Vitla: ಈ ಕಿಂಡಿ ಅಣೆಕಟ್ಟಲ್ಲಿ ನೀರೇ ನಿಲ್ಲುವುದಿಲ್ಲ, ಓಡಾಟಕ್ಕೂ ಭಯ!

ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದ ಪುಣಚ ಗ್ರಾಮದ ಆಲಂತಡ್ಕದ 30 ವರ್ಷಗಳಷ್ಟು ಹಳೆಯ ಅಣೆಕಟ್ಟು; 3 ಕಿ.ಮೀ. ವ್ಯಾಪ್ತಿಯ ಕೃಷಿಕರಿಗೆ ಅನುಕೂಲವಾಗಿತ್ತು; ಈಗಲೂ 150ಕ್ಕೂ ಅಧಿಕ ಮಂದಿಗೆ ಇದುವೇ ಕಾಲು ಸಂಕ

Team Udayavani, Oct 17, 2024, 1:00 PM IST

1(1)

3ನೇ ವಾರ್ಡಿನ ಆಲಂತಡ್ಕ ದಿಂದ 4ನೇ ವಾರ್ಡಿನ ಮಲ್ಯ ಭಾಗವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು.

ವಿಟ್ಲ: ಪುಣಚ ಗ್ರಾಮದ 3ನೇ ವಾರ್ಡಿನ ಆಲಂತಡ್ಕದಿಂದ 4ನೇ ವಾರ್ಡಿನ ಮಲ್ಯ ಪ್ರದೇಶವನ್ನು ಸಂಪರ್ಕಿಸುವ ಕಿಂಡಿ ಅಣೆಕಟ್ಟು ಸಹಿತ ಕಾಲು ಸಂಕವನ್ನು ಸುಮಾರು 30 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಸಮರ್ಪಕವಾದ ನಿರ್ವಹಣೆ ಇಲ್ಲದೆ ನಡೆದಾಡಲೂ ಆಗದ, ನೀರೂ ನಿಲ್ಲದ ಕಿಂಡಿ ಅಣೆಕಟ್ಟೆ ಅಪಾಯದ ಸನ್ನಿವೇಶಕ್ಕೆ ಕಾರಣವಾಗಿದೆ.

ಕಾಲು ಸಂಕದ ತಳ ಭಾಗದಲ್ಲಿ ತುಕ್ಕು ಹಿಡಿದ ಸ್ಥಿತಿಯಲ್ಲಿ ಸರಳುಗಳು ಕಾಣಿಸಲಾರಂಭಿಸಿದೆ. ಹೀಗಾಗಿ ನಡೆದಾಡಲು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಎರಡು ಬದಿಯ ತಡೆಗೋಡೆಗಳೂ ಕುಸಿದುಬಿದ್ದಿದೆ. ಮಳೆಗಾ ಲದಲ್ಲಿ ನೀರು ತುಂಬಿ ಹರಿಯುವಾಗ ಪಾದಚಾರಿಗಳು ಕಾಲುಸಂಕ ಮುರಿದುಬಿದ್ದು ನೀರಿನಲ್ಲಿ ಕೊಚ್ಚಿಹೋಗುವ ಸಂಭವವಿದೆ. ಇದನ್ನು ಮನಗಂಡ ಗ್ರಾಮಸ್ಥರು ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ನೀರು ನಿಲ್ಲುವುದಿಲ್ಲ, ನಡೆದಾಡಲು ಭಯ
ಈ ಕಿಂಡಿ ಅಣೆಕಟ್ಟಿನಲ್ಲಿ ನೀರು ತುಂಬಿದಾಗ ಸುಮಾರು 3 ಕಿ.ಮೀ. ವ್ಯಾಪ್ತಿಯ ಕೃಷಿಕ‌ರಿಗೆ ಪ್ರಯೋಜನವಾಗುತ್ತಿತ್ತು. ಆದರೆ ಅಣೆಕಟ್ಟಿನ ಹಲಗೆಗಳು ಎರಡನೇ ವರ್ಷಕ್ಕೇ ಬರಲಿಲ್ಲ. ಆಮೇಲೆ ಸ್ಥಳೀಯರು ತಾವೇ ಖರ್ಚು ಮಾಡಿ, ಕೃಷಿ ಉಪಯೋಗಕ್ಕೆ ನೀರು ಬೇಕೆಂದು ತಡೆಕಟ್ಟುತ್ತಿದ್ದರು. ಅದು ಕೂಡಾ ಸುರಕ್ಷಿತವಾಗಿರಲಿಲ್ಲ. ನೀರು ಸೋರುತ್ತಿತ್ತು. ಶಾಲಾ ಮಕ್ಕಳು ಸೇರಿದಂತೆ ಸುಮಾರು 150ಕ್ಕೂ ಅಧಿಕ ಮಂದಿ ಪ್ರತೀ ದಿನ ಭಯದಲ್ಲೇ ಈ ಕಾಲು ಸಂಕದ ಮೇಲೆ ಓಡಾಡುತ್ತಿದ್ದಾರೆ. ಕಾಲು ಸಂಕದ ಹಾಗೂ ಅಣೆಕಟ್ಟಿನ ದುರಸ್ತಿಯನ್ನು ಪ್ರತೀವರ್ಷ ನಡೆಸದೇ ಇದ್ದುದರಿಂದ, ಸಂಪರ್ಕ ವ್ಯವಸ್ಥೆ ಕಡಿದುಹೋಗುವ ಸಾಧ್ಯತೆಯಿದೆ.

ಅಣೆಕಟ್ಟು ನಿರ್ವಹಣೆಗೆ ಆಗ್ರಹ
ಸ್ಥಳೀಯರ ಪ್ರಕಾರ ಕಲ್ಲಾಜೆ – ಮಲ್ಯ ಕಿಂಡಿ ಅಣೆಕಟ್ಟು 1995ರಲ್ಲಿ ನಿರ್ಮಾಣವಾಗಿದೆ. ಆಗಿನ ಜಿಲ್ಲಾ ಪಂಚಾಯತ್‌ ಸದಸ್ಯ ಕೃಷ್ಣ ನಾಯ್ಕ ಅವರು ಅನುದಾನ ಒದಗಿಸಿದ್ದರೆನ್ನಲಾಗಿದೆ. ಪುಣಚ ಗ್ರಾಮದ 3 ಮತ್ತು 4ನೇ ವಾರ್ಡ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಈ ಕಾಲು ಸಂಕವನ್ನು ನಿರ್ವಹಣೆ ಮಾಡಬೇಕೆಂದು ಗ್ರಾಮಸ್ಥರಾದ ವಸಂತ ನಾಯಕ್‌ ಆಜೇರು ಅವರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ/ ಅಧ್ಯಕ್ಷರಿಗೆ ಮನವಿ ನೀಡಿದ್ದರು. ಆದರೆ ಈ ತನಕ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಕಾಲುಸಂಕದ ಅಡಿ ಭಾಗದಲ್ಲಿ ತುಕ್ಕುಹಿಡಿದ ಕಬ್ಬಿಣ. 30 ವರ್ಷ ಹಳೆಯ ಅಣೆಕಟ್ಟಿನ ಒಂದು ಭಾಗ ಕುಸಿದಿದೆ.

ನವೀಕರಣ ಇಲ್ಲವೇ ಮರು ನಿರ್ಮಾಣ
ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಲಾಗುತ್ತಿಲ್ಲ. ಹಲವು ವರ್ಷಗಳ ಹಿಂದೆಯೇ ಹಲಗೆ ಹಾಕುವುದನ್ನು ನಿಲ್ಲಿಸಲಾಗಿದ್ದು, ನೀರುಣಿಸುವ ದೃಷ್ಟಿಯಿಂದ ಪ್ರಯತ್ನ ಮಾಡಿದ್ದೇವೆ. ಕಾಲುಸಂಕದ ಅಡಿಭಾಗದಲ್ಲಿ ಕಬ್ಬಿಣ ತುಕ್ಕುಹಿಡಿದು ಕುಸಿದು ಬೀಳುವ ಸಂಭವವಿದೆ. ನಡೆದಾಡುವವರು ಸೂಕ್ಷ್ಮವಾಗಿ ಗಮನಿಸಿ, ಹೆಜ್ಜೆಯೂರುವ ಸ್ಥಿತಿಯಿದೆ. ಇದನ್ನು ತತ್‌ಕ್ಷಣ ನವೀಕರಣಗೊಳಿಸಬೇಕಾಗಿದೆ ಅಥವಾ ಮರು ನಿರ್ಮಾಣಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಬೇಕಾಗಿದೆ.
-ವಸಂತ ನಾಯಕ್‌ ಆಜೇರು, ಕೃಷಿಕರು

ಕೃಷಿಕರಿಗೆ ಅನುಕೂಲವಾದೀತು
ಎರಡು ಬದಿಯ ತಡೆಗೋಡೆಗಳೂ ಕುಸಿದುಬಿದ್ದಿದೆ. ಸಂಕವೂ ಶಿಥಿಲಗೊಂಡಿದೆ. ಎಪ್ರಿಲ್‌ 15ರ ವರೆಗೆ ನೀರು ನಿಂತು ಸ್ಥಳೀಯ ಕೃಷಿಕರ ತೋಟಕ್ಕೆ ನೀರುಣಿಸುವ ಕಿಂಡಿ ಅಣೆಕಟ್ಟು ಅತ್ಯಂತ ಉಪಯುಕ್ತವಾಗಿದೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
-ಶಂಕರನಾರಾಯಣ ಭಟ್‌ ಮಲ್ಯ, ಕೃಷಿಕರು

ಎರಡೂ ಬದಿ ಕುಸಿದುಬಿದ್ದಿದೆ!
ಕಿಂಡಿ ಅಣೆಕಟ್ಟಿನ ಎರಡೂ ಬದಿಯಲ್ಲಿ ಕಪ್ಪುಕಲ್ಲು ಕಟ್ಟಿ ತಡೆಗೋಡೆ ನಿರ್ಮಿಸಲಾಗಿತ್ತು. ನೀರಿನ ಒತ್ತಡಕ್ಕೆ ಅದು ಕೂಡ ಕುಸಿದುಬಿದ್ದಿದೆ. ರಭಸದಿಂದ ಬರುವ ನೀರು ಪಕ್ಕದ ಕೃಷಿಕರ ತೋಟ, ಭೂಮಿಯನ್ನು ಕೊಚ್ಚಿಕೊಂಡು ಹೋಗುವ ಸಂಭವವಿದೆ. ಮಳೆಗಾಲದಲ್ಲಿ ಪ್ರವಾಹ ಮತ್ತು ನೀರು ಅಪಾಯದ ಮಟ್ಟಕ್ಕೆ ತಲುಪುತ್ತದೆ ಮತ್ತು ಅದಕ್ಕೆ ತಡೆಗೋಡೆ, ಅಣೆಕಟ್ಟು, ಕಾಲುಸಂಕ ಎಲ್ಲವೂ ನಾಶವಾಗಬಹುದಾಗಿದೆ.

ಮುಂದಿನ ವರ್ಷಕ್ಕಾದರೂ ಆದೀತು!
ಈ ಕಿಂಡಿ ಅಣೆಕಟ್ಟಿನ ಬಗ್ಗೆ ಈಗಲೇ ಸರಕಾರ ಕ್ರಮ ಕೈಗೊಂಡರೆ ಮುಂದಿನ ಬೇಸಗೆ ಹೊತ್ತಿಗಾದರೂ ನಿರ್ಮಾಣವಾದೀತು. ಆ ಮೂಲಕ ಜನರು ಮಳೆಗಾಲದಲ್ಲಿ ನಿರ್ಭಯವಾಗಿ ಈ ಅಣೆಕಟ್ಟಿನ ಮೇಲೆ ಓಡಾಡಬಹುದು. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

-ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.