ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ
ಸ್ವಚ್ಛ ಗ್ರಾಮಕ್ಕಾಗಿ ತ್ಯಾಜ್ಯ ಸಂಕೀರ್ಣ ಘಟಕ
Team Udayavani, Oct 23, 2021, 5:59 AM IST
ವಿಶೇಷ ವರದಿ- ಬೆಳ್ತಂಗಡಿ: ತ್ಯಾಜ್ಯ ನಿರ್ವಹಣೆಗಾಗಿ ಪಂಚಾಯತ್ ರಾಜ್ ವ್ಯವಸ್ಥೆಯಡಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾ.ಪಂ. ವ್ಯಾಪ್ತಿಯ ಮುರದಮೇಲುವಿನಲ್ಲಿ ನಿರ್ಮಾಣಗೊಂಡ 15 ಲಕ್ಷ ರೂ. ವೆಚ್ಚದ ಸ್ವಚ್ಛ ಸಂಕೀರ್ಣಘಟಕ ಲೋಪಾರ್ಪಣೆಗೆ ಸಿದ್ಧಗೊಂಡಿದೆ.
ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಪ್ರಾಮುಖ್ಯತೆ ನೀಡುವ ಸಲುವಾಗಿ ಜಿ.ಪಂ. ನಿವೇಶನ ಕಾಯ್ದಿರಿಸಲು ಸೂಚಿಸಲಾಗಿದೆ. ಬಹುತೇಕ ಗ್ರಾ.ಪಂ.ಗಳು ನಿವೇಶನ ಗುರುತಿಸಿದ್ದಲ್ಲದೆ ಘಟಕ ಸ್ಥಾಪನೆಗೂ ಮುಂದಾಗಿವೆ. ಬೆಳ್ತಂಗಡಿ ತಾಲೂಕಿನಲ್ಲಿ ಧರ್ಮಸ್ಥಳ, ಉಜಿರೆ, ಲಾೖಲದಲ್ಲಿ ಮಾದರಿ ತ್ಯಾಜ್ಯ ವಿಂಗಡಣೆ ಘಟಕ ಸ್ಥಾಪಿಸಿ ಗ್ರಾಮ ಪಂಚಾಯತ್‌ಗೆ ಆದಾಯ ತರುವ ರೀತಿ ವ್ಯವಸ್ಥೆ ಮಾಡಲಾಗಿದೆ.
ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ)ಯೋಜನೆ “ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ’ ಎಂಬ ಧ್ಯೇಯದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ. ಜಿ.ಪಂ., ತಾ.ಪಂ. ಸಹಭಾಗಿತ್ವದಲ್ಲಿ ಮುರದಮೇಲುವಿನಲ್ಲಿ 15 ಲಕ್ಷ ರೂ. ಅನುದಾನದಲ್ಲಿ ಘಟಕ ಸ್ಥಾಪಿಸಲಾಗಿದೆ. ಕಸ ಸಂಗ್ರಹಣೆಗೆ 5 ಲಕ್ಷ ರೂ. ಮೊತ್ತದ ವಾಹನ ಖರೀದಿಸಲಾಗಿದೆ.
ಇದನ್ನೂ ಓದಿ:ಜನತಾ ಬಜಾರ್ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ವಿಭಾಗದ ಕಟ್ಟಡ ನಿರ್ಮಾಣ
ಸದ್ಯ ಒಣಕಸ ಸಂಗ್ರಹಕ್ಕಷ್ಟೆ ಆದ್ಯತೆ ನೀಡಿದ್ದು, ಕ್ರಮೇಣ ತ್ಯಾಜ್ಯ ಸಂಸ್ಕರಣೆಗೂ ಆದ್ಯತೆ ನೀಡಲಾಗುವುದು. ವಾರಕ್ಕೊಂದು ದಿನ ಒಣಕಸ ಸಂಗ್ರಹಕ್ಕೆ ಮುಂದಾಗಿದ್ದು ಸಾರ್ವಜನಿಕರು, ಗ್ರಾ.ಪಂ. ಸದಸ್ಯರು, ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ.
ಶಾಸಕರಿಂದ ಲೋಕಾರ್ಪಣೆ
ತ್ಯಾಜ್ಯ ಘಟಕವನ್ನು ಅ. 23ರಂದು ಬೆಳಗ್ಗೆ 11 ಗಂಟೆಗೆ ಶಾಸಕ ಹರೀಶ್ ಪೂಂಜ ಲೋಕಾರ್ಪಣೆಗೊಳಿಸುವರು. ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್ ಸ್ವತ್ಛತ ವಾಹನಕ್ಕೆ ಚಾಲನೆ ನೀಡಲಿದ್ದಾರೆ. ವಿ.ಪ. ಸದಸ್ಯ ಹರೀಶ್ ಕುಮಾರ್ ಭಾಗವಹಿಸುವರು. ಗ್ರಾ.ಪಂ. ಅಧ್ಯಕ್ಷ ಪ್ರಸನ್ನ ಎ.ಪಿ. ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಸಿಇಒ ಡಾ| ಕುಮಾರ್ ಭಾಗವಹಿಸಲಿದ್ದಾರೆ.
ಸ್ವಚ್ಛ ಗ್ರಾಮದ ಸಂಕಲ್ಪ
ಸರಕಾರವು ಈಗಾಗಲೆ ಒಣಕಸ ನಿರ್ವಹಣೆಗಷ್ಟೆ ಅವಕಾಶ ಕಲ್ಪಿಸಿದೆ. ಪ್ರತೀ ವಾರ ಗ್ರಾಮದ ಪ್ರಮುಖ ವಾರ್ಡ್ ಹಾಗೂ ಅಂಗಡಿಗಳ ಸುತ್ತಮುತ್ತ ಕಸ ಎಸೆಯದಂತೆ ಜಾಗೃತಿ ಮೂಡಿಸಿ ಕಸ ಸಂಗ್ರಹಿಸುವ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತದೆ. ನಮ್ಮ ಗ್ರಾಮವನ್ನು ಸ್ವಚ್ಛ
ಗ್ರಾಮವಾಗಿಸುವ ಸಂಕಲ್ಪ ಇದಾಗಿದೆ.
-ಪ್ರಸನ್ನ ಎ.ಪಿ.,
ಅಧ್ಯಕ್ಷರು ಗ್ರಾ.ಪಂ. ಕಳೆಂಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.