ಕುಸಿದ ಮನೆಯಿಂದ ಶಿಥಿಲ ಸರಕಾರಿ ಕಟ್ಟಡಕ್ಕೆ ಸಂತ್ರಸ್ತ ಕುಟುಂಬ ಸ್ಥಳಾಂತರ

Team Udayavani, Sep 17, 2019, 5:26 AM IST

u-31

ಅಂಗವಿಕಲ ಸಹೋದರನ ಆರೈಕೆ ಮಾಡುತ್ತಿರುವ ಗಣೇಶ್‌.

ಬೆಳ್ಳಾರೆ: ಮಳೆಯಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಅಂಗವಿಕಲನಿರುವ ಕುಟುಂಬಕ್ಕೆ ಸ್ಥಳೀಯಾಡಳಿತ ಸೋರುತ್ತಿರುವ ಸರಕಾರಿ ಹಳೆ ಕಟ್ಟಡದಲ್ಲಿ ವಾಸ್ತವ್ಯ ಕಲ್ಪಿಸಿದ ಪರಿಣಾಮ ಇಡೀ ಕುಟುಂಬ ದಿನಿವಿಡೀ ನರಕಯಾತನೆ ಅನುಭವಿಸುವಂತಾಗಿದೆ.

ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಾಟಾಜೆ ಪರಮೇಶ್ವರಿ ಅವರ ಕುಟುಂಬ ಕುಸಿದ ಮನೆಯಿಂದ ಕುಸಿಯುವ ಹಂತದಲ್ಲಿರುವ ಬೆಳ್ಳಾರೆ ಪ್ರಾಥಮಿಕ ಕೇಂದ್ರದ ಹಳೆಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಪಾಡು ಪಡುತ್ತಿದೆ. ಸ್ಥಳಾಂತರಗೊಂಡು 15 ದಿನ ಕಳೆದರೂ ಈ ಕುಟುಂಬಕ್ಕೆ ಸೂರು ಕಲ್ಪಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ.

ಧರಾಶಾಯಿಯಾದ ಮನೆ
ಸುಮಾರು 55 ವರ್ಷ ದಾಟಿರುವ ಪರಮೇಶ್ವರಿ ಅವರು ತನ್ನ ಅಂಗವಿಕಲ ಪುತ್ರ ಬಾಲಕೃಷ್ಣ ಹಾಗೂ ಗಣೇಶ ಅವರೊಂದಿಗೆ ಪಾಟಾಜೆಯಲ್ಲಿ ವಾಸವಾಗಿದ್ದರು. ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಅವರ ಮಣ್ಣಿನ ಇಟ್ಟಿಗೆಯ ಗೋಡೆಯಿಂದ ರಚಿಸಲಾಗಿದ್ದ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಬೀದಿಪಾಲಾದ ಕುಟುಂಬ ಪರಮೇಶ್ವರಿ ಅವರ ಹೆಸರಿನಲ್ಲಿರುವ ಕಾವಿನಮೂಲೆಯ 5 ಸೆಂಟ್ಸ್‌ ಜಾಗದಲ್ಲಿ ಟರ್ಪಾಲು ಹಾಕಿ ರಾತ್ರಿ ದಿನ ಕಳೆದಿತ್ತು. ಈ ಮಾಹಿತಿ ಪಡೆದ ಬೆಳ್ಳಾರೆ ಗ್ರಾ.ಪಂ., ಕುಟುಂಬವನ್ನು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಿತ್ತು.

ಸೋರುತ್ತಿರುವ ಕಟ್ಟಡ
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡ ಬೀಳುವ ಹಂತ ದಲ್ಲಿರುವಾಗಲೇ ಆ ಕಟ್ಟಡಕ್ಕೆ ಪರಮೇಶ್ವರಿ ಅವರ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಹಳೆಯ ಕಟ್ಟಡದ ಒಂದು ಮೂಲೆಯಲ್ಲಿ ಮನೆ ಮಂದಿ ಇರಲು ಅವಕಾಶ ನೀಡ ಲಾಗಿದೆ. ಆ ಕೊಠಡಿಯೊಳಗೆ ಮಳೆಗೆ ನೀರು ನುಗ್ಗುತ್ತಿದ್ದು, ಯಾವುದೇ ಭದ್ರತೆ ಇಲ್ಲ. ಕಿಟಕಿ ಮುರಿದು ಹೋಗಿದೆ. ಶುಚಿತ್ವದ ಕೊರತೆಯಿಂದ ಸೊಳ್ಳೆಗಳು ತುಂಬಿವೆ. ಹೀಗಾಗಿ ಅಂಗವಿಕಲ ಯುವಕನಿರುವ ಕುಟುಂಬಕ್ಕೆ ಬೆಂಕಿಯಿಂದ ಬಾಣಲೆಗೆ ಬಿದ್ದ ಸ್ಥಿತಿ ಉಂಟಾಗಿದೆ.

ಬೀದಿಪಾಲಾದ ಕುಟುಂಬ
ಪರಮೇಶ್ವರಿ ಅವರ ಪತಿ ನಿಧನರಾದ ಬಳಿಕ ಅದೇ ಜಾಗದಲ್ಲಿ ಮಣ್ಣಿನ ಇಟ್ಟಿಗೆಯ ಮನೆ ಕಟ್ಟಿ ಕುಟುಂಬ ಜೀವನ ಸಾಗಿಸುತ್ತಿತ್ತು. ಹಗಲು ಹೊತ್ತಿನಲ್ಲಿ ಭಾರೀ ಮಳೆಗೆ ಮನೆಗೆ ಕುಸಿದು ಬೀಳುತ್ತಿದ್ದಂತೆ ಗಣೇಶ್‌ ಅವರು ಅಂಗವಿಕಲ ಅಣ್ಣನನ್ನು ಎತ್ತಿಕೊಂಡು ಹೊರಗೆ ಬಂದಿದ್ದಾರೆ. ಮನೆಯಲ್ಲಿದ್ದ ಸಾಕು ಪ್ರಾಣಿಗಳು ಮಣ್ಣಿನಡಿಗೆ ಸಿಲುಕಿ ಸತ್ತಿವೆ. ಮನೆಯ ಎಲ್ಲ ಸಾಮಗ್ರಿಗಳು ನಾಶವಾಗಿವೆ ಎಂದು ಅಳಲು ತೋಡಿಕೊಳ್ಳುತ್ತಾರೆ ಮನೆ ಮಂದಿ.

ಪರಿಹಾರ ಸಿಕ್ಕಿಲ್ಲ
ಪರಮೇಶ್ವರಿ ಬೆಳ್ಳಾರೆಯ ಸೊಸೈಟಿಯಲ್ಲಿ ದಿನಗೂಲಿ ನೌಕರೆ. ಹಿರಿಯ ಮಗ ಅಂಗವಿಕಲನಾಗಿದ್ದು, ಸಹೋದರ ಆತನ ಆರೈಕೆಯಲ್ಲಿ ತೊಡಗಿದ್ದಾನೆ. ಮನೆ ಕುಸಿದ ಬಳಿಕ ಗ್ರಾ.ಪಂ.ನವರು ಕುಸಿಯಲು ಸಿದ್ಧವಾಗಿರುವ ಹಳೆಯ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆಯೇ ಹೊರತು ಯಾವುದೇ ಪರಿಹಾರ ನೀಡಿಲ್ಲ ಎಂದು ಪರಮೇಶ್ವರಿ ಹಾಗೂ ಮಗ ಗಣೇಶ್‌ ಕಣ್ಣೀರಿಡುತ್ತಿದ್ದಾರೆ.

ಊಟಕ್ಕೂ ಗತಿಯಿಲ್ಲ
ಇಡೀ ಮನೆ ಕುಸಿದು ನೆಲ ಸಮವಾಗಿದ್ದರೂ ಯೋಗ್ಯವಾದ ವಸತಿ ವ್ಯವಸ್ಥೆ ಕೊಟ್ಟಿಲ್ಲ. ಉಚಿತ ಊಟ, ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇಳಿ ವಯಸ್ಸಿನ ಪರಮೇಶ್ವರಿ ಅವರ ದುಡಿಮೆ ಮಾಡಿ ದಿನಸಿ ತಂದು ಹಸಿವು ನೀಗಿಸಬೇಕು. ಮಳೆ ಬಂದರೆ ಅಡುಗೆ ಮಾಡಲು ಸಾಧ್ಯವಿಲ್ಲದ ಸ್ಥಿತಿ ಇಲ್ಲಿದೆ. ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ವಸತಿ, ಆಹಾರ ವ್ಯವಸ್ಥೆ ಒದಗಿಸುವ ಸರಕಾರದ ಭರವಸೆ ಪಾಲನೆಯಾಗಿಲ್ಲ ಎನ್ನುವುದಕ್ಕೆ ಈ ಕುಟುಂಬವೇ ಪ್ರತ್ಯಕ್ಷ ಸಾಕ್ಷಿ.

ಮನೆ ನಿರ್ಮಾಣಕ್ಕೆ ಪ್ರಯತ್ನ
ಪಂಚಾಯತ್‌ನಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಊಟದ ವ್ಯವಸ್ಥೆಗೆ ಅಕ್ಕಿ ಸಾಮಗ್ರಿಗಳನ್ನು ತಾಲೂಕು ಕಚೇರಿಯಿಂದ ಸಂಗ್ರಹಿಸಿ ನೀಡಿದ್ದೇವೆ. ಶೀಘ್ರದಲ್ಲಿ ನೂತನ ಮನೆ ನಿರ್ಮಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿ ಆಸರೆ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಸಂಘ ಸಂಸ್ಥೆಗಳು ಸಹಕಾರಕ್ಕೆ ಮುಂದಾಗಿದ್ದು, ಅದನ್ನು ಅವರಿಗೆ ತಲುಪಿಸಲಾಗುವುದು.
– ಧನಂಜಯ ಕೆ.ಆರ್‌. ಪಿಡಿಒ, ಬೆಳ್ಳಾರೆ ಗ್ರಾ.ಪಂ.

ಚೆಕ್‌ ವಿತರಿಸಲು ಕ್ರಮ
ಪರಮೇಶ್ವರಿ ಅವರಿಗೆ ಹೊಸ ಮನೆ ಕಟ್ಟಲು ರಾಜೀವ ಗಾಂಧಿ ವಸತಿ ಯೋಜನೆ ಅಡಿ ಚೆಕ್‌ ವಿತರಿಸಲು ಕ್ರಮ ಕೈಗಳ್ಳಲಾಗುವುದು. ಅವರಿಗೆ ಉಳಿದುಕೊಳ್ಳಲು ಪಂಚಾಯತ್‌ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ವ್ಯವಸ್ಥೆಗಳು ಸರಿ ಇಲ್ಲದಿದ್ದಲ್ಲಿ ಪರಶೀಲಿಸಿ ಬೇರೆಡೆ ಸ್ಥಳಾಂತರಿಸಲಾಗುವುದು. ಆಹಾರಕ್ಕೂ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಪಂಚಾಯತ್‌ಗೆ ತಿಳಿಸಿದ್ದೇವೆ.
– ಕುಂಞಿ ಅಹಮ್ಮದ್‌, ತಹಶೀಲ್ದಾರ್‌, ಸುಳ್ಯ

ಉಮೇಶ್‌ ಮಣಿಕ್ಕಾರ

ಟಾಪ್ ನ್ಯೂಸ್

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.