Uppinangady ಕೇರಳ ಲಾಟರಿ 50 ಲಕ್ಷ ರೂ. ಬಹುಮಾನ
Team Udayavani, Sep 28, 2023, 12:55 AM IST
ಉಪ್ಪಿನಂಗಡಿ: ಬಡತನ ವಿದ್ದರೂ ನಿಷ್ಠೆ, ಪ್ರಾಮಾಣಿಕತೆ ಯಿಂದ ದುಡಿದು ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿರುವ ಇಳಂತಿಲ ಗ್ರಾಮದ ಏನ್ಮಾಡಿಯ ಚಂದ್ರಯ್ಯ ಕುಂಬಾರ ಅವರನ್ನು ಕೊನೆಗೂ ಅದೃಷ್ಟ ಲಕ್ಷ್ಮೀ ಕೈ ಹಿಡಿದಿದ್ದು, ಕೇರಳ ರಾಜ್ಯ ಲಾಟರಿ ಯಲ್ಲಿ 50 ಲಕ್ಷ ರೂ. ಗೆದ್ದಿದ್ದಾರೆ.
ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಅವರು ಕಾನತ್ತೂರಿನ ಶ್ರೀ ನಾಲ್ವರ್ ದೈವಸ್ಥಾನ ಕ್ಷೇತ್ರಕ್ಕೆ ಹೋದಾಗ 500 ರೂಪಾಯಿಯ ಓಣಂ ಬಂಪರ್ ಲಾಟರಿ ಟಿಕೇಟ್ ಖರೀದಿಸಿದ್ದರು. ಅದರ ಬಂಪರ್ ಬಹುಮಾನ 25 ಕೋಟಿ ಆಗಿದ್ದು, ಇವರು ಮೂರನೇ ಬಹುಮಾನ ಗೆದ್ದುಕೊಂಡಿದ್ದಾರೆ.
ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡ ಅವರು, ನಾನು ಜನತಾ ಕಾಲನಿಯ 5 ಸೆಂಟ್ಸ್‌ನ ನಿವಾಸಿ.
ಪತ್ನಿ, ನಾಲ್ವರು ಹೆಣ್ಣುಮಕ್ಕಳು. ಇಬ್ಬರನ್ನು ಮದುವೆ ಮಾಡಿಸಿ ಕೊಟ್ಟಿದ್ದೇನೆ. ದೊಡ್ಡವಳು ಪಿಯುಸಿ ತನಕ ಓದಿದ್ದರೆ, ಎರಡನೆಯವಳು ಎಂಬಿಎ ಓದುತ್ತಿದ್ದಾಳೆ. ಇನ್ನಿಬ್ಬರಲ್ಲಿ ಓರ್ವಳು ಮೂರನೇ ವರ್ಷದ ಪದವಿ
ವ್ಯಾಸಂಗ ಮಾಡುತ್ತಿದ್ದು, ಇನ್ನೊಬ್ಟಾಕೆ ಪ್ಯಾರಾಮೆಡಿಕಲ್ ಓದುತ್ತಿದ್ದಾಳೆ. ನಾನೊಬ್ಬನೇ ದುಡಿದು ಸಂಸಾರ ಸಾಗಬೇಕು. ಬಡತನವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಅವಗ ಣಿಸಿಲ್ಲ. ಮಕ್ಕಳ ಮದುವೆ, ಶಿಕ್ಷಣ ಎಂದು 10 ಲಕ್ಷದಷ್ಟು ಸಾಲ ಮಾಡಿ ದ್ದೇನೆ. ಅದನ್ನು ತೀರಿಸಲು ಮೊದಲ ಆದ್ಯತೆ ನೀಡುತ್ತೇನೆ. ನನ್ನ ಕಷ್ಟವನ್ನು ದೇವರು ಅರಿತಿರಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Bantwal: ಬಿ.ಸಿ.ರೋಡ್‌ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
Puttur: ಸಂಚಾರ ದಟ್ಟಣೆ ತಡೆಗೆ ಮಾಸ್ಟರ್ ಪ್ಲ್ಯಾನ್
Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.