ಅಂಕ ಗಳಿಕೆ: ಎಸೆಸೆಲ್ಸಿ ಮಕ್ಕಳಿಗೆ ಕಾರ್ಯಾಗಾರ
ಬೆಳ್ತಂಗಡಿ: 4,091 ಮಕ್ಕಳ ದಾಖಲಾತಿ
Team Udayavani, Mar 24, 2022, 10:55 AM IST
ಬೆಳ್ತಂಗಡಿ: ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆ ಮೇಲೆ ಬಿದ್ದಿದ್ದ ಕೊರೊನಾ ಕರಿಛಾಯೆ ಪ್ರಸಕ್ತ ವರ್ಷ ಮಾಸುತ್ತಾ ಬಂದಿದ್ದರಿಂದ ಶಿಕ್ಷಣ ಇಲಾಖೆ ಎಸೆಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಆದರೆ ಕಠಿನ ವಿಷಯಗಳೆಡೆಗೆ ಮಕ್ಕಳ ಆಸಕ್ತಿ ಕ್ಷೀಣಿಸಬಾರದು ಎನ್ನುವ ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯಡಿ ಎಸೆಸೆಲ್ಸಿ ಮಕ್ಕಳಿಗೆ ವಿಷಯವಾರು ಪೂರ್ವಸಿದ್ಧತೆ ಕಾರ್ಯಾಗಾರ ನಡೆಸಿದೆ.
ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ತರಗತಿಯಲ್ಲೇ ದಿನ ದೂಡಿದ್ದ ಮಕ್ಕಳಿಗೆ ಪ್ರಸಕ್ತ ವರ್ಷ ತರಗತಿಗೆ ನಂಟು ಬಿದ್ದಿದ್ದರಿಂದ ಮಕ್ಕಳಿಂದ ಹೆಚ್ಚಾಗಿ ಪೋಷಕರಿಗೆ ರಿಲೀಫ್ ಸಿಕ್ಕಂತಾಗಿದೆ. ಕಳೆದ ಅಕ್ಟೋಬರ್ ತಿಂಗಳಿಂದ ಮಕ್ಕಳು ನಿರಂತರ ತರಗತಿಗೆ ಹಾಜರಾಗಿರುವುದರಿಂದ ಈ ವರ್ಷ ಫಲಿತಾಂಶದ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ.
ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಹಿನ್ನೆಲೆ ಆಬೆjಕ್ಟಿವ್ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ವರ್ಷ ರಾಜ್ಯದಲ್ಲಿ ಮಾ.28 ರಿಂದ ಎ.11 ರವರೆಗೆ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ಕೈಗೊಂಡಿದೆ.
ಮೂರು ತಾಸು ಪರೀಕ್ಷೆಗೆ ಹಾಜರಾಗಬೇಕಿರುವುದರಿಂದ ಮಕ್ಕಳ ಮನಃ ಸ್ಥಿತಿ ಸರಿಹೊಂದಿಸುವ ಜತೆಗೆ ಉತ್ತಮ ಅಂಕ ಫಸಲಿಗಾಗಿ ಶಿಕ್ಷಣ ಇಲಾಖೆ ನಿರಂತರ ಪುನರ್ ಮನನ ತರಗತಿ ಹಮ್ಮಿಕೊಳ್ಳುತ್ತಿದೆ. ವಿಷಯವಾರು ಹಿಂದುಳಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಈಗಾಗಲೆ ಕಾರ್ಯಾಗಾರ ನಡೆಸಲಾಗಿದೆ.
ಪ್ರತೀ ವರ್ಷ ಮರು ಪರೀಕ್ಷೆ ಬರೆಯುವ ಸಂಖ್ಯೆ ಕನಿಷ್ಠ 100 ಅಂಕಿ ಮೀರುತ್ತಿತ್ತು. ಆದರೆ ಕಳೆದ ಪರೀಕ್ಷೆಗೆ ಹಾಜರಾದವರೆಲ್ಲ ತೇರ್ಗಡೆ ಹೊಂದಿದ್ದರಿಂದ ಈ ವರ್ಷ ಮರು ಪರೀಕ್ಷೆ ಬರೆಯುವವರ ಸಂಖ್ಯೆ ತಾಲೂಕಿನಲ್ಲಿ ಕೇವಲ 13 ಕ್ಕಿಳಿದಿದೆ ಎಂಬುದು ಗಮನಾರ್ಹ. ತಾಲೂಕಿನ 13 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ಇರುವುದರಿಂದ ತೃತೀಯ ಭಾಷೆ ತುಳು ಬರೆಯುವ ಮಕ್ಕಳ ಸಂಖ್ಯೆ ಹೆಚ್ಚಿರಲಿದೆ.
ಕಳೆದ ಬಾರಿ ಪ್ರಥಮ, ದ್ವಿತೀಯ, ತೃತೀಯ ಭಾಷೆ ಸೇರಿ ತಲಾ 40 ಅಂಕದಂತೆ 120 ಅಂಕ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿ 120 ಅಂಕ ಸೇರಿ ಎರಡೇ ಪರೀಕ್ಷೆ ಹಮ್ಮಿಕೊಂಡಿತ್ತು. ಆದರೆ ಈ ವರ್ಷ 6 ವಿಷಯವಾರು ಪ್ರತ್ಯೇಕ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ, ಗಣಿತ, ಸಮಾಜ ಹಾಗೂ ವಿಜ್ಞಾನ ಪರೀಕ್ಷೆ ಬರೆಯಲು ಹೆಚ್ಚುವರಿ 15 ನಿಮಿಷದ ಸಮಯವಕಾಶ ನೀಡಲಾಗಿದೆ.
4,091 ವಿದ್ಯಾರ್ಥಿಗಳು
ಬೆಳ್ತಂಗಡಿ ತಾಲೂಕಿನ ಒಟ್ಟು 4,091 ಮಂದಿ (ಬಾಲಕರು-2126, ಬಾಲಕಿಯರು- 1965) ಎಸೆಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳ ದಾಖಲಾತಿಯಿದೆ. ಪ್ರತೀ ವರ್ಷ 13 ಕೇಂದ್ರವಿರುತ್ತಿದ್ದು, ಪ್ರಸಕ್ತ ವರ್ಷ ಬೆದ್ರಬೆಟ್ಟು ಹೆಚ್ಚುವರಿ ಪರೀಕ್ಷಾ ಕೇಂದ್ರ ಸೇರಿ 14 ಪರೀಕ್ಷಾ ಕೇಂದ್ರವನ್ನು ಮಾಡಲಾಗಿದೆ.
ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತೀ ಕೇಂದ್ರದಲ್ಲಿ ಎರಡು ಪ್ರತ್ಯೇಕ ಪರೀಕ್ಷಾ ಕೊಠಡಿ ಕಾಯ್ದಿರಿಸಲಾಗುತ್ತದೆ. ಆದರೆ ಈ ವರ್ಷ ಕೋವಿಡ್ ಕೇರ್ ಸೆಂಟರ್ ಇರುವುದಿಲ್ಲ. ಉಳಿದಂತೆ ಆರೋಗ್ಯ ತಪಾಸಣೆ, ಮಾಸ್ಕ್ ಎಂದಿನಂತೆ ಇರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಸಿದ್ಧತೆ ನಡೆದಿದೆ
ಮಾ. 28 ರಿಂದ ಎ.11ರ ವರೆಗೆ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ಶಾಲಾಹಂತದಿಂದ ಜಿಲ್ಲಾಹಂತದವರೆಗೆ ಸಿದ್ಧತೆ ನಡೆಸಲಾಗಿದೆ. ಮಕ್ಕಳು ಧೃತಿಗೆಡದೆ ಖುಷಿಯಿಂದ ಪರೀಕ್ಷೆಗೆ ಹಾಜರಾಗಬೇಕು. -ವಿರೂಪಾಕ್ಷಪ್ಪ ಎಚ್.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.