Kodi ಕಿನಾರೆಯಲ್ಲಿ 1 ಟನ್‌ ಪಾದರಕ್ಷೆ !

ಕ್ಲೀನ್‌ ಕುಂದಾಪುರ ಯೋಜನೆಯಡಿ ಕಡಲತಡಿ ಸ್ವತ್ಛತೆ; ನೆರೆಯಲ್ಲಿ ಕೊಚ್ಚಿ ಬಂದದ್ದು ಪಾದರಕ್ಷೆ, ವೈದ್ಯಕೀಯ ತ್ಯಾಜ್ಯ

Team Udayavani, Aug 6, 2024, 4:32 PM IST

Screenshot (115)

ಕುಂದಾಪುರ: ಕಳೆದ ಕೆಲ ಸಮಯಗಳಿಂದ ಪ್ರತಿ ವಾರ ಕೋಡಿ ಕಿನಾರೆಯ ಪರಿಸರವನ್ನು ಸ್ವತ್ಛಗೊಳಿಸುವ ಕ್ಲೀನ್‌ ಕುಂದಾಪುರ ಯೋಜನೆಯ ಸ್ವಯಂ ಸೇವಕರು, ರವಿವಾರ ಬೀಚ್‌ನ 200-300 ಮೀ. ವಿಸ್ತಾರದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಸಿದ ಸ್ವತ್ಛತಾ ಕಾರ್ಯದಲ್ಲಿ, ಕನಿಷ್ಠ 1 ಟನ್‌ ಪಾದರಕ್ಷೆಗಳ ಜತೆಗೆ ವೈದ್ಯಕೀಯ ತ್ಯಾಜ್ಯವಲ್ಲದೆ, ಇತರ ತ್ಯಾಜ್ಯಗಳನ್ನು ಗುರುತಿಸಿ ಸಂಗ್ರಹಿಸಿದ್ದಾರೆ. ಕಳೆದ ವಾರವೂ ಇದೇ ಮಾದರಿಯಲ್ಲಿ ತ್ಯಾಜ್ಯ ಸಂಗ್ರಹವಾಗಿತ್ತು.

ಕೊಚ್ಚಿ ಬಂದ ತ್ಯಾಜ್ಯ

ಕೆಲ ದಿನಗಳಿಂದ ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನದಿ, ಹಳ್ಳ ಹಾಗೂ ತೋಡುಗಳ ಸಂಗ್ರಹಿತ ತ್ಯಾಜ್ಯ ನೀರಿನೊಂದಿಗೆ ಹರಿದು ಸಮುದ್ರವನ್ನು ಸೇರುತ್ತಿದೆ. ರಾಜ್ಯದ ಬಹುತೇಕ ಅಣೆಕಟ್ಟುಗಳು ನೀರಿನ ಮಟ್ಟವನ್ನು ತಲುಪಿರುವುದರಿಂದ ಅಲ್ಲಿಂದ ಹೊರಬರುವ ನೀರು ಸಹ ಸಮುದ್ರವನ್ನು ಸೇರುತ್ತಿದೆ. ನೀರಿನೊಂದಿಗೆ
ಸಮುದ್ರವನ್ನು ಸೇರುವ ಈ ತ್ಯಾಜ್ಯಗಳನ್ನು, ಅಲೆಗಳು ಮತ್ತೆ ತೀರ ಪ್ರದೇಶಕ್ಕೆ ತರುವುದರಿಂದ ಸಮುದ್ರ ಕಿನಾರೆಯ ಪರಿಸರದಲ್ಲಿ ಪಾದರಕ್ಷೆಗಳು, ಪ್ಲಾಸ್ಟಿಕ್‌, ವೈದ್ಯಕೀಯ ತ್ಯಾಜ್ಯಗಳು ಎಲ್ಲೆಂದರಲ್ಲಿ ರಾಶಿ ಬಿದ್ದು ಅಸಹ್ಯ ವಾತಾವರಣ ನಿರ್ಮಾಣ ಮಾಡುತ್ತಿದೆ.

ಹಠಾತ್‌ ಏರಿಕೆ

ನಿರಂತರವಾಗಿ ತ್ಯಾಜ್ಯ ಸಂಗ್ರಹಣೆಯ ಮೂಲಕ ಕಿನಾರೆಯ ಸ್ವತ್ಛತೆಯನ್ನು ಕಾಪಿಡಲು ಶ್ರಮಿಸುತ್ತಿರುವ ಕ್ಷೀನ್‌ ಕುಂದಾಪುರದ ಕಾರ್ಯಕರ್ತರು ಕೆಲ ದಿನಗಳಿಂದ ಪಂಚಾಗಂಗಾವಳಿ ನದಿಗೆ ಹೊಂದಿಕೊಂಡಿರುವ ಕಡಲ ತೀರದಲ್ಲಿ ತ್ಯಾಜ್ಯದ ಹಠಾತ್‌ ಏರಿಕೆಯನ್ನು ಗಮನಿಸಿದ್ದಾರೆ.

ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹರಿಯುವ ವರಾಹಿ, ಸೌಪರ್ಣಿಕ, ಖೇಟಾ, ಕುಬಾj, ಚಕ್ರಾ ನದಿಗಳ ನೀರು, ಪಂಚಗಂಗಾವಳಿಯಲ್ಲಿ ಸಂಗಮವಾಗಿ ಅರಬ್ಬಿಯ ಕಡಲನ್ನು ಸೇರುವುದರಿಂದ ಸಹಜವಾಗಿ ಎರಡು ತಾಲ್ಲೂಕಿನ ನದಿ ತೀರ ಪ್ರದೇಶಗಳಿಗೆ ಬಂದು ಬೀಳುವ ತ್ಯಾಜ್ಯಗಳು ಒಟ್ಟಾಗಿ ಪಂಚಗಂಗಾವಳಿಯಲ್ಲಿ ಸೇರಿ ಅರಬ್ಬಿಯ ಕಡಲನ್ನು ಪ್ರವೇಶಿಸುತ್ತದೆ.

ಸ್ವಚ್ಛತೆಯಲ್ಲಿ ಭಾಗಿ

ಸಮುದ್ರ ಕಿನಾರೆ ಸ್ವತ್ಛವಾಗಿಡುವ ಮೂಲಕ ಸುಂದರ ಕುಂದಾಪುರದ ಕನಸುಗಳನ್ನು ಕಾಣುತ್ತಿರುವ ಕ್ಲೀನ್‌ ಕುಂದಾಪುರ ಸ್ವಯಂ ಸೇವಾ ಸಂಘಟನೆಯಲ್ಲಿ ಸೀಮಿತ ಕಾರ್ಯಕರ್ತರಿದ್ದರೂ ಉತ್ಸಾಹದಿಂದ ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಸ್ಥಳೀಯ ಪುರಸಭೆ, ಅರಣ್ಯ ಇಲಾಖೆಯ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡು ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಂಡದವರ ಕಾರ್ಯಶೈಲಿಯನ್ನು ಮೆಚ್ಚಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನ್ಯಾಯಾಧೀಶರು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಅಭಿನಂದಿಸಿದ್ದಾರೆ.

ವ್ಯತಿರಿಕ್ತ ಪರಿಣಾಮ

ಸಮುದ್ರ ಕಿನಾರೆಗಳನ್ನು ಮಳೆಗಾಲದ ಸಮಯದಲ್ಲಿ ಸ್ವತ್ಛಗೊಳಿಸುವುದು ಅತ್ಯಂತ ಗಮನಾರ್ಹ. ಮಳೆಗಾಲದ ಸಂದರ್ಭದಲ್ಲಿ ಒಟ್ಟಾಗುವ ತ್ಯಾಜ್ಯಗಳ ವಿಲೆವಾರಿ ಆಗದೆ ಇದ್ದಲ್ಲಿ, ಹಳೆಯ ತ್ಯಾಜ್ಯದ ಮೇಲೆ ಕೂತು, ಪದರಗಳಾಗಿ ಅವು ಕಿನಾರೆಯ ಮರಳಲ್ಲಿ ಹೂತು ಹೋಗುತ್ತದೆ. ಇದರಿಂದ ಸಮುದ್ರದ ಮತ್ಸ್ಯ ಸಂತತಿ, ಜಲಚರಗಳು, ಕಡಲಾಮೆ, ವಲಸೆ ಹಕ್ಕಿಗಳು ಹಾಗೂ ಇತರ ಜೀವಿಗಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.

-ಭರತ್‌ ಬಂಗೇರ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್.

ಮರುಬಳಕೆಯಾಗದ ತ್ಯಾಜ್ಯ

ಬಹುತೇಕ ತ್ಯಾಜ್ಯಗಳು ಮರು ಬಳಕೆ ಮಾಡಲಾಗದ ಹಾಗೂ ಮಾರುಕಟ್ಟೆಯಲ್ಲಿ ಕನಿಷ್ಠ ಮೌಲ್ಯವನ್ನು ಹೊಂದದೆ ಇರುವ ತ್ಯಾಜ್ಯವಾಗಿರುವುದರಿಂದ ಒಟ್ಟಾದ ತ್ಯಾಜ್ಯಗಳ ವಿಲೇವಾರಿ ಮಾಡುವುದು ಸ್ವಯಂ ಸೇವಕರಿಗೆ ಸವಾಲಿನ ಕೆಲಸವಾಗಿದೆ. ಸೀಮಿತ ಬೇಡಿಕೆ ಇರುವ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಕಳುಹಿಸುವುದು ಕೂಡ ಆರ್ಥಿಕ ವೆಚ್ಚವನ್ನು ಹೆಚ್ಚು ಮಾಡುತ್ತದೆ.

ಅಸಮರ್ಪಕ ನಿರ್ವಹಣೆ

ಪರಿಸರ ಹಾಗೂ ಕಡಲಿನ ಬಗ್ಗೆ ಆಸಕ್ತಿ ಇರುವ ಒಂದಷ್ಟು ಸ್ವಚ್ಚ ಮನಸ್ಸುಗಳುಒಗ್ಗೂಡಿದಾಗ, ಕ್ಲೀನ್‌ ಕುಂದಾಪುರ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಅಂತೆಯೇ ಸಾರ್ವಜನಿಕರು, ವ್ಯಾಪಾರಿಗಳು, ತ್ಯಾಜ್ಯ ಸಂಗ್ರಹಿಸುವವರು, ಕಸ ಸಂಗ್ರಹಿಸುವವರು ಮಾರಾಟದಿಂದ ಲಾಭ ಬರದೇ ಇದ್ದರೆ ಅದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವುದಿಲ್ಲ. ಅದೆಲ್ಲ ಹೀಗೆ ನದಿಯ ಮೂಲಕ ಸಮುದ್ರ ಸೇರುತ್ತದೆ. ಇಲ್ಲದಿದ್ದರೆ ಏಕಾಏಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಪ್ಪಲಿಯಂತಹ ಒಂದೇ ಮಾದರಿಯ ತ್ಯಾಜ್ಯ ಸಂಗ್ರಹವಾಗುವುದು ಕಷ್ಟ.

ಟಾಪ್ ನ್ಯೂಸ್

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

uUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗUdupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

Udupi ಶಿಕ್ಷಕರನ್ನು ಅವಮಾನಿಸಿದರೆ ಸಹಿಸಲು ಸಾಧ್ಯವಿಲ್ಲ: ಯಶ್‌ಪಾಲ್‌ ಸುವರ್ಣ

21

CM ಪ್ರತಿಕೃತಿಗೆ ಚಪ್ಪಲಿ ಏಟು; ಶಾಸಕ ಯಶ್‌ಪಾಲ್‌ ಸುವರ್ಣ ಸೇರಿ 11 ಮಂದಿ ವಿರುದ್ಧ ಎಫ್ಐಆರ್‌

car-parkala

Bramavara: ಅಪಘಾತ: ಸ್ಕೂಟಿ ಸವಾರ ಸಾವು

Hebri ಶತಾಯುಷಿ ಕಜ್ಕೆ ಮಂಜುನಾಥ ಕಾಮತ್ ನಿಧನ

Hebri ಶತಾಯುಷಿ ಕಜ್ಕೆ ಮಂಜುನಾಥ ಕಾಮತ್ ನಿಧನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaaaaaaaa

Train; ಕೆಟ್ಟು ನಿಂತ ‘ವಂದೇ ಭಾರತ್‌’ ಎಳೆದು ತಂದ ಗೂಡ್ಸ್‌ ರೈಲಿನ ಎಂಜಿನ್‌!

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Rain ದಕ್ಷಿಣ ಕನ್ನಡ : ಆಗಾಗ್ಗೆ ಬಿರುಸಿನ ಮಳೆ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿPilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Pilikula “ನಿಶ್ಶಬ್ದ ವಲಯ’ ಘೋಷಣೆಗೆ ಜಿಲ್ಲಾಧಿಕಾರಿಗೆ ಮನವಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫ‌ಸಲಿಗೆ ಅಪಾರ ಹಾನಿ

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Shiradi Ghat ಕೆಂಪುಹೊಳೆ ಬಳಿ ಅಪಘಾತ: ಎರಡು ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.