ವಿಟ್ಲ: ಕಾಂಗ್ರೆಸ್‌-ಬಿಜೆಪಿ ಜಟಾಪಟಿ


Team Udayavani, Jul 3, 2019, 5:00 AM IST

21

ವಿಟ್ಲ: ವಿಟ್ಲ ಪ.ಪಂ. ಸಭಾಭವನದಲ್ಲಿ ಅಧ್ಯಕ್ಷೆ ದಮಯಂತಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭವಾಯಿತು. ಬಳಿಕ ಯಾವುದೂ ಅರ್ಥವಾಗಲಿಲ್ಲ. ಅಧ್ಯಕ್ಷರ ಮೇಜಿನ ಬಳಿ ಬಂದ ಬಿಜೆಪಿ-ಕಾಂಗ್ರೆಸ್‌ ಸದಸ್ಯರು ಏರು ಸ್ವರದಲ್ಲಿ ಮಾತನಾಡುತ್ತ ಪೈಪೋಟಿ ಪ್ರದರ್ಶನವಾಯಿತು.

ಅಧ್ಯಕ್ಷರು ಅಜೆಂಡವನ್ನು ಸಭೆಗೆ ಓದುತ್ತಿದ್ದಾಗ ಬಿಜೆಪಿ ಸದಸ್ಯ ರಾಮದಾಸ ಶೆಣೈ ಆಕ್ಷೇಪಿಸಿ, ಮಾ. 1ರಂದು ನಡೆದ ಸಾಮಾನ್ಯ ಸಭೆಯ ನಿರ್ಣಯ ನಂ. 257/2018-19ರಲ್ಲಿ 3 ಕಾಮಗಾರಿಗಳ ಟೆಂಡರ್‌ ಮಂಜೂರಾತಿಯನ್ನು ರದ್ದುಪಡಿಸಬೇಕೆಂದು ಪ.ಪಂ. ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು ಸಹಿತ ಒಟ್ಟು 12 ಮಂದಿ ಸದಸ್ಯರು ನಿರ್ಣಯ ಮಾಡಲಾಗಿದೆ. ಸಭೆಯ ಮಂಜೂರಾತಿ ಪಡೆಯದೇ ಟೆಂಡರ್‌ ಕರೆಯಲಾಗಿದೆ. ಆ ಬಗ್ಗೆ ನಿರ್ಣಯ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು. ಅಧ್ಯಕ್ಷೆ ದಮಯಂತಿ ಮಾತನಾಡಿ, ತಿದ್ದುಪಡಿ ಮಾಡ ಲಿಲ್ಲ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಮಂಜೂ ರಾದ ಮತ್ತು ನಿರ್ಣಯ ಕೈಗೊಳ್ಳ ಲಾಗಿದ್ದುದನ್ನೇ ಮುಂದು ವರಿಸಲಾಗಿದೆ. ಹೊಸ ಅನುದಾನವಲ್ಲ ಎಂದರು.

ಆಗ ಮಾಜಿ ಅಧ್ಯಕ್ಷ ಅರುಣ್‌ ಎಂ. ವಿಟ್ಲ, ಸದಸ್ಯರಾದ ರವಿಪ್ರಕಾಶ್‌, ರಾಮದಾಸ ಶೆಣೈ, ಶ್ರೀಕೃಷ್ಣ ವಿಟ್ಲ, ಲೋಕನಾಥ ಶೆಟ್ಟಿ ಕೊಲ್ಯ, ಮಂಜುನಾಥ ಕಲ್ಲಕಟ್ಟ, ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿ, ಹಳೆಯ ನಿರ್ಣಯ ತಿದ್ದುಪಡಿ ಮಾಡಲಾಗಿದೆ. ಅದನ್ನು ಸಭೆಗೆ ತೋರಿಸಬೇಕು ಎಂದು ಆಗ್ರಹಿಸಿದರು.

ಆಗ ಸದಸ್ಯ ಅಶೋಕ್‌ ಕುಮಾರ್‌ ಶೆಟ್ಟಿ, ತನಗೆ ಮಾತನಾ ಡಲು ಅವಕಾಶ ಕೊಡಬೇಕೆಂದರು. ಆಗ ಬಿಜೆಪಿ ಸದಸ್ಯರು ನಿರ್ಣಯ ತೋರಿಸಬೇಕೆಂಬ ನಮ್ಮ ಆಗ್ರಹ ಇತ್ಯರ್ಥ ವಾಗಬೇಕೆಂದರು. ಎಲ್ಲರ ಮಾತು ಏರುಸ್ವರವಾಗಿ ಗದ್ದಲ ತಾರಕಕ್ಕೇರಿತು. ಈ ಸಂದರ್ಭ ಅಧ್ಯಕ್ಷೆ ಇಂದಿನ ಅಜೆಂಡ ಗಳನ್ನು ಮೈಕ್‌ನಲ್ಲಿ ಓದಿ ಹೇಳಿದರು. ನಿರ್ಣಯ ಕೈಗೊಳ್ಳ ಲಾಗಿದೆ ಎಂದು ಘೋಷಿಸುತ್ತ ಹೊರನಡೆದರು.

ಜತೆಗೆ ಕಾಂಗ್ರೆಸ್‌ ಪಕ್ಷದ ಸದಸ್ಯರಾದ ಅಶೋಕ್‌ ಕುಮಾರ್‌ ಶೆಟ್ಟಿ, ಅಬ್ದುಲ್ ರಹಿಮಾನ್‌ ನೆಲ್ಲಿಗುಡ್ಡೆ, ಸುನಿತಾ ಕೋಟ್ಯಾನ್‌, ಲತಾ ಅಶೋಕ್‌, ಅಬೂಬಕ್ಕರ್‌, ನಾಮ ನಿರ್ದೇಶಿತ ಸದಸ್ಯರಾದ ವಿ.ಎಚ್. ಸಮೀರ್‌ ಪಳಿಕೆ, ಪ್ರಭಾಕರ ಭಟ್ ಮಾವೆ ಹಿಂಬಾಲಿಸಿದರು. ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಎಂಜಿನಿಯರ್‌ ಶ್ರೀಧರ್‌, ರತ್ನಾ ಅವರೂ ತೆರಳಿದರು.

ಬಿಜೆಪಿ ಪ್ರತಿಭಟನೆ

ಮಾಜಿ ಅಧ್ಯಕ್ಷ ಅರುಣ್‌ ಎಂ. ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ರವಿಪ್ರಕಾಶ್‌, ರಾಮದಾಸ ಶೆಣೈ, ಶ್ರೀಕೃಷ್ಣ ವಿಟ್ಲ, ಲೋಕನಾಥ ಶೆಟ್ಟಿ ಕೊಲ್ಯ, ಮಂಜುನಾಥ ಕಲ್ಲಕಟ್ಟ, ಉಷಾ ಕೃಷ್ಣಪ್ಪ, ಇಂದಿರಾ ಅಡ್ಡಾಳಿ, ಗೀತಾ ಪುರಂದರ, ಸಂಧ್ಯಾ ಮೋಹನ್‌ ಸಭಾಭವನದಲ್ಲೇ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ಬಳಿಕ ಪ.ಪಂ. ಕಚೇರಿ ಮುಂಭಾಗದಲ್ಲಿ ಕುಳಿತ ಬಿಜೆಪಿ ಸದಸ್ಯರು ಅಧ್ಯಕ್ಷರಿಗೆ ಧಿಕ್ಕಾರ ಕೂಗಲಾರಂ ಭಿಸಿದರು. ಮಾಜಿ ಅಧ್ಯಕ್ಷ ಅರುಣ್‌ ಎಂ. ವಿಟ್ಲ ಮಾತನಾಡಿ, ಕೊಡಂಗೆಯಲ್ಲಿ ಸೋಲಾರ್‌ ದೀಪ ಅಳವಡಿಕೆ, ಬೊಬ್ಬೆಕೇರಿ ಕೋಡಿಯಲ್ಲಿ ದಾರಿ ಅಭಿವೃದ್ಧಿ ಕಾಮಗಾರಿ, ರಥಬೀದಿಯಲ್ಲಿ ಚರಂಡಿ ಕಾಮಗಾರಿ, ಕೊಡಂಗೆ ರಸ್ತೆ ಬದಿ ತಡೆಗೋಡೆ ರಚನೆ ಕಾಮಗಾರಿ ನಿರ್ಣಯಗಳಿಗೆ ಆಕ್ಷೇಪಿಸಿ ದ್ದೇವೆ. ಆದರೆ ಅದನ್ನು ತಿದ್ದುಪಡಿ ಮಾಡಿ, ಟೆಂಡರ್‌ ಕರೆದಿದ್ದಾರೆ. ಈ ಸಭೆಯಲ್ಲಿ ಟೆಂಡರ್‌ ಅಂತಿಮಗೊಳಿಸಲು ನಾವು ವಿರೋಧಿಸಿದ್ದೇವೆ. ಅಧ್ಯಕ್ಷರು ಇದನ್ನೆಲ್ಲ ತಿರಸ್ಕರಿಸಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಸದಸ್ಯ ರಾಮದಾಸ ಶೆಣೈ ಮಾತನಾಡಿ, ಸಭೆ ಮೊಟಕುಗೊಳಿಸಿ ಬರಲಾಗಿದೆ. ನಿರ್ಣಯ ಕೈಗೊಳ್ಳಲಿಲ್ಲ. ಇದನ್ನು ಮುಖ್ಯಾಧಿಕಾರಿಗೆ, ಮೇಲಧಿಕಾರಿಗಳಿಗೆ ತಿಳಿಸಿ, ನಿರ್ಣಯ ತಿದ್ದುಪಡಿ ಮಾಡಿದ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದರು.

ಕ್ರಮಕ್ಕೆ ಆಗ್ರಹ

ಸದಸ್ಯ ರಾಮದಾಸ ಶೆಣೈ ಮಾತನಾಡಿ, ಸಭೆ ಮೊಟಕುಗೊಳಿಸಿ ಬರಲಾಗಿದೆ. ನಿರ್ಣಯ ಕೈಗೊಳ್ಳಲಿಲ್ಲ. ಇದನ್ನು ಮುಖ್ಯಾಧಿಕಾರಿಗೆ, ಮೇಲಧಿಕಾರಿಗಳಿಗೆ ತಿಳಿಸಿ, ನಿರ್ಣಯ ತಿದ್ದುಪಡಿ ಮಾಡಿದ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದರು.

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.