ಬದುಕಿಗೆ ಸಂಸ್ಕಾರದ ಬೇಲಿ ಅಗತ್ಯ: ಸುಬ್ರಹ್ಮಣ್ಯ ಶ್ರೀ
ಕಡಬದಲ್ಲಿ 61ನೇ ವರ್ಷದ ಏಕಾಹ ಭಜನೋತ್ಸವ, ಧಾರ್ಮಿಕ ಸಭೆ
Team Udayavani, Apr 10, 2022, 4:06 AM IST
ಕಡಬ: ಕಠಿನ ಕಟ್ಟುಪಾಡುಗಳಿಲ್ಲದ ಹಿಂದೂ ಧರ್ಮದಲ್ಲಿನ ಸ್ವಾತಂತ್ರ್ಯ ಧರ್ಮದ ಮೇಲಿನ ಶ್ರದ್ಧೆ ಕಡಿಮೆಯಾಗಲು ಕಾರಣವಾಗಬಾರದು. ಸಂಸ್ಕಾರಯುತ ಧಾರ್ಮಿಕ ಪ್ರಜ್ಞೆಯಿಂದ ಮನುಷ್ಯ ಜೀವನಕ್ಕೆ ಅರ್ಥ ಬರಲು ಸಾಧ್ಯ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ಅವರು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 61ನೇ ವರ್ಷದ ಏಕಾಹ ಭಜನೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಂಸ್ಕಾರ ಎನ್ನುವ ಬೇಲಿಯೊಳಗೆ ನಾವು ಬದುಕನ್ನು ರೂಪಿಸಿಕೊಳ್ಳಬೇಕು. ದೇವರ ಮೇಲಿನ ಭಯ ಮತ್ತು ಭಕ್ತಿ ನಮ್ಮನ್ನು ಬದುಕಿನಲ್ಲಿ ತಪ್ಪು ದಾರಿ ತುಳಿಯದಂತೆ ನಿಯಂತ್ರಿಸುತ್ತದೆ. ಧರ್ಮದ ಚೌಕಟ್ಟನ್ನು ಮೀರಿದ ಬದುಕು ಎಂದಿಗೂ ಸರಿದಾರಿಯಲ್ಲಿ ಸಾಗಲು ಸಾಧ್ಯವಿಲ್ಲ. ಆದುದರಿಂದ ನಾವು ಮಕ್ಕಳಲ್ಲಿ ಧಾರ್ಮಿಕ ಚಿಂತನೆಗಳ ಅರಿವು ಮೂಡಿಸಬೇಕು. ಎಳವೆಯಲ್ಲಿಯೇ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸತøಜೆಗಳನ್ನಾಗಿ ರೂಪಿಸುವ ಕೆಲಸ ಮಾಡಬೇಕು ಎಂದರು.
ದೇವರ ಸಾಕ್ಷಾತ್ಕಾರಕ್ಕೆ ಭಜನೆ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಲಿಯುಗದಲ್ಲಿ ದೇವರ ಸಾಕ್ಷಾತ್ಕಾರಕ್ಕೆ ಭಜನೆ ಅತ್ಯುತ್ತಮ ಮಾರ್ಗವಾಗಿದೆ ಎಂದರು. 61 ವರ್ಷಗಳಿಂದ ಏಕಾಹ ಭಜನೆಯನ್ನು ನಿರಂತರವಾಗಿ ವಿಜೃಂಭಣೆಯಿಂದ ಆಯೋಜಿಸುತ್ತಿರುವ ಸಂಘಟಕರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಎಸ್. ಅಂಗಾರ ಶುಭ ಹಾರೈಸಿದರು. ಕಡಬ ಎಸ್‌ಐ ರುಕ್ಮ ನಾಯ್ಕ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಭಜನ ಮಂಡಳಿಯ ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಏಕಾಹ ಭಜನೋತ್ಸವ ಸಮಿತಿಯ ಕಾರ್ಯದರ್ಶಿ ಅಜಿತ್ ರೈ ಆರ್ತಿಲ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ರಾಜ್ಯ ಗುಪ್ತವಾರ್ತೆ ದ.ಕ.ಜಿಲ್ಲಾ ಘಟಕದ ಪ್ರಭಾರ ಸಹಾಯಕ ನಿರ್ದೇಶಕ ಯು.ಬಿ. ನಂದಕುಮಾರ್ ಅವರನ್ನು ಗೌರವಿಸಲಾಯಿತು.
ಏಕಾಹ ಭಜನೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಿ. ಸ್ವಾಗತಿಸಿ, ಭಜನ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.