Venur;ದಾನಕ್ಕೆ ಪ್ರೇರಣೆ ಮಹಾಮಸ್ತಕಾಭಿಷೇಕ: ಡಾ| ಹೆಗ್ಗಡೆ

ಫೆ. 22ರಿಂದ ಮಾ. 01: ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ

Team Udayavani, Jun 25, 2023, 5:19 AM IST

Venur;ದಾನಕ್ಕೆ ಪ್ರೇರಣೆ ಮಹಾಮಸ್ತಕಾಭಿಷೇಕ: ಡಾ| ಹೆಗ್ಗಡೆ

ಬೆಳ್ತಂಗಡಿ: ಲೌಕಿಕ ಕಾರ್ಯದ ಮೂಲಕ ಧರ್ಮ ಪ್ರಚಾರ ನಡೆಸುವ ಜತೆಗೆ ದಾನಕ್ಕೆ ಪ್ರೇರಣೆಯಾಗಿ ಮಹಾಮಸ್ತಕಾಭಿಷೇಕ ನೆರ ವೇರಿಸುತ್ತೇವೆ. ಈ ಬಾರಿ ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕವು 2024ರ ಫೆಬ್ರವರಿ 22ರಿಂದ ಮಾರ್ಚ್‌ 1ರ ವರೆಗೆ ನೆರವೇರಿಲು ನಿಶ್ಚಯಿಸಿದ್ದೇವೆ ಎಂದು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ವೇಣೂರಿನಲ್ಲಿ ಶನಿವಾರ ನಡೆದ ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಶ್ರಾವಕರ ಸಮಾ ಲೋಚನ ಸಭೆಯನ್ನು ಉದ್ಘಾಟಿಸಿದ ಬಳಿಕ ಮಹಾಮಸ್ತಕಾಭಿಷೇಕದ ದಿನಾಂಕ ಪ್ರಕಟಿಸಿ ಅವರು ಮಾತನಾಡಿದರು.

ಜನಮಂಗಲ ಕಾರ್ಯವಾಗಲಿ
ಹಿಂದೆ ಭೂ ಮಸೂದೆ ಕಾಯ್ದೆ ಬಂದಾಗ ಜೈನ ಸಮುದಾಯ ಆರ್ಥಿಕವಾಗಿ ಸಮರ್ಥವಾಗಿರಲಿಲ್ಲ. ಇಂದು ಸಮುದಾಯ ಆರ್ಥಿಕವಾಗಿ ಸಶಕ್ತವಾಗಿದೆ. 9 ದಿನಗಳ ಕಾಲದ ಮಹಾಮಜ್ಜನದಲ್ಲಿ ಯುವ ಸಮು ದಾಯ ಭಾಗವಹಿಸಿ ತನು, ಮನ, ಧನದಿಂದ ಸಹಕರಿಸುವ ಮೂಲಕ ಮಹಾಮಸ್ತಕಾಭಿಷೇಕದೊಂದಿಗೆ ಜನಮಂಗಲ ಕಾರ್ಯವಾಗಬೇಕು ಎಂದು ಹೆಗ್ಗಡೆ ಸಂದೇಶ ನೀಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮಾತನಾಡಿ, “ಅಹಿಂಸಾ ಪರಮೋ ಧರ್ಮ’ ಎಂದು ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಸಮಾಜ ಜೈನರದ್ದು. ಜೈನರು ಕೃಷಿ ಯಿಂದ ವ್ಯಾಪಾರದತ್ತ ಒಲವು ತೋರಿದ್ದರಿಂದ ಯುವಪೀಳಿಗೆಯಲ್ಲಿ ಮಹಾಮಸ್ತಕಾಭಿಷೇಕ ಮಾಡು ವವರ ಸಂಖ್ಯೆ ಹೆಚ್ಚಾಗಿದೆ. ಮಹಾ ಮಸ್ತಕಾಭಿಷೇಕದ ಮೂಲಕ ಜೈನ ಸಮು ದಾಯದ ಸಂಪ್ರದಾಯ ಪ್ರಪಂಚಕ್ಕೆ ತಿಳಿಸುವ ಕಾರ್ಯವಾಗ ಬೇಕು ಎಂದು ಹೇಳಿದರು.
ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಉಪಾ ಧ್ಯಕ್ಷ, ಅಳದಂಗಡಿ ಅರಮನೆ ತಿಮ್ಮಣ್ಣರಸ ರಾದ ಡಾ| ಪದ್ಮಪ್ರಸಾದ್‌ ಅಜಿಲರು ಪ್ರಸ್ತಾವನೆಗೈದರು. ನ್ಯಾಯ ವಾದಿ, ಕಾರ್ಕಳ ಜೈನ ಧರ್ಮ ಜೋರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ವಿಜಯ ಕುಮಾರ್‌ ಸಲಹೆ ನೀಡಿದರು.

ಸಮಾಜದ ಪ್ರಮುಖರು, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ಬಾಹುಬಲಿ ಯುವಜನ ಸಂಘ, ಜೈನ್‌ ಮಿಲನ್‌ ಹಾಗೂ ಬ್ರಾಹ್ಮಿ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿ ನಿರ್ವಹಿಸಿದರು.

ಅಧ್ಯಕ್ಷರಾಗಿ ಡಾ| ಹೆಗ್ಗಡೆ
ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿ ಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಕಾರ್ಯಾಧ್ಯಕ್ಷರಾಗಿ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲ, ಪ್ರಧಾನ ಕಾರ್ಯದರ್ಶಿಯಾಗಿ ವಿ. ಪ್ರವೀಣ್‌ ಕುಮಾರ್‌ ಇಂದ್ರ, ಕೋಶಾಧಿಕಾರಿಯಾಗಿ ಪಿ. ಜಯರಾಜ್‌ ಕಂಬ್ಳಿ ಅವರನ್ನು ಆರಿಸಲಾಯಿತು ಹಾಗೂ 27 ಉಪ ಸಮಿತಿಗಳನ್ನು ರಚಿಸಲಾಯಿತು.

ಜೈನ ಪರಂಪರೆ ಜಗತ್ತಿಗೆ ಪಸರಿಸುವ ಕಾರ್ಯ
12 ವರ್ಷಗಳಿಗೊಮ್ಮೆ ನೆರವೇರುವ ಈ ಮಹಾಮಸ್ತಕಾಭಿಷೇಕದಲ್ಲಿ ಶ್ರಾವಕರು, ಶ್ರಾವಕಿಯರು ಪಾಲ್ಗೊಳ್ಳುವುದರಿಂದ ಮುಂದಿನ 12 ವರ್ಷಗಳ ಕಾಲ ಸಮಾಜಕ್ಕೆ ದಾನಧರ್ಮ ಮಾಡಲು ಪ್ರೇರಣೆಯಾಗಲಿದೆ. ನೇರ ಪ್ರಸಾರಕ್ಕೆದ ಜತೆಗೆ ಆಧುನಿಕ ಸೌಲಭ್ಯವಾದ ಲೇಸರ್‌ ಶೋ ಪ್ರದರ್ಶನದೊಂದಿಗೆ ಜೈನ ಸಮುದಾಯದ ಪರಂಪರೆ ಜಗತ್ತಿಗೆ ಪಸರಿಸುವ ಮಹಾಮಸ್ತಕಾಭಿಷೇಕ ವೇಣೂರಿನಲ್ಲಾಗಲಿದೆ ಎಂದು ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.

 

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.