ಹೆಬ್ರಿ-ಮಲ್ಪೆ ರಸ್ತೆಗಾಗಿ 1,754 ಮರಗಳು ಬಲಿ !
ರಾ. ಹೆ. ಪ್ರಾಧಿಕಾರ ಹೆದ್ದಾರಿ ಅಭಿವೃದ್ಧಿ ಮರ ಕಡಿಯಲು ಸಾಕಷ್ಟು ನಿಯಮಾವಳಿ ಪಾಲಿಸಬೇಕು
Team Udayavani, Dec 24, 2022, 1:17 PM IST
ಉಡುಪಿ; ಹೆಬ್ರಿ-ಪರ್ಕಳ ರಾ.ಹೆ.(169ಎ) ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ 1734 ಮರಗಳಿಗೆ ಕೊಡಲಿ ಏಟು ಬೀಳಲಿದ್ದು, ಇದೇ ಮೊದಲ ಭಾರಿಗೆ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿ ಇಷ್ಟೊಂದು ಸಂಖ್ಯೆಯ ಮರಗಳು ಧರೆಗುರುಳುತ್ತಿವೆ.
ಉಡುಪಿ ನಗರಸಭೆ ವ್ಯಾಪ್ತಿ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ 205 ಮರಗಳನ್ನು ತೆರವುಗೊಳಿಸಲು ಮತ್ತು ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯ ಮುಳ್ಳುಗುಡ್ಡೆಯಿಂದ ತಾಣದಮನೆವರೆಗೆ ಇರುವ ಒಟ್ಟು ವಿವಿಧ ಜಾತಿಯ 1,549 ಮರಗಳನ್ನು ತೆರವುಗೊಳಿಸಲು ಅಂತಿಮ ಸಿದ್ಧತೆ ನಡೆಯುತ್ತಿದೆ.
ತೀರ್ಥಹಳ್ಳಿ-ಮಲ್ಪೆ ರಾ.ಹೆ 169ಎ ವಿಭಾಗದ ಹೆಬ್ರಿ-ಮಲ್ಪೆ ಚತುಷ್ಪಥ ರಸ್ತೆ ವಿಸ್ತರಣೆ ಯೋಜನೆಗಾಗಿ ಅನುದಾನ ಮಂಜೂರು ಮಾಡಿದ್ದು, ಅಲ್ಲಲ್ಲಿ ಕಾಮಗಾರಿ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಹೆಬ್ರಿಯಿಂದ-ಪರ್ಕಳದವರೆಗೆ ಮತ್ತು ಮಲ್ಪೆಯಿಂದ-ಕರಾವಳಿ ಜಂಕ್ಷನ್ ವರೆಗೆ ಎರಡು ವಿಭಾಗದಲ್ಲಿ ಕಾಮಗಾರಿ ನಡೆಯಲಿದೆ. ಕಲ್ಮಾಡಿ ಹೊಳೆ, ಹೆಬ್ರಿ ಸೀತಾನದಿ, ಪೆರ್ಡೂರು ಸ್ವರ್ಣಾ ನದಿಗೆ ಸೇತುವೆ ನಿರ್ಮಾಣವಾಗಲಿದ್ದು, ಇದಕ್ಕೆ 355.72 ಕೋ. ರೂ. ಮೊತ್ತ ವ್ಯಯವಾಗಲಿದೆ.
ಅರಣ್ಯೀಕರಣ ವೆಚ್ಚ ಭರಿಸಬೇಕು
ರಾ. ಹೆ. ಪ್ರಾಧಿಕಾರ ಹೆದ್ದಾರಿ ಅಭಿವೃದ್ಧಿ ಮರ ಕಡಿಯಲು ಸಾಕಷ್ಟು ನಿಯಮಾವಳಿ ಪಾಲಿಸಬೇಕು. ಅರಣ್ಯ ಇಲಾಖೆ, ಪ್ರಾಧಿಕಾರ ಜಂಟಿ ಸಮೀಕ್ಷೆ ನಡೆಸಿ ಮರ ಗುರುತಿಸಿ ಬಳಿಕ ಸಾರ್ವಜನಿಕ ಅಹವಾಲು ಸಭೆ ಕರೆದು ಸಾರ್ವಜನಿಕರ ಆಕ್ಷೇಪ ಇಲ್ಲದ ವರದಿ ಪರಿಗಣಿಸಿ, ಅರಣ್ಯ ಇಲಾಖೆ ಹೆದ್ದಾರಿ ಇಲಾಖೆಗೆ ಮರ ಕತ್ತರಿಸಲು ಅನುಮತಿ ನೀಡುತ್ತದೆ. ಮರ ಕತ್ತರಿಸುವ ಮುನ್ನ ಅರಣ್ಯೀಕರಣ ವೆಚ್ಚವನ್ನು ಪ್ರಾಧಿಕಾರ ಅರಣ್ಯ ಇಲಾಖೆಗೆ ಪಾವತಿಸಬೇಕು. ಒಂದು ಮರ ಕಡಿದಲ್ಲಿ 10 ಮರ ನೆಡಬೇಕು ಎಂಬ ನಿಯಮದಂತೆ ಒಂದು ಮರಕ್ಕೆ 411.27 ರೂ. ದರವಿದ್ದು, ಇದರ 10ರಷ್ಟು ವೆಚ್ಚ ಪಾವತಿಸಬೇಕು. ಅನಂತರ ಒಂದು ಕಿ. ಮೀ.ಗೆ 3 ಲಕ್ಷ ರೂ.ನಂತೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು.
ಸಭೆಗೆ ಸಾರ್ವಜನಿಕರು ಗೈರು
ಅರಣ್ಯ ಇಲಾಖೆ ಉಡುಪಿ ವಲಯ ಕಚೇರಿ ಸಾರ್ವಜನಿಕ ಅಹವಾಲು ಸಭೆ ಕರೆದಿದ್ದು, ಇದಕ್ಕೆ ಒಬ್ಬರೂ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಸಾರ್ವಜನಿಕ ಸಭೆ ಡಿ.31 ರಂದು ಹೆಬ್ರಿ ವಲಯ ಕಚೇರಿ ಸಭಾಂಗಣದಲ್ಲಿ ನಡೆಯಲಿದ್ದು, ಎಷ್ಟು ಮಂದಿ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
ಸಾಧ್ಯವಾದಷ್ಟು ಮರ ಉಳಿಸಲು ಇಲಾಖೆ ಶ್ರಮ ವಹಿಸಲಿದೆ
ಹೆಬ್ರಿ-ಮಲ್ಪೆ ರಸ್ತೆ ವಿಸ್ತರಣೆ ಯೋಜನೆಗೆ ಸಂಬಂಧಿಸಿ ಇನ್ನೂ ಮರಗಳ ತೆರವಿಗೆ ಅನುಮತಿ ನೀಡಿಲ್ಲ. ರಸ್ತೆ ಅಭಿವೃದ್ಧಿ ಯೋಜನೆಗೂ ಹಿನ್ನಡೆಯಾಗದಂತೆ ಮರಗಳನ್ನು ಕನಿಷ್ಠ ಸಂಖ್ಯೆಯಲ್ಲಿ ಸಂರಕ್ಷಿಸುವ ಪ್ರಯತ್ನ ಇಲಾಖೆ ಮಾಡಲಿದೆ. ಈಗಾಗಲೇ ಗುರುತಿಸಿ ರುವ ಮರಗಳ ವರದಿ ಪರಿಶೀಲನೆ ನಡೆಸಿದ್ದೇನೆ. ಇನ್ನೊಮ್ಮೆ ಸ್ಥಳ ಪರಿಶೀಲನೆ ನಡೆಸಿಯೇ ಇದನ್ನು ಅಂತಿಮಗೊಳಿಸಲಾಗುವುದು. ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಳ್ಳಲು ಇಲಾಖೆ ಶ್ರಮಿಸಲಿದೆ.
ಉದಯ ನಾಯ್ಕ , ವೃಕ್ಷ ಅಧಿಕಾರಿ, ಉಪ ಅರಣ್ಯ
ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ
ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.