ಬ್ರಹ್ಮಗಿರಿ ಸರ್ಕಲ್: ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ
ಪೊಲೀಸ್ ಸಿಬಂದಿ ನೇಮಕ, ಬಸ್‌ನಿಲ್ದಾಣ ರಚನೆ ಅಗತ್ಯ
Team Udayavani, Apr 15, 2019, 6:30 AM IST
ಉಡುಪಿ: ನಗರದ ಪ್ರಮುಖ 5 ರಸ್ತೆಗಳು ಒಂದುಗೂಡುವ ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಜಾಸ್ತಿಯಾಗಿದ್ದು, ಇದರ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೆ ಹೋದರೆ ಮುಂದಿನ ದಿನಗಳಲ್ಲಿ ಬ್ರಹ್ಮಗಿರಿ ಸರ್ಕಲ್ ಅಪಘಾತದ ವಲಯವಾಗಿ ಗುರುತಿಸಿ ಕೊಳ್ಳುವ ಸಾಧ್ಯತೆ ಇದೆ.
ಬ್ರಹ್ಮಗಿರಿ ನಾಯರ್‌ಕೆರೆ ಮಾರ್ಗ, ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆ
ರಸ್ತೆ, ರಾಷ್ಟ್ರೀಯ ಹೆ¨ªಾರಿ 66ರ ಅಂಬಲಪಾಡಿ ಬೈಪಾಸ್‌ಗೆ ಸಂಪರ್ಕಿಸುವ ಅಜ್ಜರಕಾಡು ಮಾರ್ಗ, ಅಂಬಲಪಾಡಿ ಬೈಪಾಸ್‌ನಿಂದ ಉಡುಪಿಗೆ ಸಂಪರ್ಕಿ ಸುವ ರಸ್ತೆ ಹಾಗೂ ಉಡುಪಿ ತಾ.ಪಂ. ರಸ್ತೆ ಈ ಐದು ಮುಖ್ಯ ರಸ್ತೆಗಳು ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ಒಗ್ಗೂಡುತ್ತವೆ.
ಈ ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಬೆಳಗ್ಗೆ-ಸಂಜೆ ವಾಹನ ಓಡಾಟ ಜಾಸ್ತಿ
ಶೈಕ್ಷಣಿಕ ಸಂಸ್ಥೆ, ಆರೋಗ್ಯ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಈ ಜಂಕ್ಷನ್‌ನಲ್ಲಿ ಬೆಳಗ್ಗೆ, ಸಂಜೆ ಹೊತ್ತು ವಾಹನಗಳ ಸಂಚಾರ ಜಾಸ್ತಿ. ಬನ್ನಂಜೆ ಸಮೀಪವಿರುವ ತಾ.ಪಂ. ಕಚೇರಿಯಲ್ಲಿ ದಾಖಲೆ ಪತ್ರ ಪಡೆಯಲು ಹಾಗೂ ಇತರ ಕೆಲಸ ಕಾರ್ಯಗಳಿಗೆ ತೆರಳುವವರು ಈ ಮಾರ್ಗದ ಮೂಲಕವೇ ಹಾದು ಹೋಗುತ್ತಾರೆ. ಅಲ್ಲದೆ ಇಲ್ಲಿ ಪ್ರವಾಸಿ ಬಂಗಲೆ, ಎಸ್ಪಿ ಕಚೇರಿಗೂ ತೆರಳಲು ಈ ಮಾರ್ಗವನ್ನೇ ಬಳಸುತ್ತಾರೆ.
ಬ್ರಹ್ಮಗಿರಿ ಜಂಕ್ಷನ್‌ಗೆ ಹೊಂದಿ ಕೊಂಡಿರುವ ಲಯನ್ಸ್ ಭವನ , ಕಾಂಗ್ರೆಸ್ ಭವನದಲ್ಲಿ ಆಗಾಗ ಕಾರ್ಯಕ್ರಮ ನಡೆಯುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ಇದರಿಂದ ಸಾರ್ವಜನಿಕರು ಇನ್ನಷ್ಟು
ಸಮಸ್ಯೆ ಎದುರಿಸುತ್ತಾರೆ.
ಪಾರ್ಕಿಂಗ್ ಅವ್ಯವಸ್ಥೆ
ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ವಾಹನಗಳನ್ನು ರಸ್ತೆ ಬದಿಯಲ್ಲಿಯೇ ಪಾರ್ಕ್ ಮಾಡುತ್ತಿದ್ದಾರೆ. ಇಲ್ಲವಾದರೆ ವಾಹನ ಪಾರ್ಕಿಂಗ್‌ಗೆ ಒಳ ರಸ್ತೆಗಳಿಗೆ ತೆರಳಬೇಕಾಗುತ್ತದೆ.
ಬಸ್‌ನಿಲ್ದಾಣವಿಲ್ಲ
ಈ ಜಂಕ್ಷನ್‌ನಿಂದ ಉಡುಪಿ ಕಡೆಗೆ ಹೋಗುವ ಪ್ರಯಾಣಿಕರಿಗೆ ಬಸ್‌ನಿಲ್ದಾಣದ ವ್ಯವಸ್ಥೆ ಇಲ್ಲ. ಖಾಸಗಿ ಬಸ್ ಚಾಲಕರು ಎÇÉೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ. ಪ್ರಯಾಣಿಕರಿಗೆ ಬಸ್ ಏರಲು ಸಮರ್ಪಕ ನಿಲ್ದಾಣವಿಲ್ಲದೆ, ಬಸ್ ಬಂದಾಗ ಅಡ್ಡಾದಿಡ್ಡಿ ಓಡುತ್ತಾರೆ.
ಅದೆಷ್ಟೋ ಬಾರಿ ವಯೋವೃದ್ಧರು, ಮಹಿಳೆಯರು, ಮಕ್ಕಳು ಬಸ್ ಏರುವ ಭರದಲ್ಲಿ ಅಪಘಾತಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.
ಸಾಕಷ್ಟು ಸಮಸ್ಯೆ ಇರುವ ಈ ಜಂಕ್ಷನ್‌ನಲ್ಲಿ ಅಪಾಯ ಸಂಭವಿಸುವ ಮುನ್ನ ಸಂಚಾರಿ ಪೊಲೀಸರನ್ನು ನೇಮಿಸುವುದರೊಂದಿಗೆ ಬಸ್‌ನಿಲ್ದಾಣ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಕಾರ್ಯಪ್ರವೃತ್ತರಾಗಬೇಕಾಗಿದೆ.
ವಾಹನ ನಿಲುಗಡೆ ಹೆಚ್ಚಳ
ಬ್ರಹ್ಮಗಿರಿ ಸರ್ಕಲ್ ಬಳಿಯಿರುವ ಅಂಗಡಿ ಮುಂಗಟ್ಟುಗಳಿಗೆ ಬರುವ ಗ್ರಾಹಕರು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ನಗರಸಭೆ, ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ವಾಹನ ದಟ್ಟಣೆ ಇರುವ ಬ್ರಹ್ಮಗಿರಿ ಸರ್ಕಲ್ ಪ್ರದೇಶದ ಕೆಲವೆಡೆ ಈಗಾಗಲೇ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೆ ಕೆಲವೊಂದು ಪ್ರದೇಶಗಳನ್ನು ನೋ ಪಾರ್ಕಿಂಗ್ ಏರಿಯಾವನ್ನಾಗಿ ಮಾಡಲು ಇಲಾಖೆಯಿಂದ ನಗರಸಭೆಗೆ ವರದಿ ಕಳುಹಿಸಲಾಗಿದೆ.
-ನಿತ್ಯಾನಂದ,, ಪಿಎಸ್‌ಐ, ಸಂಚಾರಿ ಪೊಲೀಸ್ ಠಾಣೆ ಉಡುಪಿ.
ಪೊಲೀಸ್ ಸಿಬಂದಿ ನೇಮಿಸಿ
ಐದು ರಸ್ತೆಗಳು ಒಂದೆಡೆ ಕೂಡುವ ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ನಿತ್ಯ ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಇದರ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸ್ ಸಿಬಂದಿ ನಿಯೋಜಿಸಬೇಕು. ಐದು ರಸ್ತೆಗಳಿಗೂ ಹಂಪ್ಸ್ ಹಾಕುವ ಮೂಲಕ
ವಾಹನಗಳ ವೇಗಕ್ಕೆ ಕಡಿವಾಣ ಹಾಕಿದರೆ ಅಪಾಯ ತಪ್ಪಿಸಬಹುದು.
-ವಿನಾಯಕ ಭಟ್, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.