ಜಕ್ರಿಬೆಟ್ಟು ಜಲ ಶುದ್ಧೀಕರಣ ಘಟಕ: ಸುತ್ತಲೂ ಬೆಳೆದು ನಿಂತ ಪೊದೆ
Team Udayavani, Jun 29, 2022, 11:32 AM IST
ಬಂಟ್ವಾಳ: ನಗರದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕದ ಸುತ್ತಲೂ ಪೊದೆಗಳು ಬೆಳೆದುಕೊಂಡಿದ್ದು, ಅದರ ತೆರವಿಗಾಗಿ ಪುರಸಭೆಗೆ ಮನವಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಘಟಕದ ಸುತ್ತಲೂ ಆವರಣ ಗೋಡೆ ಇದ್ದು, ಅದರ ಒಳಭಾಗದಲ್ಲಿ ಪೂರ್ತಿ ಪೊದೆಗಳು ತುಂಬಿಕೊಂಡಿವೆ.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೂಲಕ ಅನುಷ್ಠಾನಗೊಂಡಿರುವ 24.16 ಎಂಎಲ್‌ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕ ಜಕ್ರಿಬೆಟ್ಟಿನ ಎತ್ತರದ ಪ್ರದೇಶದಲ್ಲಿದ್ದು, ನೋಡುವುದಕ್ಕೆ ಸುಂದರವಾಗಿದ್ದರೂ, ಘಟಕದ ಆವರಣ ಗೋಡೆಯೊಳಗೆ ಪೂರ್ತಿಯಾಗಿ ಪೊದೆಗಳು ತುಂಬಿಕೊಂಡಿದೆ.
ಇಲ್ಲಿಯ ಸ್ಥಿತಿಯನ್ನು ಕಂಡಾಗ ಸಂಬಂಧಪಟ್ಟ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡುತ್ತಿಲ್ಲವೇ ಎಂಬ ಸಂಶಯವೂ ಕಾಡುತ್ತಿದೆ.
ಘಟಕಕ್ಕೆ ಬಾಗಿ ಕೊಂಡಿರುವ ಗಿಡ ಗಳು, ಬೃಹದಾಕಾರದಲ್ಲಿ ಬೆಳೆದಿರುವ ಅನಗತ್ಯ ಗಿಡಗಳು ಘಟಕದ ನೀರಿನ ಭಾಗಕ್ಕೆ ಬಾಗಿಕೊಂಡಿದ್ದು, ಅದರ ಮೂಲಕ ಹಾವುಗಳು ನೀರಿಗೆ ಬೀಳುತ್ತವೆ ಎಂಬ ಆರೋಪಗಳೂ ಇವೆ. ಜತೆಗೆ ಗಿಡಗಳ ಒಣಗಿದ ಎಲೆಗಳು ಕೂಡ ನೀರಿಗೆ ಬಿದ್ದು, ತೊಂದರೆಯಾಗುತ್ತಿದೆ. ನದಿಯಿಂದ ಜಾಕ್ ವೆಲ್ ಮೂಲಕ ಯಾವುದೇ ಕಸಗಳಿಲ್ಲದೆ ನೀರು ಘಟಕವನ್ನು ಸೇರಿದರೆ ಘಟಕದಲ್ಲಿ ನೀರಿಗೆ ತರಗೆಲೆಗಳು ಬೀಳುತ್ತಿವೆ.
ಪ್ರಸ್ತುತ ಮಳೆಗಾಲ ಆರಂಭ ಗೊಂಡಿದ್ದು, ಇನ್ನೂ ಕೂಡ ಗಿಡಗಳ ತೆರವು ಕಾರ್ಯ ನಡೆದಿಲ್ಲ. ಈಗ ಮಳೆಯಾಗುತ್ತಿ ರುವುದರಿಂದ ಗಿಡಗಳು ಶೀಘ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಘಟಕದ ಪ್ರವೇಶ ದ್ವಾರದ ಬಳಿ ಒಂದಷ್ಟು ಗಿಡಗಳು ತೆರವುಗೊಂಡದ್ದು, ಬಿಟ್ಟರೆ ಉಳಿದಂತೆ ಎಲ್ಲ ಭಾಗದಲ್ಲೂ ಪೊದೆಗಳು ತುಂಬಿಕೊಂಡಿವೆ. ನೆಟ್ಟಿರುವ ಆಲಂಕಾರಿಕ ಗಿಡಗಳು, ಹೂವಿನ ಗಿಡಗಳನ್ನೂ ಪೊದೆಗಳು ಆವರಿಸಿಕೊಂಡಿದೆ.
ಪುರಸಭೆ ಸಭೆಯಲ್ಲೂ ಪ್ರಸ್ತಾವ
ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕದ ಅವ್ಯವಸ್ಥೆ ವಿಚಾರವನ್ನು ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಪ್ರಸ್ತಾವ ಮಾಡಿದ್ದು, ಅಲ್ಲಿನ ಪೊದೆಗಳನ್ನು ತೆರವು ಮಾಡುವಂತೆ ಆಗ್ರಹಿಸಿದ್ದರು. ಸಭೆಯಲ್ಲಿ ಚರ್ಚೆಯಾಗಿ ತಿಂಗಳಾಗುತ್ತಾ ಬಂದರೂ ಇನ್ನೂ ಪೊದೆ ತೆರವುಗೊಳಿಸದೆ ಇರುವುದು ಯಾಕೆ ಎಂಬ ಪ್ರಶ್ನೆಯೂ ಎದ್ದಿದೆ.
ತೆರವಿಗೆ ಸೂಚನೆ: ಜಕ್ರಿಬೆಟ್ಟಿನ ಜಲ ಶುದ್ಧೀಕರಣ ಘಟಕದಲ್ಲಿ ಬೆಳೆದಿರುವ ಪೊದೆಗಳ ಕುರಿತು ಸಂಬಂಧಪಟ್ಟ ಸಿಬಂದಿಯಿಂದ ಮಾಹಿತಿ ಪಡೆದು ಅದನ್ನು ತೆರವು ಮಾಡುವುದಕ್ಕೆ ಸೂಚನೆ ನೀಡಲಾಗುವುದು. -ಎಂ.ಆರ್.ಸ್ವಾಮಿ, ಮುಖ್ಯಾಧಿಕಾರಿಗಳು, ಬಂಟ್ವಾಳ ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.