‘ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ಅಗತ್ಯ’
Team Udayavani, May 12, 2018, 4:16 PM IST
ಬೆಳ್ತಂಗಡಿ: ಬದುಕಿನಲ್ಲಿ ನಾವು ಏನು ಮಾಡಿದ್ದೇವೆಂಬುದನ್ನು ಅರಿತರೇ ನಮ್ಮ ದೇಶ ರಾಮ ರಾಜ್ಯವಾಗುತ್ತದೆ. ನಾವು ಭೂಮಿ ಮೇಲೆ ಇರುವಷ್ಟು ದಿನ ದೇಶಕ್ಕೆ ಕಿಂಚಿತ್ತು ಕೊಡುಗೆ ನೀಡಲು ಪ್ರಯತ್ನಿಸಬೇಕು ಎಂದು ಯಕ್ಷಧ್ರುವ ಫೌಂಡೇಶನ್‌ನ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಅವರು ಶಾಲಿನಿ ಸೇವಾ ಪ್ರತಿಷ್ಠಾನ ಗುಜ್ಜೊಟ್ಟು ಗರ್ಡಾಡಿ ಇದರ ಆಶ್ರಯದಲ್ಲಿ ದಿ| ಶಾಲಿನಿ ಅವರ ಪುಣ್ಯಸ್ಮರಣೆ ಹಾಗೂ ಶಾಲಿನಿ ಸೇವಾ ಪ್ರತಿಷ್ಠಾನದ 3ನೇ ವರ್ಷದ ಸೇವಾ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಎಲ್ಲವನ್ನು ಮೆಟ್ಟಿ ನಿಂತು ಸನ್ಮಾರ್ಗದಲ್ಲಿ ನಡೆದರೆ ಜಯ ಖಂಡಿತ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟರ ಭವನ ಹಾಗೂ ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ- ಪರೇಟವ್ ಸೊಸೈಟಿ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು.
ಬದುಕಿನಲ್ಲಿ ಒಬ್ಬರೊಬ್ಬರು ಅರ್ಥ ಮಾಡಿಕೊಂಡು ಬಾಳಬೇಕು ಎಂದರು. ಕಕ್ಕೆಪದವು ಎಲ್.ಸಿ.ಆರ್ ಇಂಡಿಯನ್ ಪ.ಪೂ. ಕಾಲೇಜಿನ ಉಪನ್ಯಾಸಕಿ ವಿಂದ್ಯಾಶ್ರೀ ಮಾತನಾಡಿ, ನಾವು ಬದುಕಿನಲ್ಲಿ ಏನು ಮಾಡಿದ್ದೇವೆ ಎಂಬುದು ಮುಖ್ಯ ಎಂದರು.
ತಾರನಾಥ ಶೆಟ್ಟಿ ಮಾತನಾಡಿ, ಶಾಲಿನಿ ನೆನಪು ಸಮಾಜದಲ್ಲಿ ಶಾಶ್ವತವಾಗಿ ಉಳಿಯಬೇಕೆಂಬ ನಿಟ್ಟಿನಲ್ಲಿ ಸೇವಾ ಪ್ರತಿಷ್ಠಾನ ಸ್ಥಾಪಿಸಿ ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ತುಮಕೂರು ಅನ್ನಪೂರ್ಣ ಹಾಸ್ಪಿಟಾಲಿಟಿ ಸರ್ವಿಸ್‌ನ ಆಡಳಿತ ನಿರ್ದೇಶಕ ಹರೀಶ್ ಶೆಟ್ಟಿ ಮಾತನಾಡಿದರು. ಪಾರಂಕಿ ಮಹಿಷಮರ್ದಿನಿ ಕ್ಷೇತ್ರದ ಪ್ರ. ಅರ್ಚಕ ಶ್ರೀಧರ ರಾವ್ ಪೇಜಾವರ, ನಟ ಹಿತೇಶ್ ಎಕ್ಕಾರು ಉಪಸ್ಥಿತರಿದ್ದರು. ಉಪನ್ಯಾಸಕಿ ದಿವ್ಯಶ್ರೀ ನಿರೂಪಿಸಿ, ಸುರೇಶ್ ಶೆಟ್ಟಿ ಲಾೖಲ ವಂದಿಸಿದರು.
ಸಾಧಕರಿಗೆ ಸಮ್ಮಾನ
ಪ್ರಗತಿಪರ ಕೃಷಿಕರು, ಕಂಬಳ ಕ್ರೀಡೆ ಪ್ರೋತ್ಸಾಹಕ ಶ್ರೀನಿವಾಸ್ ಶೆಟ್ಟಿ ಹಂಕರ್ ಜಾಲು, ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ, ನಿರೂಪಕ, ಶಿಕ್ಷಕ ಧರಣೇಂದ್ರ ಕೆ. ಜೈನ್ ಅವರನ್ನು ಪ್ರತಿಷ್ಠಾನ ವತಿಯಿಂದ ಸಮ್ಮಾನಿಸಲಾಯಿತು. ವಿದ್ಯಾರ್ಥಿ ನಿಶಾ ಶೆಟ್ಟಿ ಅವರ ಕಲಿಗೆ ಸಹಕರಿಸಲು ದತ್ತು ಸ್ವಿಕಾರ ಮಾಡಲಾಯಿತು. ವಿದ್ಯಾರ್ಥಿಗಳಾದ ಅರ್ಚನಾ, ರಚನಾ, ಸುಮನ್ ಶೆಟ್ಟಿ ಸಹಿತ 10 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.