ ಮೊದಲ ಪ್ರವಾಸಿ ಮಂದಿರ ಇದಾಗಿದ್ದು, ಹಿಂದೆ ಭಾರೀ ಜನಾಕರ್ಷಣೆ ಹೊಂದಿತ್ತು. ಮಂತ್ರಿಮಹೋದರರ ಸಹಿತ ಹತ್ತು ಹಲವು ಉನ್ನತ ಮಟ್ಟದ ಅಧಿಕಾರಿಗಳ ವಾಸದ ಕೇಂದ್ರವಾ ಗಿತ್ತು. ಈಗ ಪ್ರವಾಸೋದ್ಯಮ ಇಲಾಖೆಯಡಿ ಮತ್ತು ಖಾಸಗಿ ವಲಯದಲ್ಲಿ ಉತ್ತಮ ಸೌಲಭ್ಯಗಳಿರುವ ಹೊಟೇಲ್, ವಸತಿ ಕಟ್ಟಡಗಳು ಹೆಚ್ಚಾಗಿರುವುದರಿಂದ ಪ್ರವಾಸಿ ಮಂದಿರ ಬಳಕೆ ಮಾಡದೆ ಪಾಳುಬಿದ್ದಿದೆ. ಅಚ್ಚರಿ ಎಂದರೆ, ಅತ್ಯಂತ ಪ್ರಮುಖ ಜಾಗದಲ್ಲಿರುವ ಈ ಕಟ್ಟಡವನ್ನು ಬೇರೆ ಉದ್ದೇಶಕ್ಕೂ ಬಳಕೆ ಮಾಡುತ್ತಿಲ್ಲ. ಅದರ ಸುತ್ತ ಇರುವ ಒಂದು ಎಕ್ರೆ 50 ಸೆಂಟ್ಸ್ ಜಾಗವನ್ನು ಬಳಸುವುದಕ್ಕೆ ಅವಕಾಶವಿದ್ದರೂ ಯಾರೂ ಅದರ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ.
ಬಸ್ ನಿಲ್ದಾಣವಾಗಿ ಬಳಸಲು ಪ್ರಯತ್ನ
ಈ ಜಾಗ ಪುತ್ತೂರು ತಾಲೂಕು ಪಂಚಾಯತ್ ಅಧೀನದಲ್ಲಿದೆ. ಯಾರೂ ಬಳಕೆ ಮಾಡದ ಈ ಒಂದು ಎಕ್ರೆ 50 ಸೆಂಟ್ ಜಾಗವನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು 10 ವರ್ಷಗಳಿಂದಲೂ ಪ್ರಯತ್ನ ನಡೆಯುತ್ತಿದೆ. ಆದರೆ ಅದಕ್ಕಿನ್ನೂ ಕಾಲ ಕೂಡಿಬಂದಿಲ್ಲ.
ಈಗ ಗ್ರಾಪಂ ಅಧೀನದಲ್ಲಿರುವ ಜಾಗದಿಂದ ಖಾಸಗಿ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ಗಳು ಸ್ಥಳಾಂತ ರಗೊಂಡರೆ ತಮಗೆ ನಷ್ಟವಾಗುವ ಗ್ರಹಿಕೆಯಿಂದ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಪ್ರಯತ್ನಗಳು ಇನ್ನೂ ಸಫಲವಾಗಿಲ್ಲ. ಸಂಸ್ಥೆ ಅಧಿಕಾರಿಗಳಿಗೆ ಈಗಾಗಲೇ ಬಸ್ ನಿಲ್ದಾಣ ಕೊರತೆ ಮನವರಿಕೆಯಾದರೂ ಸ್ವಂತ ಬಸ್‌ನಿಲ್ದಾಣದ ಗೋಜಿಗೆ ಹೋಗದೇ ತಮ್ಮ ಕರ್ತವ್ಯ ಅವಧಿ ಮುಗಿಸುವ ತರಾತುರಿಯಲ್ಲಿದ್ದಾರೆ ಎನ್ನುವುದು ಜನಾಭಿಪ್ರಾಯ.
ಪ್ರವಾಸಿ ಮಂದಿರದ ನಿವೇಶನ ಸಿಕ್ಕರೆ ಶಾಲಾ ಕಾಲೇಜುಗಳ ಐದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಅನುಕೂಲಕರವಾಗಲಿದೆ. ಕಿರಿದಾದ ಬ್ಯಾಂಕ್ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದಾಡಲು ಕಷ್ಟವಾಗುತ್ತಿದೆ. ಇಲ್ಲಿ ಸಾರಿಗೆ ನಿಲ್ದಾಣವಾದರೆ ಪಟ್ಟಣ ಮತ್ತಷ್ಟು ಬೆಳೆಯಲು ಸಾಧ್ಯ.
-ಸುರೇಶ ಅತ್ರಮಜಲು, ಗ್ರಾಪಂ ಹಿರಿಯ ಸದಸ್ಯ.
ಪಂಚಾಯತ್ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಸಂಖ್ಯೆ ಏರಿಕೆಯಿಂದ ಸ್ಥಳಾವಕಾಶ ಕೊರತೆ ಉದ್ಭವಿಸಿದೆ. ಪ್ರವಾಸಿ ಮಂದಿರ ಅಗತ್ಯತೆ ಇಲ್ಲದೆ ಇದ್ದರೆ ಈ ಜಾಗವನ್ನು ಸಾರಿಗೆ ಸಂಸ್ಥೆಗೆ ಒದಗಿಸಲು ಸಚಿವರಲ್ಲಿ ಕೇಳಿಕೊಳ್ಳಲಾಗುವುದು.
-ಡಾ| ರಾಜರಾಮ ಕೆ.ಬಿ., ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು
ಈಗ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ರಾತ್ರಿ ವೇಳೆ ಭದ್ರತೆ ಇಲ್ಲದೆ ಪರದಾಡಬೇಕಾಗಿದೆ. ಉಪ್ಪಿನಂಡಿಗೆ ಸುಸಜ್ಜಿತ ಬಸ್ ನಿಲ್ದಾಣ ಬೇಕು. ಈ ನಿಟ್ಟಿನಲ್ಲಿ ಶಾಸಕರ ಮೂಲಕ ಅಧಿಕಾರಿಗಳನ್ನು ಮನವೊಲಿಸಿ ನಿಲ್ದಾಣ ನಿರ್ಮಿಸುವ ಪ್ರಯತ್ನಗಳು ನಡೆದಿವೆ.
-ಅರ್ತಿಲ ಕೃಷ್ಣರಾವ್, ಶ್ರೀ ಸಹಸ್ರಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರು
-ಎಂ.ಎಸ್. ಭಟ್ ಉಪ್ಪಿನಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
ಜನಾಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪ್ರಜಾಪ್ರಭುತ್ವ ಉಳಿಯದು: ಜಗದೀಪ್ ಧನ್‌ಕರ್
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.