ಬೆಳಕಿಲ್ಲದ ಜೀವನಕ್ಕೆ ನೆರವಾದ ಯುವಕರ ತಂಡ
Team Udayavani, Jun 24, 2021, 3:50 AM IST
ಪುತ್ತೂರು: ನಗರಸಭೆ ವ್ಯಾಪ್ತಿಯ ತಾರಿಗುಡ್ಡೆಯಲ್ಲಿ ಸೋರುವ ಸೂರಿನೊಳಗೆ ಕನಿಷ್ಠ ಸ್ಥಿತಿಯಲ್ಲಿ ಜೀವನ ನಿರ್ವಹಿಸುತ್ತಿರುವ ಒಂಟಿ ವೃದ್ಧೆಯ ಬದುಕಿಗೆ ಯುವಕರ ತಂಡವೊಂದು ಆಸರೆ ನೀಡಲು ಮುಂದಡಿ ಇಟ್ಟಿದೆ.
ಅಪ್ಪಿ ಎಂಬ ವೃದ್ಧೆಯ ಒಬ್ಬಂಟಿ ಬದುಕಿನ ಬಗ್ಗೆ ಅರಿತುಕೊಂಡ ಪುತ್ತೂರಿನ ಅಭಿರಾಮ್ ಫ್ರೆಂಡ್ಸ್ ಎಂಬ ಯುವಕರ ತಂಡ ಪ್ರಥಮ ಹಂತದಲ್ಲಿ ಮನೆ ಪರಿಸರ ಸ್ವತ್ಛತೆ, ದುರಸ್ತಿಗೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಸೌಕರ್ಯ ಒದಗಿಸಲು ನಿರ್ಧರಿಸಿದೆ.
ಚಿಮಣಿ ದೀಪ:
ಅಪ್ಪಿ ಒಂಟಿಯಾಗಿ ವಾಸಿಸುತ್ತಿದ್ದು ತನ್ನ ಮುರುಕಲು ಮನೆಯೇ ಇವರಿಗೆ ಆಸರೆ. ವಿದ್ಯುತ್ ಸಂಪರ್ಕ ಇಲ್ಲದೆ ಚಿಮಣಿ ದೀಪವೇ ಬೆಳಕಿನ ದೀವಿಗೆ. ವಯೋಸಹಜ ಹಿನ್ನೆಲೆಯಲ್ಲಿ ದೃಷ್ಟಿ ಮಂದವಾಗಿದ್ದು ನಿತ್ಯದ ಬದುಕು ನರಕ ಸದೃಶವಾಗಿತ್ತು. ಪರಿಸ್ಥಿತಿ ಹೇಗಿದೆಯಂದರೆ ಈ ಮನೆಯಲ್ಲಿ ಶ್ವಾನಗಳು ಬಿಟ್ಟರೆ ಬೇರೆ ಯಾರೂ ಇಲ್ಲ. ಅಪ್ಪಿ ಅವರ ಬದು ಕಿನ ಸ್ಥಿತಿ ಮನಕಲಕುವಂತಹದು. ಮುಪ್ಪಿನ ಕಾಲದಲ್ಲಿ ಆರೈಕೆಗೆ ಯಾರೂ ಇಲ್ಲದ ಪರಿಸ್ಥಿತಿ ಅವರದ್ದು.
ಸ್ಪಂದಿಸಿದ ಯುವಕರ ತಂಡ:
ಚುನಾವಣೆ ಸಂದರ್ಭದಲ್ಲಿ ಮನೆ ಭೇಟಿ ಬಿಟ್ಟರೆ ಉಳಿದ ಸಂದರ್ಭದಲ್ಲಿ ಯಾರೂ ಬರುವವರಿಲ್ಲ ಅನ್ನುವುದಕ್ಕೆ ಈ ಮನೆ ಪರಿಸ್ಥಿತಿಯೇ ಉದಾಹರಣೆ. ತಾರಿಗುಡ್ಡೆ ಭಾಗದವರು, ಸ್ಥಳೀಯರು ಅಪ್ಪಿ ಅಕ್ಕ ಎಂದೇ ಕರೆಯಲ್ಪಡುವ ಈ ಅಜ್ಜಿಗೆ ಜತೆಗಾರರೇ ಇಲ್ಲದೆ ಒಂಟಿಯಾಗಿ ದಿನ ದೂಡುವ ಸ್ಥಿತಿ. ಈ ವಿಚಾರವನ್ನು ಅರಿತ 25ಕ್ಕೂ ಅಧಿಕ ಇರುವ ಯುವಕರ ಕ್ರೀಡಾ ತಂಡ ಅಭಿರಾಮ್ ಫ್ರೆಂಡ್ಸ್‌ನ ಸದಸ್ಯರು ಮನೆ ಭೇಟಿ ಮಾಡಿ ವೃದ್ಧೆಯ ಅಳಲು ಆಲಿಸಿದ್ದಾರೆ. ಸೋರುವ ಮಾಡು, ನೇತಾಡುತ್ತಿರುವ ಗೋಡೆ, ಕತ್ತಲು ವಾತಾ ವರಣಕ್ಕೆ ಬೆಳಕು ನೀಡುವ ಕಾರ್ಯ ಪ್ರಾರಂ ಭಿಸಿದ್ದಾರೆ. ಮನೆ ಛಾವಣಿಗೆ ಟಾರ್ಪಾಲು ಹಾಸಿ ತಾತ್ಕಾಲಿಕ ರಕ್ಷಣೆ ನೀಡಲಾಗಿದೆ.
ನಗರಸಭೆ ವ್ಯಾಪ್ತಿಯೊಳಗಿರುವ ಅಪ್ಪಿ ಅವರ ಮನೆ ಪರಿಸ್ಥಿತಿ ಕಂಡು ನೆರವಾಗಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಸ್ವತ್ಛತೆ, ದುರಸ್ತಿ ಕಾರ್ಯ ನಡೆಸಿದ್ದು, ಸಾರ್ವಜನಿಕರ ಸಹಕಾರ ಪಡೆದು ಮುಂದಿನ ಹಂತದ ಕೆಲಸ ಕಾರ್ಯಗಳನ್ನು ಮಾಡಲು ತೀರ್ಮಾನಿಸಿದ್ದೇವೆ. –ನವೀನ್ ರೈ ಪಂಜಳ, ಅಧ್ಯಕ್ಷರು, ಅಭಿರಾಮ್ ಫ್ರೆಂಡ್ಸ್ ಪುತ್ತೂರು
ಅಪ್ಪಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಮಸ್ಯೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ದಾಖಲೆ ಪತ್ರ ನೀಡುವಂತೆ ತಿಳಿಸಿದ್ದೇನೆ. ದಾಖಲೆ ಗಳಿದ್ದರೆ ನಗರಸಭೆಯಿಂದ ಮನೆ ದುರ ಸ್ತಿಗೆ ನೆರವು ನೀಡಲಾಗುತ್ತದೆ. ದಾಖಲೆ ಪತ್ರ ಸಮರ್ಪಕವಾಗಿಲ್ಲದಿದ್ದರೆ ಸಂಘ ಸಂಸ್ಥೆಗಳ ನೆರವು ಪಡೆದು ಸ್ಪಂದಿಸ ಲಾಗುವುದು. –ಜೀವಂಧರ್ ಜೈನ್, ಅಧ್ಯಕ್ಷರು, ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.