weather ಆಧಾರಿತ ವಿಮಾ ಯೋಜನೆ; ಕಂತು ಪ್ರಕ್ರಿಯೆ ವಿಳಂಬ ಅಡಿಕೆ, ಕಾಳುಮೆಣಸು ಬೆಳೆಗಾರರ ಆತಂಕ
Team Udayavani, Jun 25, 2023, 7:56 AM IST
ಪುತ್ತೂರು: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ವರದಾನವಾಗಿದ್ದ ಹವಾಮಾನ ಆಧಾರಿತ ವಿಮಾ ಯೋಜನೆಯ 2023-24ನೇ ಸಾಲಿನ ವಿಮಾ ಕಂತು ತುಂಬುವ ಅವಧಿಯ ಮುಕ್ತಾಯ ದಿನ ಸಮೀಪಿಸಿ ದರೂ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ.
ಬೆಳೆಗಾರರು ಕೃಷಿ ಪ್ರಾಥಮಿಕ ಸಂಘ, ಬ್ಯಾಂಕ್‌ಗಳಿಗೆ ತೆರಳಿ ವಿಚಾರಿಸುತ್ತಿದ್ದರೂ ಸರಕಾರದ ಹಂತದಿಂದ ಯಾವುದೇ ಸುತ್ತೋಲೆ ಬಾರದ ಕಾರಣ ಕಂತು ತುಂಬಲು ಸಾಧ್ಯವಾಗಿಲ್ಲ.
ಆದೇಶವೇ ಬಂದಿಲ್ಲ
ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಕಂತು ತುಂಬುವ ವಿಧಾನದ ಬಗ್ಗೆ ಆದೇಶ ತೋಟಗಾರಿಕೆ ಇಲಾಖೆಯ ಮೂಲಕ ಸಹಕಾರ ಸಂಘಗಳಿಗೆ ಬರುತ್ತದೆ.ಆದರೆ ಈ ಬಾರಿ ಜೂನ್ ಕೊನೆಯಾಗುತ್ತಾ ಬಂದರೂ ಕಂತು ಪಡೆಯುವ ಬಗ್ಗೆ ಅಧಿಸೂಚನೆ, ಸುತ್ತೋಲೆ ತಲುಪಿಲ್ಲ.
ಟೆಂಡರ್ ವಿಳಂಬ
ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ವಿಮಾ ಸಂಸ್ಥೆಗಳಿಗೆ ನೀಡಲಾಗಿದ್ದ ಮೂರು ವರ್ಷಗಳ ಅವಧಿ ಮುಕ್ತಾಯಗೊಂಡಿದೆ. ಹೊಸ ದಾಗಿ ಟೆಂಡರ್ ಆಹ್ವಾನಿಸಲಾಗಿದೆ. ಆ ಪ್ರಕ್ರಿಯೆ ತುಸು ವಿಳಂಬವಾದ ಕಾರಣ ಕಂತು ತುಂಬುವ ಪ್ರಕ್ರಿಯೆ ಆರಂಭಗೊಂಡಿಲ್ಲ ಅನ್ನುವ ಉತ್ತರ ಬರುತ್ತಿದೆ. ಆದರೆ ಮೂಲಗಳ ಪ್ರಕಾರ ಟೆಂಡರ್ ಪಡೆಯಲು ವಿಮಾ ಕಂಪೆನಿಗಳು ಮುಂದೆ ಬಂದಿಲ್ಲ. ಹೀಗಾಗಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ವಿಮಾ ಕಂಪೆನಿಗಳು ಟೆಂಡರ್ ಪಡೆ ಯದಿದ್ದರೆ ಯೋಜನೆ ಅನುಷ್ಠಾನ ಇನ್ನಷ್ಟು ವಿಳಂಬವಾಗಲಿದೆ.
ಅಡಿಕೆಗೆ ಇಲ್ಲ?
ಈ ಬಾರಿ ಹವಾಮಾನ ವಿಮಾ ಯೋಜನೆಯ ವ್ಯಾಪ್ತಿಯಿಂದ ವಾಣಿಜ್ಯ ಬೆಳೆಯಾಗಿರುವ ಕಾರಣಕ್ಕೆ ಅಡಿಕೆಯನ್ನು ಹೊರಗಿಡಲಾಗಿದೆ ಅನ್ನುವ ಅನುಮಾನ ವ್ಯಾಪಕವಾಗಿ ಹಬ್ಬಿದೆ. ಆದರೆ ಇದನ್ನು ತೋಟ ಗಾರಿಕೆ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದಾರೆ.
ವಿಳಂಬಕ್ಕೆ ಕಾರಣ?
ಅಡಿಕೆ ಮತ್ತು ಕಾಳು ಮೆಣಸಿನ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ಮತ್ತು ಭತ್ತದ ಬೆಳೆಗಿರುವ ಫಸಲು ವಿಮಾ ಯೋಜನೆಯು ದಿನನಿತ್ಯದ ಮಳೆ ಮತ್ತು ಉಷ್ಣಾಂಶ ಮಾಹಿತಿ ಮೇಲೆ ತೀರ್ಮಾನವಾಗುತ್ತದೆ. ರೈತರಿಗೆ ವಿಮೆ ಪಡೆಯಲು ಮಳೆ ಮತ್ತು ಹವಾಮಾನ ಆಧಾರಿತ ಅಂಕಿ ಅಂಶದ ಟರ್ಮ್ ಶೀಟ್ ಪ್ರಧಾನ ಪಾತ್ರ ವಹಿಸುತ್ತದೆ. ಈ ಟರ್ಮ್ ಶೀಟ್ ಆಧಾರದಲ್ಲಿ ರಾಜ್ಯ ಸರಕಾರ ವಿಮಾ ಏಜೆನ್ಸಿ ನಿಗದಿಪಡಿಸಲು ಟೆಂಡರ್ ಕರೆಯುತ್ತದೆ. ಟೆಂಡರ್ ಪ್ರಕ್ರಿಯೆ ಮೇ ತಿಂಗಳಲ್ಲಿ ಮುಗಿದು ಜೂ. 30ರ ಒಳಗೆ ರೈತರು ವಿಮಾ ಹಣ ಪಾವತಿಸಬೇಕು. ಈ ಹಿಂದೆ ರಾಜ್ಯ ಸರಕಾರ ನಿಗದಿಪಡಿಸಿರುವ ವಿಮಾ ಶೇರಿನ ಬಗ್ಗೆಯೂ ಕಂಪೆನಿ ಗಳಿಗೆ ಒಪ್ಪಿಗೆ ಇರಲಿಲ್ಲ. ಕಂಪೆನಿ ಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆ ನೆರವಿನಿಂದ ರೈತರಿಂದ ಜೂನ್ ಅಂತ್ಯದಲ್ಲಿ ವಿಮಾ ಕಂತು ಕಟ್ಟಿಸಿ ಕೊಳ್ಳದಿದ್ದರೆ ಯೋಜ ನೆಯ ಉದ್ದೇಶವೇ ವಿಫಲವಾಗುತ್ತದೆ. ರೈತರಿಗೆ ದೊಡ್ಡ ನಷ್ಟ ಲಆಗಲಿದೆ.
36 ಬೆಳೆಗಳಿಗೆ
ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ
ಹವಾಮಾನ ಆಧಾರಿತ
ಬೆಳೆ ವಿಮಾ ಯೋಜನೆಯ ವಿಳಂಬದ ನಡುವೆ 2023-24ನೇ ಸಾಲಿನ ಮುಂಗಾರು ಹಂಗಾಮಿ ನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು 36 ಕೃಷಿ ಬೆಳೆಗಳಿಗೆ ಅನ್ವಯ ಆಗುವಂತೆ ಅನುಷ್ಠಾನಗೊಳಿಸಲಾಗಿದೆ. ಮೂರು ವರ್ಷಗಳ ಬದಲು ಒಂದೇ ವರ್ಷಕ್ಕೆ ಸೀಮಿತಗೊಳಿಸಿ ಅನುಮೋದನೆ ನೀಡಿದೆ. ಅವಿ ಭಜಿತ ದ.ಕ. ಜಿಲ್ಲೆಯಲ್ಲಿ ಭತ್ತಕ್ಕೆ ಈ ವಿಮಾ ಯೋಜನೆ ಅನ್ವಯ ಆಗಲಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ವಿಮಾ ನವೀಕರಣ ಆಗಿಲ್ಲ.ಪ್ರೀಮಿಯಂ ಮೊತ್ತದ ವಿಚಾರದಲ್ಲಿಯೂ ಅಂತಿಮ ತೀರ್ಮಾನ ಬಾಕಿ ಇದೆ. ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ದಿನಗಳು ಬೇಕಿದ್ದು, ಅದಾದ ಬಳಿಕ ಅನುಷ್ಠಾನ ಆಗಲಿದೆ. ವಿಮಾ ಯೋಜನೆಯಿಂದ ಅಡಿಕೆ ಕೃಷಿ ಕೈ ಬಿಡುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ.
-ಶಕೀಲ್ ಅಹಮದ್, ಇ ಆಡಳಿತ ಯೋಜನಾ ನಿರ್ವಹಣೆ ಘಟಕ
ತೋಟಗಾರಿಕೆ ಜಂಟಿ ನಿರ್ದೇಶಕ, ಬೆಂಗಳೂರು
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.