ಲೋಕಸಭಾ ಚುನಾವಣೆಗೆ 121ನೇ ಕಾಪು ವಿಧಾನಸಭಾ ಕ್ಷೇತ್ರ ಸಜ್ಜು
Team Udayavani, Apr 5, 2019, 6:30 AM IST
ಕಾಪು: ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಗೆ 121ನೇ ಕಾಪು ವಿಧಾನಸಭಾ ಕ್ಷೇತ್ರ ಸರ್ವ ರೀತಿಯಲ್ಲಿ ಸನ್ನದ್ಧಗೊಂಡಿದ್ದು, ಶಾಂತಿಯುತ ಮತದಾನ ಪ್ರಕ್ರಿಯೆಗೆ ವಿವಿಧ ರೀತಿಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ| ನಾಗರಾಜ್ ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ 9
ಫ್ಲೆಯಿಂಗ್ ಸ್ಕಾಡ್‌ಗಳನ್ನು ರಚಿಸಲಾಗಿದೆ. ಅದರೊಂದಿಗೆ ವಿಶೇಷ ಸ್ಕಾÌಡ್‌ಗಳನ್ನೂ ನಿಯೋಜಿಸಲಾಗಿದೆ. ಎಲ್ಲ ಅಧಿಕಾರಿಗಳು ಮತ್ತು
ಸಿಬಂದಿಗಳಿಗೆ ಒಂದು ಸುತ್ತಿನ ತರಬೇತಿ ನೀಡ ಲಾಗಿದ್ದು, ಎ. 7ರಂದು ಎರಡನೇ ಸುತ್ತಿನ ತರಬೇತಿ ಕಾರ್ಯಾಗಾರವು ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.
283 ಕಾರ್ಯಕ್ರಮಗಳಿಗೆ ಅನುಮತಿ
ಬಿಜೆಪಿ 13, ಕಾಂಗ್ರೆಸ್ – ಜೆಡಿಎಸ್ 27, ಜೆಡಿಎಸ್ 1, ಮತ್ತು ಇತರ ಕಾರ್ಯಕ್ರಮಗಳಿಗಾಗಿ 241 ಒಟ್ಟು 283 ಅನುಮತಿಯನ್ನು ನೀಡಲಾಗಿದೆ. ಚುನಾವಣೆ ಮುಗಿದು ಮೇ 27ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಚುನಾವಣಾ ತಯಾರಿಗೆ ಸಂಬಂಧಪಟ್ಟ ಮತ್ತು ಕಾರ್ಯಕ್ರಮಗಳ ಪರವಾನಿಗೆ ಪಡೆಯಲು ವಿವಿಧ ರಾಜಕೀಯ ಪಕ್ಷಗಳು ಮತ್ತು ನಾಗರಿಕರ ನೆರವಿಗಾಗಿ ಸುವಿಧಾ ಘಟಕವನ್ನು ತೆರೆಯಲಾಗಿದೆ. ಸಭೆ, ಸಮಾರಂಭ ಕಾರ್ಯಕ್ರಮಗಳಿಗೆ ಪುರಸಭೆಯಲ್ಲಿರುವ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ 10 ನಿಮಿಷದೊಳಗೆ ಎಲ್ಲÉ ಇಲಾಖೆಗಳ ಅನುಮತಿ ನೀಡುವ ಸೇವೆ ಲಭ್ಯವಿದೆ.
ಮೂಲ ಸೌಕರ್ಯ ಜೋಡಣೆ
ಮತಗಟ್ಟೆ ಕೇಂದ್ರಗಳಲ್ಲಿ ಸಿಬಂದಿಗಳು ಮತ್ತು ಮತದಾರರಿಗೆ ನೀರು, ವಿದ್ಯುತ್, ರ್‍ಯಾಂಪ್ ಸಹಿತ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.
ಕಳೆದ ಬಾರಿ ವಿದ್ಯುತ್ ಕಡಿತ ಉಂಟಾಗಿ ಮತಗಟ್ಟೆಗಳಲ್ಲಿ ಕತ್ತಲೆ ಆವರಿಸಿಕೊಂಡಿದ್ದು, ಈ ಬಗ್ಗೆ ಮೆಸ್ಕಾಂಗೆ ಮೊದಲೇ ಸೂಚನೆ ನೀಡ ಲಾಗಿದೆ. ಕೊರಂಗ್ರಪಾಡಿ ಗ್ರಾ.ಪಂ. ವ್ಯಾಪ್ತಿಯ 3 ಮತಗಟ್ಟೆಗಳಲ್ಲಿ ನೀರಿನ ಕೊರತೆ ಕಂಡು ಬಂದಿದ್ದು ಅದಕ್ಕೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ.
ದಾಖಲೆ ತೋರಿಸಿ, ಮತದಾನ ಮಾಡಿ
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶೇ. 100ರಷ್ಟು ಮತದಾರರ ಗುರುತು ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಪೋಟೋ ವೋಟರ್ ಸ್ಲಿಪ್‌ಗ್ಳನ್ನು ಬಿಎಲ್‌ಒಗಳು ಒದಗಿಸಲಿದ್ದಾರೆ. ಆದರೆ ಈ ಬಾರಿ ಪೋಟೋ ಸ್ಲಿಪ್‌ನ್ನು ಮಾತ್ರ ತೋರಿಸಿ ಮತ ಚಲಾಯಿಸಲು ಅವಕಾಶ ನೀಡಲಾಗದು. ಮತದಾರರ ಗುರುತು ಚೀಟಿ ಇಲ್ಲದವರು ಫೋಟೊ ವೋಟರ್ ಸ್ಲಿಪ್‌ನೊಂದಿಗೆ ಇತರ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತಚಲಾಯಿಸಬಹುದಾಗಿದೆ. ಕಡ್ಡಾಯವಾಗಿ ಬಲಗೆ„ ತೋರು ಬೆರಳಿಗೆ ಶಾಯಿ ಹಾಕಲಾಗುತ್ತದೆ ಎಂದರು.
17.09 ಲಕ್ಷ ರೂ. ವಶಕ್ಕೆ
ಮಾ. 23ರಿಂದ ಎ. 1ರ ವರೆಗೆ ರಾ.ಹೆ. 66ರ ಹೆಜಮಾಡಿ ಚೆಕ್‌ಪೋಸ್ಟ್ ಸಹಿತವಾಗಿ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ 12,00,000 ರೂ. ಮೌಲ್ಯದ ಅಡಿಕೆ ಮತ್ತು 17 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. 11 ಸಾವಿರ ರೂ. ಮೌಲ್ಯದ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಸಕ್ರಮವಾಗಿದ್ದ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. 2 ನೀತಿ ಸಂಹಿತೆ ಉಲ್ಲಂಘನೆ, 1 ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ. ನೀತಿ ಸಂಹಿತೆ ಪಾಲನೆಗೆ 9 ಎಫ್‌ಎಸ್‌ಟಿ, 6 ವೀಡಿಯೊ ಮತ್ತು ಸ್ಟ್ರಾಟಜಿಕ್ ಸರ್ವೆಲೆನ್ಸ್ ತಂಡಗಳನ್ನು ರಚಿಸಲಾಗಿದೆ.
ಕಾಪು ತಾಲೂಕು ತಹಶೀಲ್ದಾರ್ ರಶ್ಮಿ, ಚುನಾವಣಾ ತಹಶೀಲ್ದಾರ್ ಪ್ರದೀಪ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
1,84,246 ಮತದಾರರು
ಕಾಪು ವಿಧಾನಸಭಾ ಕ್ಷೇತ್ರದಲ್ಲಿ 208 ಮತಗಟ್ಟೆಗಳಿದ್ದು, ಒಟ್ಟು 1,84,246 ಮತದಾರರಿದ್ದಾರೆ. ಇವರಲ್ಲಿ ಪುರುಷರು 87,749 ಮತ್ತು ಮಹಿಳೆಯರು 96,486 ಹಾಗೂ ಇತರ 11 ಮತದಾರರಿದ್ದಾರೆ. ಇವರಲ್ಲಿ 1299 ವಿಕಲಚೇತನ ಮತದಾರರಿದ್ದು, 5,497 ಹೊಸ ಮತದಾರರು ನೋಂದಾವಣೆ ಮಾಡಿದ್ದು ಇವರಲ್ಲಿ 4,110 ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
1,700 ಮಂದಿ ಸಿಬಂದಿಗಳ ನಿಯೋಜನೆ
208 ಮತಗಟ್ಟೆಗಳ ಪೈಕಿ 14 ಅತಿ ಸೂಕ್ಷ್ಮ, 32 ಸೂಕ್ಷ್ಮ ಮತ್ತು 176 ಸಾಮಾನ್ಯ ಮತಗಟ್ಟೆಗಳಿವೆ. 5 ಸಖೀ ಮತಗಟ್ಟೆಗಳಿದ್ದು, ಇಲ್ಲಿ ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳು ಮತ್ತು ಸಿಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ. 208 ಮತಗಟ್ಟೆಗಳಲ್ಲಿ ವಿವಿಧ ರೀತಿಯ ಕರ್ತವ್ಯ ನಿರ್ವಹಣೆಗಾಗಿ 1,700 ಮಂದಿ ಸಿಬಂದಿಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಇವಿಎಂ, ವಿವಿ ಪ್ಯಾಟ್‌ಗಳನ್ನು ಈಗಾಗಲೇ ಕ್ಷೇತ್ರಕ್ಕೆ ತಂದಿರಿಸಲಾಗಿದ್ದು 24×7 ಮಾದರಿಯ ಕಣ್ಗಾವಲು ಇರಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.