Vitla ದನ ಅಕ್ರಮ ಸಾಗಾಟ: 2 ಕೇಸು ದಾಖಲು
Team Udayavani, Aug 16, 2023, 11:57 PM IST
ವಿಟ್ಲ: ಅಳಿಕೆ ಗ್ರಾಮದ ಮುಳಿಯದಲ್ಲಿ ಕುದ್ದುಪದವು – ಪೆರುವಾಯಿ ರಸ್ತೆಯಲ್ಲಿ ಪರವಾನಿಗೆ ಇಲ್ಲದೆ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ವಿಟ್ಲ ಪೊಲೀಸರು ಬುಧವಾರ ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಬೈಕ್‌ನಲ್ಲಿ ಬಂದ ಐವರು ಅಡ್ಡಗಟ್ಟಿ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಬಗ್ಗೆಯೂ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮಂಜೇಶ್ವರ ಬಾಕ್ರಬೈಲು ನಿವಾಸಿ ಇಬ್ರಾಹಿಂ ಯಾನೆ ಮೋನು, ಮಂಜೇಶ್ವರ ಬಾಕ್ರಬೈಲು ನಿವಾಸಿ ಮೂಸಾ, ಕನ್ಯಾನ ಗ್ರಾಮದ ನಿವಾಸಿ ಹಮೀದ್ ಯಾನೆ ಜಲಾಲ್, ಸಾಲೆತ್ತೂರಿನ ಹಮೀದ್ ಆರೋಪಿಗಳಾಗಿದ್ದಾರೆ. 5 ಜಾನುವಾರುಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರತಿದೂರು
ಇಬ್ರಾಹಿಂ ಯಾನೆ ಮೋನು, ಹಮೀದ್ ಯಾನೆ ಜಲಾಲ್ ಮತ್ತು ಸಾಲೆತ್ತೂರಿನ ಹಮೀದ್ ಸೇರಿ ನಾಲ್ಕು ಮಂದಿ ಮುಳಿಯ ಎಂಬಲ್ಲಿಂದ 5 ಜಾನುವಾರುಗಳನ್ನು ಖರೀದಿಸಿ, ಗೂಡ್ಸ್ ವಾಹನದಲ್ಲಿ ತುಂಬಿಕೊಂಡು, ಕಜೆ ಎಂಬಲ್ಲಿಗೆ ಸಾಗಾಟ ಮಾಡುತ್ತಿರುವಾಗ ಆ. 16ರಂದು ಮುಂಜಾನೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಮೂರು ಮೋಟಾರು ಸೈಕಲ್ ಮತ್ತು ಒಂದು ಕಾರನ್ನು ರಸ್ತೆಗೆ ಅಡ್ಡವಾಗಿಟ್ಟು ಅಕ್ರಮ ಕೂಟ ಸೇರಿಕೊಂಡು ಗೂಡ್ಸ್ ವಾಹನದಲ್ಲಿದ್ದ ನಾಲ್ವರನ್ನು ಎಳೆದು ಹಾಕಿ ಬೇಸ್ಬಾಲ್ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿದ್ದು, ಜಯ ಪ್ರಶಾಂತ, ಲಕ್ಷ್ಮೀಶ ಮತ್ತು ಮೂರು ಮಂದಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪಾತೂರು ಗ್ರಾಮ ಮಂಜೇಶ್ವರ ನಿವಾಸಿ ಮೂಸಾ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.