ಧರ್ಮಸ್ಥಳದಲ್ಲಿ ಮಿನಿ ವಿಮಾನ ನಿಲ್ದಾಣ : ಸಚಿವ ಸೋಮಣ್ಣ
1,500 ಫಲಾನುಭವಿಗಳಿಗೆ ಮನೆ ಆದೇಶ ಪತ್ರ ವಿತರಿಸಿ ಸಚಿವ ಸೋಮಣ್ಣ
Team Udayavani, Aug 28, 2022, 1:05 PM IST
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಶಾಸಕ ಹರೀಶ್ ಪೂಂಜ ಅವರ ಬೇಡಿಕೆಯಂತೆ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಇಲಾಖೆಗಳ ಜತೆ ಚರ್ಚಿಸಿ 100 ಎಕರೆ ಜಾಗ ಗುರುತಿಸಲು ಮುಂದಿನ ವಾರದಲ್ಲಿ ಅಧಿಕಾರಿಗಳಿಗೆ ಸೂಚಿಸುವ ಜತೆಗೆ 100 ಕೋ.ರೂ. ಒದಗಿ ಸಲಾಗುವುದು ಎಂದು ರಾಜ್ಯ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಘೋಷಿಸಿದರು.
ಗುರುವಾಯನಕೆರೆಯಲ್ಲಿ ಶನಿ ವಾರ ತಾಲೂಕಿನ 2021-22ನೇ ಸಾಲಿನ ಬಸವ ವಸತಿ, ಅಂಬೇಡ್ಕರ್ ವಸತಿ ಯೋಜನೆಯ 1,500 ಫಲಾನುಭವಿಗಳಿಗೆ ಗೃಹ ನಿರ್ಮಾಣ ಕಾಮಗಾರಿಯ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಭವಿಷ್ಯದ ದೃಷ್ಟಿಯಿಂದ ಧರ್ಮ ಸ್ಥಳಕ್ಕೆ ಎಟಿಆರ್ ಹಾಗೂ 10ರಿಂದ 12 ಆಸನಗಳ ವಿಮಾನ ಇಳಿಯಬಲ್ಲ ನಿಲ್ದಾಣ ಸಹಿತ ಏಕಕಾಲದಲ್ಲಿ 4 ಹೆಲಿಪ್ಯಾಡ್ ನಿರ್ಮಿಸುವ ಕುರಿತು ಯೋಚಿಸಲಾಗಿದೆ. ತತ್‌ಕ್ಷಣ ಡಿಪಿಆರ್ ಸಿದ್ಧಗೊಳಿಸಿ ಕ್ಯಾಬಿನೆಟ್‌ಗೆ ಕಳುಹಿಸುವ ವ್ಯವಸ್ಥೆಯಾಗಲಿದೆ. ರಾಯಚೂರು ವಿಮಾನ ನಿಲ್ದಾಣಕ್ಕೆ ಮುಂದಿನ ತಿಂಗಳು ಶಂಕುಸ್ಥಾಪನೆ ಆಗಲಿದ್ದು, ಡಿಸೆಂಬರ್ ತಿಂಗಳಿನಲ್ಲಿ ಶಿವಮೊಗ್ಗ ನಿಲ್ದಾಣ ಲೋಕಾರ್ಪ ಣೆಯಾಗಲಿದೆ. ಹಾಸನದಲ್ಲಿ ಎರಡನೇ ಹಂತದ ಹಾಗೂ ವಿಜಯಪುರದಲ್ಲಿ ಬೋಯಿಂಗ್ ನಿಲ್ದಾಣವಾಗಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಾರವಾರ, ಆಲಮಟ್ಟಿಯಲ್ಲಿ ಪ್ರವಾಸಿ ಆಕರ್ಷಣೆ ಅನುಕೂಲಕರ ಯೋಜನೆ ರೂಪಿಸಲಾಗಿದೆ ಎಂದರು.
ಹೆಚ್ಚುವರಿ 5,000 ಮನೆಗೆ ಮನವಿ
ಶಾಸಕ ಹರೀಶ್ ಪೂಂಜ ಮಾತನಾಡಿ, ತಾಲೂಕಿನ 1,500 ಮಂದಿಗೆ ಮನೆ ಮಂಜೂರು ಮಾಡುವ ಮೂಲಕ ಸಚಿವರು ಪ್ರತೀ ವ್ಯಕ್ತಿಯ ಉತ್ತಮ ಮನೆ ಮತ್ತು ಉತ್ತಮ ಸಂಸಾರ ಹೊಂದುವ ಅಪೇಕ್ಷೆಯನ್ನು ಈಡೇರಿಸಿದ್ದಾರೆ. ತಾಲೂಕಿಗೆ ಹೆಚ್ಚುವರಿ 5,000 ಮನೆಗಳ ಅಗತ್ಯವಿದ್ದು, ಈ ಕುರಿತು ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಜಿ.ಪಂ. ಸಿಇಒ ಡಾ| ಕುಮಾರ್, ಬೆಳ್ತಂಗಡಿ ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಬೆಂಗಳೂರು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಅರುಣ್ ಕುಮಾರ್ ಹಡಗಲಿ, ತಹಶೀಲ್ದಾರ್ ಪೃಥ್ವಿ ಸಾನಿಕಮ್, ಜಿ.ಪಂ. ವಸತಿ ಯೋಜನೆ ನೋಡೆಲ್ ಅಧಿಕಾರಿ ಎಚ್.ಆರ್. ನಾಯಕ್, ತಾಲೂಕಿನ 48 ಗ್ರಾ.ಪಂ.ಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ತಾ.ಪಂ. ಕಾರ್ಯನಿರ್ವಹಣಾ ಧಿಕಾರಿ ಕುಸುಮಾಧರ ಬಿ. ಸ್ವಾಗತಿಸಿ, ಸಂಯೋಜಕ ಜಯಾನಂದ್ ಲಾೖಲ ವಂದಿಸಿದರು. ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು.
3,160 ಹೆಚ್ಚುವರಿ ಮನೆಗೆ ಆದೇಶ
ತಾಲೂಕಿನ ಮೂಲಸೌಕರ್ಯ ವೃದ್ಧಿಗೆ 10 ಕೋಟಿ ರೂ. ಹೆಚ್ಚಿನ ಅನುದಾನ ನೀಡಲಾಗುವುದು. ತಾಲೂಕಿನ 48 ಪಂಚಾಯತ್‌ಗಳಲ್ಲಿ ಮನೆ ಬೇಕಾಗಿರುವ ಫಲಾನುಭವಿಗಳನ್ನು ತತ್‌ಕ್ಷಣ ಗುರುತಿಸಿ ವರದಿ ನೀಡಬೇಕು ಎಂದ ಸಚಿವರು. 3,160 ಹೆಚ್ಚುವರಿ ಮನೆ ಮಂಜೂರಿಗೆ ಆದೇಶ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.