Vitla: ಜೀವನ ಕಲೆಯಾಗಬೇಕು, ಬಲೆ ಆಗಬಾರದು: ಒಡಿಯೂರು ಶ್ರೀ
ಸನಾತನ ಧರ್ಮದ ಅನುಷ್ಠಾನದ ಮೂಲಕ ಧರ್ಮದ ಉಳಿವು ಸಾಧ್ಯ
Team Udayavani, Oct 20, 2023, 3:08 PM IST
ವಿಟ್ಲ: ಭಾರತಕ್ಕೆ ಆಧ್ಯಾತ್ಮದ ಬೆಳಕಿದ್ದು, ಭಾರತೀಯತೆಗೆ ನಾಶ ಎಂಬುದಿಲ್ಲ. ಅಂತರಂಗದಲ್ಲಿ ನಿಜ ವಾದ ಸುಖವಿದೆ. ಅದನ್ನು ಎಲ್ಲೆಡೆ ಹುಡುಕುವು ದರಿಂದ ಜೀವನ ವ್ಯರ್ಥವಾಗುತ್ತದೆ.
ಜೀವನ ಒಂದು ನಾಟಕವಾಗಿದ್ದು, ಸೂತ್ರ ಧಾರನನ್ನು ಮರೆತಾಗ ಸೋಲು ಬರುತ್ತದೆ. ಜೀವನ ಕಲೆಯಾಗಬೇಕು,
ಬಲೆಯಾಗಬಾರದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ ಕಾರ್ಯಕ್ರಮದಲ್ಲಿ ಐವರು
ಕಲಾವಿದರಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ದೈವತ್ವ ತುಂಬಬೇಕು. ರಾಕ್ಷಸೀ ಪ್ರವೃತ್ತಿಯನ್ನು ದೂರ ಮಾಡಬೇಕು. ಮಾನವೀಯ ಮೌಲ್ಯ ಬೆಳೆದು ಬರಬೇಕು. ಮಾತು ಮತ್ತು ನಡೆ ಒಂದೇ ಆಗಿದ್ದರೆ ಬದುಕು ಸಂದರವಾಗುತ್ತದೆ. ತಾಯಿ ಮೊದಲ ಗುರುವಾಗಿ, ಮನೆ ಮೊದಲ ಪಾಠ ಶಾಲೆಯಾಗಬೇಕು.
ಅದು ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ. ಸನಾತನ ಧರ್ಮದ ಅನುಷ್ಠಾನದ ಮೂಲಕ ಧರ್ಮದ ಉಳಿವು ಸಾಧ್ಯ ಎಂದು ತಿಳಿಸಿದರು.
ಸಾಧ್ವಿಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ, ಭಕ್ತಿಯನ್ನು ಬಡಿದೆಬ್ಬಿಸುವ ಪರ್ವಕಾಲದಲ್ಲಿ ಶಕ್ತಿಯ ಉಪಾಸನೆ ಮಾಡಬೇಕು. ಅಧರ್ಮ ಅಂತ್ಯವಾಗಬೇಕು ಎಂದರು.
ಯಕ್ಷಗುರು ಸಬ್ಬಣಕೋಡಿ ರಾಮ ಭಟ್, ತುಳು ರಂಗಭೂಮಿ ಕಲಾವಿದ ರಮೇಶ್ ಮಾಸ್ತರ್ ಬಿ.ಸಿ.ರೋಡ್, ತಬಲಾ ವಾದಕಿ ಅನಿತಾ ಪ್ರಭು, ಅಣ್ಣದೈವ ಪಾತ್ರಿ ರಾಜ ಬೆಳ್ಚಪ್ಪಾಡ, ಬಂಟ್ವಾಳ ಛಾಯಾಚಿತ್ರಗ್ರಾಹಕ ಹರೀಶ್ ರಾವ್ ಅವರಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದತ್ತ ಪ್ರಕಾಶ ಆಧ್ಯಾತ್ಮಿಕ ದ್ವೈಮಾಸಿಕ ಪತ್ರಿಕೆಯ 24ನೇ ಸಂಪುಟದ 4ನೇ ಸಂಚಿಕೆಯನ್ನು ಸ್ವಾಮೀಜಿ ಬಿಡುಗಡೆ ಗೊಳಿಸಿದರು. ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ, ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಉಪಸ್ಥಿತರಿದ್ದರು.
ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಯಶೋಧರ ಸಾಲ್ಯಾನ್, ಜಯಂತ ಆಜೇರು, ಅನಿತಾ, ಸುಬ್ರಹ್ಮಣ್ಯ ಟಿ., ಲೀಲಾ ಪಾದೆಕಲ್ಲು ಸಮ್ಮಾನಿತರನ್ನು ಪರಿಚಯಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಕ್ಷೇತ್ರದಲ್ಲಿ ಲಲಿತಾ ಪಂಚಮಿ ಮಹೋತ್ಸವದ ಸಂದರ್ಭ ಗಣಪತಿ ಹವನ, ನಾಗತಂಬಿಲ,
ಶ್ರೀ ಚಂಡಿಕಾ ಯಾಗ, ಯಾಗದ ಪೂರ್ಣಾಹುತಿ, ಶ್ರೀಮಾತೇ ಭದ್ರಕಾಳಿ ಯಕ್ಷಗಾನ ಬಯಲಾಟ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
Subhramanya: 9 ತಿಂಗಳ ಹಿಂದೆ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದನೇ ವಿಕ್ರಂ ಗೌಡ?
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
MUST WATCH
ಹೊಸ ಸೇರ್ಪಡೆ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.