ಉಪ್ಪಿನಂಗಡಿ: ಗ್ರಾಮ ಕರಣಿಕರ ಕಚೇರಿ ಕಾರ್ಯಾರಂಭ
Team Udayavani, May 25, 2018, 2:02 PM IST
ಉಪ್ಪಿನಂಗಡಿ: ಸಾರ್ವಜನಿಕ ಸೇವೆಗೆ ಒಳಪಟ್ಟ ಗ್ರಾಮಕರಣಿಕರ ಕಚೇರಿ ಪಂಚಾಯತ್ ಕಟ್ಟಡಕ್ಕೆ ಗುರುವಾರ ಸ್ಥಳಾಂತರಗೊಂಡು ಕಾರ್ಯಾಚರಣೆ ಆರಂಭಿಸಿದೆ. ಎರಡು ವರ್ಷಗಳಿಂದ ಗ್ರಾಮಕರಣಿಕರ ಕಚೇರಿ ಕಂದಾಯ ಇಲಾಖೆಯ ವಸತಿ ಗೃಹದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿತ್ತು.
ಪಂ. ಕಚೇರಿಯ ನಿವೇಶನಕ್ಕೆ ತಾಗಿ ಕೊಂಡು ಇದ್ದ ತೀರಾ ಹಳೆಯ ಕಟ್ಟಡದಲ್ಲಿ ಈ ಕಚೇರಿ ಇತ್ತು. ನೂತನ ಪಂಚಾಯತ್ ಕಟ್ಟಡ ರಚನೆ ವೇಳೆ ಗ್ರಾಮ ಕರಣಿಕರ ಕಚೇರಿಯನ್ನೂ ಕೆಡವಲಾಗಿತ್ತು. ಹೊಸ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ಗ್ರಾಮ ಕರಣಿಕರ ಕಚೇರಿಗಾಗಿ ರಚಿಸಿಕೊಟ್ಟಿದ್ದರೂ ಪೀಠೊಪಕರಣ ಹಾಗೂ ವಿಂಗಡನೆಯ ಸಲಕರಣೆಗಳಿಗೆ ಸರಕಾರದಿಂದ ಯಾವುದೇ ಅನುದಾನ ಬಾರದ ಹಿನ್ನೆಲೆಯಲ್ಲಿ ಈ ಕಚೇರಿ ಕಾರ್ಯಾರಂಭ ಮಾಡಿರಲಿಲ್ಲ. ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್ ಅವರೇ ವಿಶೇಷ ಮುತುವರ್ಜಿ ವಹಿಸಿ, ಸ್ವಂತ ಖರ್ಚಿನಿಂದ ಗ್ರಾಮ ಕರಣಿಕರ ಕಚೇರಿಗೆ ಪೀಠೊಪಕರಣ ಒದಗಿಸಿದ್ದಾರೆ.
ಶಾಲಾ ಕಾಲೇಜುಗಳು ಆರಂಭವಾಗುತ್ತಿದ್ದು, ಮಕ್ಕಳಿಗೆ ಆದಾಯ, ವಾಸ್ತವ್ಯ ಇತ್ಯಾದಿ ದಾಖಲೆ ನೀಡಲು ಗ್ರಾಮ ಕರಣಿಕರ ಕಚೇರಿಯಲ್ಲಿ ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂಬುದನ್ನು ಮನಗಂಡು ಸರಕಾರದ ಅನುದಾನಕ್ಕೆ ಕಾಯದೆ ಪೀಠೊಪಕರಣ ಒದಗಿಸಿದ್ದಾಗಿ ಪಂ. ಅಧ್ಯಕ್ಷರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.