ನೇತ್ರಾವತಿಯಲ್ಲಿ ನೀರಿನ ಮಟ್ಟ ಕೊಂಚ ಏರಿಕೆ
Team Udayavani, Jul 2, 2023, 3:13 PM IST
ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಪರಿ ಣಾಮ ಜೀವನದಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಕೊಂಚ ಮಟ್ಟಿಗೆ ಏರಿಕೆಯಾಗಿದ್ದರೂ, ಇನ್ನೂ ಕೂಡ ನದಿಯಲ್ಲಿ ಮಳೆಗಾಲದ ಹರಿವು ಆರಂಭವಾಗಿಲ್ಲ. ಪ್ರಸ್ತುತ ತುಂಬೆ ಡ್ಯಾಮ್ನಲ್ಲಿ 4 ಮೀಟರ್ ನೀರನ್ನು ಉಳಿಸಿಕೊಂಡು ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ವಿವಿಧ ಡ್ಯಾಮ್ಗಳಲ್ಲಿ ನೀರನ್ನು ತಡೆ ಹಿಡಿದಿರುವ ಪರಿಣಾಮ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರು ಕಾಣುತ್ತಿದೆ. ಇಲ್ಲದೇ ಇರುತ್ತಿದ್ದರೆ ಸದ್ಯಕ್ಕೆ ಬಂದಿರುವ ಮಳೆ ಯಿಂದ ನದಿಯ ನೀರಿನ ಮಟ್ಟ ಏರಿಕೆ ಅಸಾಧ್ಯವಾಗಿದೆ. ಆದರೆ ಕಳೆದ ಬೇಸಗೆಯಲ್ಲಿ ಉಂಟಾಗಿದ್ದ ನೀರಿನ ಅಭಾವದ ಆತಂಕ ದೂರವಾಗಿದೆ. ನದಿಯಲ್ಲಿ ಪೂರ್ತಿ ಮಳೆ ನೀರೇ ಇರುತ್ತಿದ್ದರೆ ಪ್ರಸ್ತುತ ಸಂಪೂರ್ಣ ನೀರಿನ ಬಣ್ಣ ಬದಲಾಗುತ್ತಿತ್ತು. ಸದ್ಯಕ್ಕೆ ತಿಳಿನೀರು ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿದೆ.
ಸಾಮಾನ್ಯವಾಗಿ ಪ್ರತಿವರ್ಷ ಈ ಸಮ ಯದಲ್ಲಿ ನದಿ ನೀರು ಗಣನೀಯ ಏರಿಕೆ ಯಾಗಿ ಒಳಹರಿವು ಕೂಡ ಗರಿಷ್ಠ ಪ್ರಮಾಣ ದಲ್ಲಿ ಇರುತ್ತಿತ್ತು. ಪ್ರಸ್ತುತ ಒಳಹರಿವು ಕಡಿಮೆ ಇರುವುದರಿಂದ ಶಂಭೂರು ಎಎಂಆರ್ ಡ್ಯಾಮ್ನಲ್ಲಿ ಕೇವಲ 2 ಮೆಷಿ ನ್ಗಳು ಚಲಾವಣೆಯಲ್ಲಿದ್ದು, 8ರಿಂದ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದ ನೆಯಾಗುತ್ತಿದೆ. ಒಳಹರಿವು ಹೆಚ್ಚಿದ್ದರೆ ಎಲ್ಲ 12 ಮೆಷಿನ್ಗಳು ಚಲಾವ ಣೆಗೆ ಬಂದು 60 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿತ್ತು ಎನ್ನಲಾಗಿದೆ.
ಬಂಟ್ವಾಳ ಭಾಗದಲ್ಲಿ ಕಳೆದ 3 ದಿನಗಳ ಹಿಂದೆ ಒಂದೆರಡು ದಿನಗಳ ಕಾಲ ಉತ್ತಮ ವಾಗಿ ಸುರಿದ ಮಳೆ ಜೂ. 30 ಹಾಗೂ ಜು. 1ಕ್ಕೆ ತೀರಾ ಕಡಿಮೆಯಾಗಿತ್ತು. ಪರಿಸ್ಥಿತಿ ಹೀಗೆ ಮುಂದುವರಿದರೆ ನದಿಯಲ್ಲಿ ನೀರಿನ ಮಟ್ಟ ಮತ್ತೆ ಕಡಿಮೆಯಾಗುವ ಸಾಧ್ಯತೆಯೂ ಇದೆ. 2022ರ ಜುಲೈ ಪ್ರಾರಂಭದಲ್ಲಿ ನದಿಯ ನೀರಿನ ಮಟ್ಟ 6.50 ಮೀ.ಗೆ ತಲುಪಿತ್ತು. ಪ್ರಸ್ತುತ ನೀರಿನ ಮಟ್ಟ ತೀರಾ ಕಡಿಮೆ ಇದೆ. ಬಂಟ್ವಾಳದಲ್ಲಿ ನದಿ ನೀರಿನ ಅಪಾಯಕಾರಿ ಮಟ್ಟ 8 ಮೀ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು
Vitla: ರಿಕ್ಷಾ- ಬೈಕ್ ಢಿಕ್ಕಿ; ಮೂವರಿಗೆ ಗಾಯ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.