ವಿಟ್ಲ: ಗ್ರಾಮಸ್ಥರಿಂದ ಇತಿಹಾಸ ಪ್ರಸಿದ್ಧ ಕೋಟಿಕೆರೆ ದುರಸ್ತಿ
Team Udayavani, Jun 16, 2019, 5:00 AM IST
ವಿಟ್ಲ: ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದ ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಯ ತಡೆಗೋಡೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿ ಮಾಡಿದರು.
ನೂರು ವರ್ಷಗಿಂತಲೂ ಅಧಿಕ ಇತಿಹಾಸ ಹೊಂದಿರುವ, ವಿಟ್ಲದ ಅರಮನೆಗೆ ಸಂಬಂಧಿಸಿದ ಕೋಟಿಕೆರೆಯಲ್ಲಿ ಹೂಳು ತುಂಬಿದ್ದು, ಕೆರೆಯ ತಡೆಗೋಡೆ ಆಗಾಗ ಅಲ್ಲಲ್ಲಿ ಕುಸಿಯುತ್ತಿತ್ತು. ಈ ಬಗ್ಗೆ ಗಮನಹರಿಸಿದ ಕಾಶಿಮಠ ಸುತ್ತಮುತ್ತಲಿನ ಗ್ರಾಮಸ್ಥರು ದುರಸ್ತಿ ಕಾರ್ಯಕ್ಕೆ ಮುಂದಾದರು.
ಕಾಶಿ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಕೆ.ವಿ. ನೇತೃತ್ವದಲ್ಲಿ 25ಕ್ಕಿಂತಲೂ ಅಧಿಕ ಗ್ರಾಮಸ್ಥರು ಶ್ರಮದಾನ ನಡೆಸಿದರು. ವಿಟ್ಲದ ಕೆಲವು ದಾನಿಗಳು ವಿವಿಧ ರೀತಿಯ ಸಹಕಾರ ನೀಡಿದರು. ಇದೀಗ ಬಿರುಕು ಬಿಟ್ಟ ತಡೆಗೋಡೆಗೆ ಕಲ್ಲು ಹಾಗೂ ಸಿಮೆಂಟ್ ಹಾಕುವ ಮೂಲಕ ಭದ್ರಪಡಿಸಲಾಗಿದೆ.
ಈಜುಪಟು ಕಾಶಿಮಠ ಈಶ್ವರ್ ಭಟ್, ಕಾಶಿ ಯುವಕ ಮಂಡಲದ ಅಧ್ಯಕ್ಷ ಕೇಶವ, ಮಾಜಿ ಅಧ್ಯಕ್ಷ ಪ್ರತಾಪ್, ವಿಟ್ಲ ಜೇಸಿಐ ಅಧ್ಯಕ್ಷ ಬಾಲಕೃಷ್ಣ, ವಿಶ್ವನಾಥ ಕೊಪ್ಪಳ, ವಿಶ್ವನಾಥ ಕಬ್ಬಿನಹಿತ್ತಿಲು, ಪ್ರವೀಣ್ ಪುಚ್ಚೆಗುತ್ತು, ಮಿಥುನ್, ಲಕ್ಷ್ಮಣ ಆರ್.ಎಸ್. ಮತ್ತಿತರರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.