ಮತದಾನದ ಹಕ್ಕು ನೋಂದಣಿ ತರಬೇತಿ
Team Udayavani, Nov 14, 2021, 3:00 AM IST
ಬೆಳ್ತಂಗಡಿ: ಯುವ ಮತದಾರರಿಗೆ ಮತದಾನದ ಹಕ್ಕಿನ ಅರಿವು ಮೂಡಿ ಸುವ ಸಲುವಾಗಿ ಚುನಾವಣೆ ಆಯೋಗವು ನಾನಾ ಜಾಗೃತಿ ಯೋಜನೆಗಳನ್ನು ಹಮ್ಮಿಕೊಂಡಿರುವ ನಡುವೆಯೇ ಇದೀಗ ಕೇಂದ್ರ ಹಾಗೂ ರಾಜ್ಯ ಚುನಾವಣೆ ಆಯೋಗ ಹೊರ ತಂದಿರುವ ವೋಟರ್ ಹೆಲ್ಪ್ಲೈನ್ ಆ್ಯಪ್ (Vಟಠಿಛಿrs ಜಛಿlಟlಜಿnಛಿ ಅಟಟ)ಬಳಕೆ ಕುರಿತು ಕಾಲೇಜು ಮಟ್ಟದಲ್ಲಿಯೇ ಶಿಕ್ಷಕರಿಂದ ತರಬೇತಿ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಮಾಸ್ಟರ್ ಟ್ರೈನರ್‌ಗಳ ನೇಮಕ:
ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ವೋಟರ್ ಹೆಲ್ಪ್ಲೈನ್ ಆ್ಯಪ್ ಬಳಸಿಕೊಂಡು ಮತದಾನದ ಹಕ್ಕನ್ನು ನೋಂದಣಿ ಮಾಡುವ ಪ್ರಕ್ರಿಯೆಯನ್ನು ತಿಳಿಸಿ ಕೊಡಲಾಗುತ್ತಿದೆ. ಆ್ಯಪ್ ಬಳಕೆ ವಿಧಾನವನ್ನು ತಿಳಿಸಿಕೊಡುವ ಸಲುವಾಗಿ ಈಗಾಗಲೇ ಪ್ರತಿ ಕಾಲೇಜಿಗೊಬ್ಬರಂತೆ ಉಪನ್ಯಾಸಕರನ್ನು ತಾಲೂಕು ಆಡಳಿತದಿಂದ ಆಯ್ಕೆ ಮಾಡಲಾಗಿದೆ. ಅವರಿಗೆ ತಾಲೂಕು ಮಟ್ಟದಲ್ಲಿ ನೇಮಿಸಲಾದ ಇಬ್ಬರು ಮಾಸ್ಟರ್ ಟ್ರೈನರ್‌ಗಳ ಮೂಲಕ ತರಬೇತಿ ಒದಗಿಸಲಾಗಿದೆ.
ತಾಲೂಕಿನ 27 ಕಾಲೇಜುಗಳಲ್ಲಿ ತರಬೇತಿ:
2022ರ ಜನವರಿ 1ನೇ ತಾರೀಕಿಗೆ ಅನ್ವಯ ವಾಗುವಂತೆ 18 ವರ್ಷ ತುಂಬುವ ಮತದಾರರಿಗೆ ಆದ್ಯತೆ ನೀಡಲಾಗಿರುವುದರಿಂದ ಪಿ.ಯು.ಸಿ. ಹಾಗೂ ಪ.ಪೂ. ಕಾಲೇಜುಗಳ ವಿದ್ಯಾರ್ಥಿಗಳನ್ನು ಗಮನದಲ್ಲಿಡಲಾಗಿದೆ. ಹಾಗಾಗಿ ಬೆಳ್ತಂಗಡಿ ತಾಲೂಕಿನ 27 ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.
ನಮೂನೆ 6ರಿಂದ 8ಎ ವರೆಗೆ ವಿವರಣೆ:
ವೋಟರ್ ಹೆಲ್ಪ್ ಲೈನ್ ಆ್ಯಪ್‌ನಲ್ಲಿ ನಮೂನೆ 6ರಿಂದ 8ಎ ವರೆಗಿ ರುವ ಸಂಪೂರ್ಣ ವಿವರಣೆ ನೀಡಲಾಗುತ್ತದೆ. ನಮೂನೆ 6ರಂತೆ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ನಮೂನೆ 7ರಂತೆ: ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು, ನಮೂನೆ 8ರಂತೆ: ಮತದಾರರ ಪಟ್ಟಿಯಲ್ಲಿ ಈಗಾಗಲೆ ದಾಖಲಿರುವ ಹೆಸರುಗಳನ್ನು ತಿದ್ದುಪಡಿಗೊಳಿಸುವುದು, ನಮೂನೆ 8ಎ ಪ್ರಕಾರ: ತಾಲೂಕಿನ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಮತದಾರರು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ವಲಸೆ ಹೋದಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಗುತ್ತದೆ.
ಸ್ಥಳದಲ್ಲಿಯೇ ತಿದ್ದುಪಡಿ:
ಮತದಾನ ಹಕ್ಕು ಎಂಬ ಜಾಗೃತಿ ವಿದ್ಯಾರ್ಥಿ ದಿಸೆಯಿಂದಲೇ ಮೂಡಿಸುವುದು ಒಂದೆಡೆಯಾದರೆ ಆ್ಯಪ್ ಬಳಸುವ ಮೂಲಕ ಮತದಾರರು ತಾವು ಇದ್ದ ಸ್ಥಳದದಿಂದಲೇ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಬದಲಾವಣೆ, ತಿದ್ದುಪಡಿ ಮಾಡುವ ಮೂಲಕ ಚುನಾವಣೆ ಶಾಖೆ, ಬ್ಲಾಕ್ ಲೆವೆಲ್ ಅಧಿಕಾರಿಗಳನ್ನು ಅರ ಸುತ್ತಾ ಸಮಯ ವ್ಯಯವಾಗಿಸುವುದನ್ನು ತಪ್ಪಿಸಲಿದೆ.
ಮಾಸ್ಟರ್ ಟ್ರೈನರ್‌ಗಳಾದ ಧರಣೇಂದ್ರ ಜೈನ್ ಹಾಗೂ ಮಹೇಶ್ ಅವರ ಮೂಲಕ 27 ಕಾಲೇಜಿನ ಎಲ್ಲ ಉಪನ್ಯಾಸಕರಿಗೆ ಆ್ಯಪ್ ಬಳಕೆ ಕುರಿತು ತರಬೇತಿ ನೀಡಲಾಗಿದೆ. ನ. 16ರಂದು 11ಗಂಟೆಗೆ ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಪುತ್ತೂರು ಸಹಾಯಕ ಆಯುಕ್ತ ಡಾ| ಯತೀಶ್ ಉಳ್ಳಾಲ್ ಹಾಗೂ ತಹಶೀಲ್ದಾರ್ ಮಹೇಶ್ ಜೆ., ಉಪ ತಹಶೀಲ್ದಾರ್ ದಯಾನಂದ್ ಹಾಗೂ ಮಾಸ್ಟರ್ ಟ್ರೈನರ್ ಸಮ್ಮುಖದಲ್ಲಿ ಉದ್ಘಾಟನೆ ನಡೆಯಲಿದೆ. ತರಬೇತಿ ಪಡೆದ ಉಪನ್ಯಾಸಕರು ತಾಲೂಕಿನ ಎಲ್ಲ ಕಾಲೇಜು ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಮಕ್ಕಳಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಬಗ್ಗೆ ತರಬೇತಿ ನೀಡಲಿದ್ದಾರೆ.
ನ. 16: ಏಕ ಕಾಲದಲ್ಲಿ ಮಾಹಿತಿ :
18 ವರ್ಷ ಪೂರೈಸಿದ ಮತದಾರರ ಹೆಸರು ಅನೇಕ ಬಾರಿ ಬಿಟ್ಟು ಹೋಗಿದ್ದವು. ಹೀಗಾಗಿ ಕೇಂದ್ರೀಯ ಚುನಾವಣ ಆಯೋಗವು ಅರ್ಹ ಮತದಾರರ ಹೆಸರು ಚುನಾವಣ ಪಟ್ಟಿಯಿಂದ ಬಿಟ್ಟು ಹೋಗದಂತೆ, ಮತದಾರರು ಮನೆಯಲ್ಲೇ ಕುಳಿತು ವಿಎಚ್‌ಪಿ ಆ್ಯಪ್‌ನಲ್ಲಿ ಯಾವುದೇ ಬದಲಾವಣೆ ಮಾಡುವ ಸುವರ್ಣಾವಕಾಶ ನೀಡಿದೆ. ಈ ಬಗ್ಗೆ ಪ್ರತೀ ಬೂತ್ ಮಟ್ಟದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೂ ಅರಿವು ಮೂಡಿಸುವ ಪ್ರಯತ್ನ . –ದಯಾನಂದ್ ಹೆಗ್ಡೆ, ಉಪತಹಶೀಲ್ದಾರ್, ಚುನಾವಣೆ ಶಾಖೆ
– ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.