ತೊಡಿಕಾನ ದೇವರಗುಂಡಿ ಜಲಪಾತ
ನೋಡಲು ಸೊಗಸು, ನೀರಿಗಿಳಿದರೆ ಅಪಾಯ
Team Udayavani, Jul 5, 2019, 5:04 AM IST
ಅರಂತೋಡು: ತೊಡಿಕಾನ ದೇವರ ಗುಂಡಿ ಜಲಪಾತ ನೋಡಲು ಬಲು ಸುಂದರ ವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ತುಸು ದೂರದಿಂದಲೇ ಜಲಪಾತದ ಸೊಬ ಗನ್ನು ಆಸ್ವಾದಿಸಬೇಕಾಗಿದ್ದು, ನೀರಿಗಿಳಿದರೆ ಪ್ರಾಣಾಪಾಯ ಖಂಡಿತ.
ಈ ಹಿಂದೆ ನೀರಿಗಿಳಿದ ಕೆಲವು ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿ ಅಪಾಯ ತಂದು ಕೊಂಡಿದ್ದಾರೆ. ಹೀಗಾಗಿ, ಈಗ ಜಲಪಾತದ ತಳ ಭಾಗಕ್ಕೆ ಇಳಿಯುವುದನ್ನು ನಿಷೇಧಿಸಲಾಗಿದೆ.
ತೊಡಿಕಾನದಲ್ಲಿ ಸುಳ್ಯ ಸೀಮೆಯ ಅತೀಪುರಾತನವಾದ ಶ್ರೀ ಮಲ್ಲಿಕಾರ್ಜುನ ದೇವಾ ಲಯ ಇದೆ. ಇಲ್ಲಿಗೆ ನಿತ್ಯ ನೂರಾರು ಭಕ್ತರು, ಉತ್ಸವದ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಸ್ತಿಕರು ಹಾಗೂ ಪ್ರವಾಸಿಗಳು ಬರುತ್ತಾರೆ. ದೇವಾಲಯಕ್ಕೆ ಬರುವ ಚಾರಣಪ್ರಿಯರು ದೇವರ ಗುಂಡಿ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಹೋಗುತ್ತಾರೆ. ಜಲಪಾತದ ನೀರಿಗೆ ಮೈಯೊಡ್ಡಿ ಸ್ನಾನ ಮಾಡುವುದಕ್ಕಾಗಿ ಹೊಂಡಕ್ಕೂ ಇಳಿಯುತ್ತಾರೆ. ಇದು ಅಪಾಯಕಾರಿ ಸಾಹಸವಾಗಿದೆ.
ಮಳೆಗಾಲದಲ್ಲಿ ಬಹುತೇಕ ಜಲಪಾತಗಳು ಜೀವ ತಳೆದು, ಬೇಸಗೆಯ ದಿನಗಳಲ್ಲಿ ಬರಿದಾಗುತ್ತವೆ.
ಆದರೆ, ತೊಡಿಕಾನ ಗ್ರಾಮದ ದ.ಕ. ಮತ್ತು ಕೊಡಗು ಜಿಲ್ಲೆಗಳ ಗಡಿಭಾಗದಲ್ಲಿರುವ ದೇವರ ಗುಂಡಿ ಜಲಪಾತ ಇದಕ್ಕೊಂದು ಅಪವಾದ. ಇದು ವರ್ಷಪೂರ್ತಿ ಪರಿಸರಪ್ರೇಮಿಗಳನ್ನು ಸಂತೋಷಗೊಳಿಸುತ್ತದೆ. ಬೇಸಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೂ ಜಲಪಾತದ ಸೊಬಗಿಗೆ ನಷ್ಟವೇನೂ ಆಗುವುದಿಲ್ಲ.
ಇಲ್ಲಿಗೆ ಬರುವ ದಾರಿಯೂ ಸುಲಭವಾಗಿದೆ. ಸುಳ್ಯದಿಂದ ತೊಡಿಕಾನಕ್ಕೆ ಖಾಸಗಿ ಬಸ್ ಸಂಚಾರವಿದೆ. ಬಸ್ಸಿನಲ್ಲಿ 40 ನಿಮಿಷ, ಸ್ವಂತ ವಾಹನವಿದ್ದರೆ ಕೇವಲ 30 ನಿಮಿಷ ಸಾಕು. ಸುಳ್ಯದಿಂದ 11 ಕಿ.ಮೀ. ದೂರ ಸುಳ್ಯ – ಮಡಿಕೇರಿ ರಾಜ್ಯ ರಸ್ತೆಯಲ್ಲಿ ಸಾಗಿದರೆ ಅರಂತೋಡು ಎಂಬ ಊರು ಸಿಗುತ್ತದೆ. ಬಲಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯದ ದ್ವಾರವಿದೆ. ಈ ದ್ವಾರದ ಮೂಲಕ 6 ಕಿ.ಮೀ. ಪ್ರಯಾಣಿಸಿದರೆ ತೊಡಿಕಾನದ ಮಲ್ಲಿಕಾರ್ಜುನ ದೇವಾಲಯ ಸಿಗುತ್ತದೆ.
ದೇವಾಲಯದ ಬಳಿಯಿಂದ ತೊಡಿಕಾನ – ಪಟ್ಟಿ-ಭಾಗಮಂಡಲ ಕಚ್ಚಾ ರಸ್ತೆಯಲ್ಲಿ ಸುಮಾರು 1.8 ಕಿ.ಮೀ. ಸಾಗಿದರೆ ಜಲಪಾತ ಕಾಣಸಿಗುತ್ತದೆ. ಮುಂದೆ ಸಾಗುತ್ತಿದಂತೆ ಇದೇ ಹೊಳೆಯ ಚಿಕ್ಕ ಪುಟ್ಟ ತೊರೆಗಳು ಮನಸನ್ನು ಪುಳಕಗೊಳಿಸುತ್ತವೆ. ಸುತ್ತಮುತ್ತಲ ಹಸುರು ಬೆಟ್ಟ-ಗುಡ್ಡಗಳು, ಅಡಿಕೆ, ತೆಂಗಿನ ತೋಟಗಳು ತಂಪಾದ ಗಾಳಿಗೆ ತೊನೆದಾಡುತ್ತ ತಂಪೆರೆಯುತ್ತವೆ. ಹಕ್ಕಿಗಳ ಇಂಚರ, ದುಂಬಿಗಳ ಝೇಂಕಾರ, ಕೋಗಿಲೆಗಳ ಗಾನ ಮನಸಿಗೆ ಮುದ ನೀಡುತ್ತವೆ. ಸ್ವಲ್ಪ ಮುಂದೆ ಸಾಗಿದರೆ ಜೇರುಂಡೆಗಳ ಸದ್ದು ಕೊಂಚ ಭಯ ಹುಟ್ಟಿಸುತ್ತದೆ. ಮಳೆಗಾಲದಲ್ಲಿ ಜಿಗಣೆ ಕಾಟವೂ ಇದೆ.ಜಲಪಾತವನ್ನು ನೋಡಿ, ಆದರೆ ನೀರಿಗಿಳಿಯಬೇಡಿ ಎಂದು ಸ್ಥಳೀಯರು ಮನವಿ ಮಾಡುತ್ತಿರುತ್ತಾರೆ.
ದೇವರಗುಂಡಿ ಜಲಪಾತದ ಗುಂಡಿಗೆ ಇಳಿದರೆ ಅಪಾಯ ಇದೆ. ಈ ಕಾರಣದಿಂದ ಯಾರೂ ಜಲಪಾತದ ಬುಡಕ್ಕೆ ತೆರಳಬಾರದು. ಈ ಹಿಂದೆ ಅನೇಕರು ಪ್ರಾಣ ಕಳೆದುಕೊಂಡಿದ್ದರಿಂದ ಜಲಪಾತದ ಬಳಿ ಮುನ್ನೆಚ್ಚರಿಕೆ ಫಲಕವನ್ನೂ ಅಳವಡಿಸಲಾಗಿದೆ. ಭಕ್ತರು ನೀರಿಗಿಳಿಯದೆ ದೂರದಿಂದಲೇ ಜಲಪಾತದ ಸೌಂದರ್ಯವನ್ನು ಸವಿಯಲು ಯಾವ ಅಡ್ಡಿಯೂ ಇಲ್ಲ.
– ಆನಂದ ಕಲ್ಲಗದ್ದೆ ವ್ಯವಸ್ಥಾಪಕರು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.