![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 11, 2020, 5:45 AM IST
ಸಾಂದರ್ಭಿಕ ಚಿತ್ರ
ವಿಟ್ಲ: ಇಲ್ಲಿನ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಸರಕಾರಿ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರ್ಷ ವಿವಿಧ ತರಗತಿಗಳಿಗೆ 284 ವಿದ್ಯಾರ್ಥಿಗಳ ದಾಖಲಾಗಿದ್ದು ಪ್ರಸ್ತುತ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 980ಕ್ಕೇರಿದೆ.
2014-15ರಲ್ಲಿ ಮಕ್ಕಳ ಸಂಖ್ಯೆ 455 ಇದ್ದು, ಶ್ರೀ ಭಾರತೀ ಜನಾರ್ದನ ಸೇವಾ ಟ್ರಸ್ಟ್ ನವರು ಶಾಲೆಯನ್ನು ದತ್ತು ಪಡೆದು, ಶಾಲೆಯ ಶೆ„ಕ್ಷಣಿಕ ಹಾಗೂ ಭೌತಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಯಿತು.
ಶಾಲೆಯ ಹಿರಿಯ ವಿದ್ಯಾರ್ಥಿ ಯೂ ಸುಪ್ರಜಿತ್ ಫೌಂಡೇಶನ್ ಅಧ್ಯಕ್ಷರೂ ಆದ ಅಜಿತ್ ಕುಮಾರ್ ರೈ ಅವರು ಈಗಾಗಲೇ ಸುಸಜ್ಜಿತ ಪೀಠೊಪಕರಣ ಗಳನ್ನೊಳಗೊಂಡ 10 ಕೊಠಡಿಗಳ ಕಟ್ಟಡವನ್ನು ನೀಡಿದ್ದು, ಪ್ರಸ್ತುತ ಹೆಚ್ಚುವರಿ 5 ಕೊಠಡಿಗಳ ಕಾಮಗಾರಿ ಅಂತಿಮ ಹಂತದಲ್ಲಿದೆ.
ಕಳೆದ ಸಾಲಿನಲ್ಲಿ ಸರಕಾರದ ಆದೇಶದಂತೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಿದ್ದು, ಪ್ರಸ್ತುತ ಸಾಲಿನಲ್ಲಿ ಆಂಗ್ಲಮಾಧ್ಯಮ 1ನೇ ತರಗತಿಗೆ 132 ಹಾಗೂ ಕನ್ನಡ ಮಾಧ್ಯಮಕ್ಕೆ 42 ಒಟ್ಟು 174 ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು ಪ್ರಕ್ರಿಯೆ ಮುಂದುವರಿದಿದೆ.
ಕಳೆದ ವರ್ಷ ಶಾಲೆಗೆ ಭೇಟಿ ನೀಡಿದ್ದ ರಾಜ್ಯ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಎಸ್‌ಡಿಎಂಸಿ ಹಾಗೂ ಪೋಷಕರ ಮನವಿಯ ಮೇರೆಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ಪ್ರೌಢಶಾಲೆಯನ್ನು ಮಂಜೂರುಗೊಳಿಸಿದ್ದಾರೆ.
ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಪ್ರೌಢ ಶಾಲೆಯ 9ನೇ ತರಗತಿಗೂ ದಾಖಲಾತಿ ಪ್ರಾರಂಭಗೊಂಡಿದ್ದು, ಈ ತನಕ 55 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.