ಅಂಗವಿಕಲರ ಪುನರ್‌ವಸತಿ ಕಾರ್ಯಕರ್ತರು: 7 ತಿಂಗಳಿನಿಂದ ಗೌರವಧನ ಇಲ್ಲ


Team Udayavani, Mar 5, 2022, 4:56 PM IST

 ಅಂಗವಿಕಲರ ಪುನರ್‌ವಸತಿ ಕಾರ್ಯಕರ್ತರು: 7 ತಿಂಗಳಿನಿಂದ ಗೌರವಧನ ಇಲ್ಲ

ಪುತ್ತೂರು: ಕನಿಷ್ಠ ಗೌರವಧನ ದೊಂದಿಗೆ ದುಡಿಯುತ್ತಿರುವ ಅಂಗವಿಕಲರ ಪುನರ್‌ವಸತಿ ಕಾರ್ಯಕರ್ತರಿಗೆ ಕಳೆದ ಏಳು ತಿಂಗಳಿನಿಂದ ಗೌರವಧನವೇ ಪಾವತಿ ಆಗಿಲ್ಲ ತಾಲೂಕು ಕೇಂದ್ರ ಹಾಗೂ ಪ್ರತೀ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾರ್ಯಕರ್ತರು ಇದ್ದು ಅಂಗವಿಕಲರ ಅನು ಕೂಲಕ್ಕೆಂದು ನಿಯೋಜಿಸಲಾಗಿದೆ. ರಾಜ್ಯಾ ದ್ಯಂತ ಈ ಸಮಸ್ಯೆ ಇದ್ದು ಕಾರ್ಯಕರ್ತರು ಗೌರವ ಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಪುನರ್ವಸತಿ ಕಾರ್ಯಕರ್ತರು
ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ 2005 ರಲ್ಲಿ ಅಂಗವಿಕಲರ ಪುನರ್ವಸತಿ ಯೋಜನೆ ಜಾರಿಗೊಳಿಸಿದ್ದು ತಾಲೂಕು ಕೇಂದ್ರಕ್ಕೆ ಒಬ್ಬ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಹಾಗೂ ಪ್ರತೀ ಗ್ರಾ.ಪಂ.ಗೆ ಒಬ್ಬರಂತೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನ ಆಧಾರದಲ್ಲಿ ನಿಯೋಜಿಸಿದೆ. ನಗರದಲ್ಲಿ ನಗರ ಪುನರ್ವಸತಿ ಕಾರ್ಯಕರ್ತರು ಇದ್ದಾರೆ. ಆಯಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸ್ಥಳಾವಕಾಶ ನೀಡಿದ್ದು ಗ್ರಾಮ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಏನು ಜವಾಬ್ದಾರಿ
ಸರಕಾರ ವಿಕಲಚೇತನರಿಗಾಗಿ ಜಾರಿಗೊಳಿಸುವ ನಾನಾ ಯೋಜನೆಗಳು ಮತ್ತು ಸೌಕರ್ಯಗಳ ಬಗ್ಗೆ ಮಾಹಿತಿ ನೀಡುವುದು ಇವರ ಪ್ರಮುಖ ಕೆಲಸ. ಮನೆ-ಮನೆಗೆ ತೆರಳಿ ಸರ್ವೇ ಮಾಡಿ ಅಂಗವಿಕಲತನ, ಎಂಡೋಪೀಡಿತರ ನಿಖರ ಅಂಕಿ-ಅಂಶಗಳ ಕ್ರೋಢೀಕರಣ, ದೊರೆತಿರುವ ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಮಾಸಾಶನ, ಉಚಿತ ಬಸ್‌ಪಾಸ್‌, ವೈದ್ಯಕೀಯ ಪ್ರಮಾಣ ಪತ್ರಗಳನ್ನೂ ಕಾರ್ಯಕರ್ತರು ಅಂಗವಿಕಲರಿಗೆ ದೊರಕಿಸಿಕೊಡುತ್ತಾರೆ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ತಳಮಟ್ಟದಲ್ಲಿ ಈ ಕೆಲಸ ನಿರ್ವಹಿಸಿ ವರದಿಯನ್ನು ತಾ| ಪುನ ರ್ವಸತಿ ಕಾರ್ಯ ಕರ್ತ ರಿಗೆ ಸಲ್ಲಿಸುತ್ತಾರೆ. ಅಲ್ಲಿಂದ ಜಿಲ್ಲಾಧಿ ಕಾರಿ ಮೂಲಕ ಸರಕಾರಕ್ಕೆ ಸಲ್ಲಿಕೆ ಯಾಗುತ್ತದೆ.

ಗೌರವಧನ ಬಂದಿಲ್ಲ
2005ರಲ್ಲಿ ಯೋಜನೆ ಆರಂಭಗೊಂಡಾಗ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮಾಸಿಕ 750ರೂ., ತಾಲೂಕು ಕೇಂದ್ರದಲ್ಲಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತಗೆ 2 ಸಾವಿರ ರೂ. ಗೌರವಧನ ನೀಡಲಾಗುತ್ತಿತ್ತು. ಪ್ರಸ್ತುತ ಗ್ರಾಮೀಣ ಪುನರ್ವಸತಿ ಕಾರ್ಯಕರ್ತಗೆ 6,000 ರೂ., ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತಗೆ 12 ಸಾವಿರ ರೂ. ಮಾಸಿಕ ಗೌರವಧನ ನಿಗದಿ ಆಗಿದೆ. ಕಳೆದ ಏಳು ತಿಂಗಳಿನಿಂದ ಗೌರವಧನ ಬಾರದಿರುವ ಕಾರಣ ಕಾರ್ಯಕರ್ತರ ಜೀವನ ನಿರ್ವಹಣೆ ದುಸ್ತರವೆನಿಸಿದೆ. ಕಾಲ-ಕಾಲಕ್ಕೆ ನಡೆಯುವ ಸಭೆ, ಮಾಹಿತಿ ಸಂಗ್ರಹ ಮೊದಲಾದವುಗಳಿಗೆ ಆಗುತ್ತಿರುವ ಖರ್ಚುಗಳು ಹೆಚ್ಚುತ್ತಿದ್ದು, ಗೌರವಧನ ಸಾಲುತ್ತಿಲ್ಲ. ಗೌರವಧನ ಹೆಚ್ಚಳಗೊಳಿಸುವ ಬೇಡಿಕೆ ನಡುವೆಯೇ ಇರುವ ಗೌರವಧನ ಮೊತ್ತವು ಪಾವತಿ ಆಗಿಲ್ಲ. ನಾವು ಜೀವನ ಸಾಗಿಸುವುದು ಹೇಗೆ ಎಂದು ಕಾರ್ಯಕರ್ತರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಜನಸಂಖ್ಯೆಯಲ್ಲಿ ಶೇ.5 ರಷ್ಟು ವಿಶೇಷ ಚೇತನರಿದ್ದಾರೆ. ಗ್ರಾಮಾಂತರ ವಿಶೇಷ ಚೇತನರಿಗೆ ಸರಕಾರ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಸರಕಾರ 2007-08ರಲ್ಲಿ 30 ಜಿಲ್ಲೆ ಒಳಗೊಂಡಂತೆ ಪ್ರತೀ ಗ್ರಾಮ ಪಂಚಾಯತ್‌ಗಳಿಗೆ ಅಂಗವಿಕಲರನ್ನೇ ಅಂಗವಿಕಲರ ಪುನರ್ವಸತಿಗಾಗಿ ಗೌರವಧನದ ಆಧಾರದ ಮೇಲೆ ಆಯ್ಕೆ ಮಾಡಿ ಜವಾಬ್ದಾರಿ ನೀಡಿತು. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ 5150 ಪುನರ್ವಸತಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.

ಗೌರವಧನ ದ್ವಿಗುಣ:
ಸಿಗದ ಪ್ರಯೋಜನ
ಕಳೆದ ವರ್ಷ ಜನವರಿಯಲ್ಲಿ ಎಂ.ಆರ್‌.ಡಬ್ಲ್ಯು., ವಿ.ಆರ್‌.ಡಬ್ಲ್ಯು. ಕಾರ್ಯಕರ್ತರ ಗೌರವಧನ 3 ಸಾವಿರ ರೂ.ನಿಂದ 6 ಸಾವಿರ ರೂ., ಹಾಗೂ ಯು.ಆರ್‌.ಡಬ್ಲ್ಯು ಕಾರ್ಯಕರ್ತರ ಗೌರವಧನ 6 ಸಾವಿರದಿಂದ 12 ಸಾವಿರ ರೂ. ಗೆ ಹೆಚ್ಚಳಗೊಳಿಸಿತು. ಫೆಬ್ರವರಿಯಿಂದಲೇ ಗೌರವಧನ ಹೆಚ್ಚಳವಾಗಲಿದೆ ಎಂದು ಅಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಹೇಳಿದ್ದರು. ಆದರೆ ಜುಲೈ ತಿಂಗಳ ತನಕ ಗೌರವಧನ ಪಾವತಿ ಆಗಿದ್ದು ಅನಂತರ ಈ ತನಕ ಪಾವತಿ ಆಗಿಲ್ಲ.

ಗಮನ ಹರಿಸಲಾಗುವುದು
ಗೌರವಧನ ಪಾವತಿ ವಿಳಂಬದ ಬಗ್ಗೆ ಕಾರ್ಯಕರ್ತರು ಪ್ರಸ್ತಾವಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿ ಜತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
 -ಡಾ|ರಾಜೇಂದ್ರ ಕೆ.ವಿ.,ಜಿಲ್ಲಾಧಿಕಾರಿ, ದ.ಕ

ಗಮನಕ್ಕೆ ತಂದಿದ್ದೇವೆ
ತಿಂಗಳ ಗೌರವಧನವನ್ನು ನಂಬಿ ಜೀವನ ನಿರ್ವಹಿಸುವ ನಮಗೆ ಕಳೆದ ಏಳು ತಿಂಗಳಿನಿಂದ ಗೌರವಧನ ಪಾವತಿ ಆಗಿಲ್ಲ. ಇದರಿಂದ ಜೀವನ ನಿರ್ವಹಿಸುವುದು ಕಷ್ಟಕರವಾಗಿದೆ. ಜನಪ್ರತಿನಿಧಿಗಳಿಗೆ, ಮೇಲಾಧಿಕಾರಿಗಳಿಗೆ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೇವೆ.
-ನವೀನ್‌ ಕುಮಾರ್‌,
ತಾಲೂಕು ಎಂಆರ್‌ಡಬ್ಲ್ಯು ಕಾರ್ಯಕರ್ತ ಪುತ್ತೂರು

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.