ನಾಪತ್ತೆಯಾದ ಉಪ್ಪಿನಂಗಡಿಯ ವ್ಯಕ್ತಿ ಹಿಮಾಚಲ ಪ್ರದೇಶದಲ್ಲಿ ?
Team Udayavani, Sep 23, 2021, 8:40 AM IST
ಉಪ್ಪಿನಂಗಡಿ: ನೆಕ್ಕಿಲಾಡಿಯಿಂದ ನಾಪತ್ತೆಯಾಗಿರುವ ಉತ್ತರ ಪ್ರದೇಶದ ನಿವಾಸಿಯ ಮೊಬೈಲ್ ಸಂಖ್ಯೆ ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳಿವು ಪೊಲೀಸರಿಗೆ ದೊರೆತಿದೆ!
ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಆದರೆ ಬೆಂಗಳೂರಿಗೆ ಎಂದು ಹೋದವ ಅಲ್ಲಿಗೆ ಏಕೆ ಹೋಗಿದ್ದಾನೆ ಅಥವಾ ಮೊಬೈಲ್ ಬೇರೆಯವರಲ್ಲಿ ಇದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಮೂಲತಃ ಉತ್ತರ ಪ್ರದೇಶದ ನಿವಾಸಿ ಎನ್ನಲಾದ ದಾಖಲೆಗಳನ್ನು ಹೊಂದಿದ್ದ 48ರ ಹರೆಯದ ವ್ಯಕ್ತಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋದ ಬಳಿಕ ಜು. 18ರಿಂದ ನಾಪತ್ತೆಯಾಗಿರುವುದಾಗಿ ಆತನ ಪತ್ನಿ ಅಗಸ್ಟ್ ಮೊದಲ ವಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿಗೆ ಸಂಬಂಧಿ ಸಿ ಪೊಲೀಸ್ ತನಿಖೆ ಪ್ರಗತಿಯಲ್ಲಿರುವ ಸಂದರ್ಭ ನಾಪತ್ತೆಯಾದ ವ್ಯಕ್ತಿಯ ಚಹರೆ ದಿಲ್ಲಿಯಲ್ಲಿ ಬಂಧಿನತನಾದ ಭಯೋತ್ಪಾದಕನ ಚಹರೆಯನ್ನೇ ಹೊಂದಿದೆ ಎಂಬ ಸುದ್ದಿ ಹರಡಿ ಉಪ್ಪಿನಂಗಡಿ, ನೆಕ್ಕಿಲಾಡಿ ಪರಿಸರದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಪೊಲೀಸರಿಂದ ತನಿಖೆ:
ನಾಪತ್ತೆಯಾದ ವ್ಯಕ್ತಿಯನ್ನು ಸಂಪರ್ಕಿಸುವ ಹಲವು ಯತ್ನಗಳು ವಿಫಲಗೊಂಡ ಬಳಿಕ ಪೊಲೀಸರು ತಾಂತ್ರಿಕ ಸಲಹೆ ಪಡೆದಾಗ ಆತ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯು ಪ್ರಸ್ತುತ ಹಿಮಾಚಲ ಪ್ರದೇಶದ ಟವರ್ ವ್ಯಾಪ್ತಿಯಲ್ಲಿ ಕಾರ್ಯಾ ಚರಿಸುತ್ತಿರುವುದು ಗೊತ್ತಾಗಿದೆ. ಆತ ತಲೆ ಮರೆಸಿಕೊಳ್ಳುವುದಕ್ಕಾಗಿಯೇ ಅಲ್ಲಿಗೆ ಹೋಗಿದ್ದಾನೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ವಿವರಗಳು ಇನ್ನಷ್ಟೇ ಗೊತ್ತಾಗಬೇಕಾಗಿದೆ.
ಸಾಲಗಾರರ ಕಾಟ ತಪ್ಪಿಸಲು ನಾಟಕ! :
ಭಯೋತ್ಪಾದನ ಚಟುವಟಿಕೆಯಲ್ಲಿ ಬಂಧಿತನಾದರೆ ಆಯಾ ರಾಜ್ಯದ ಗೃಹ ಇಲಾಖೆ ಮೂಲಕ ಸ್ಥಳೀಯ ಪೊಲೀಸರಿಂದ ಪ್ರಾಥಮಿಕ ಮಾಹಿತಿ ಕಲೆ ಹಾಕಿ ವಿಚಾರಣೆ ನಡೆಸಲಾಗುತ್ತದೆ. ಆದರೆ ಈ ತನಕ ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಅಲ್ಲದೆ ನಾಪತ್ತೆಯಾದ ವ್ಯಕ್ತಿ ನೆಕ್ಕಿಲಾಡಿ ಪರಿಸರದಲ್ಲಿ ತಾನು ಪಡೆದ ಸಾಲವನ್ನು ಮರು ಪಾವತಿಸುವುದನ್ನು ತಪ್ಪಿಸುವ ಸಲುವಾಗಿ ತಾನು ತನಿಖಾ ತಂಡದ ವಶವಾಗಿರುವ ಸುದ್ದಿ ಹಬ್ಬಿಸಿರುವ ಶಂಕೆಯೂ ಇದೆ ಎನ್ನಲಾಗುತ್ತಿದೆ. ಈ ಎಲ್ಲ ಕೋನಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು ಹಿಮಾಚಲ ಪ್ರದೇಶದ ಪೊಲೀಸರನ್ನು ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
CIDಗೆ ಹೆಬ್ಬಾಳ್ಕರ್ ಮಾಹಿತಿ: ಶೀಘ್ರ ಸಿ.ಟಿ. ರವಿ ವಿಚಾರಣೆ?
Property; ಸಿರಿ ಸಂಪತ್ತಿನ ಒಡತಿ: ಥಾಯ್ಲೆಂಡ್ ಪ್ರಧಾನಿ ಆಸ್ತಿಯೆಷ್ಟು ಗೊತ್ತೇ?
ಜಗತ್ತಿಗೆ ಭಯ ಮೂಡಿಸಿದ ಹೊಸ ವೈರಸ್; ಕೋವಿಡ್ ಬಳಿಕ ಮತ್ತೊಂದು ವೈರಸ್ ಆತಂಕ
Constitution; ಕೈ ಜೈ ಸಂವಿಧಾನ ಅಭಿಯಾನಕ್ಕೆ ಬಿಜೆಪಿಯಿಂದ ಪ್ರತ್ಯಭಿಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.