2 ಲಕ್ಷ ಜನರಿಂದ ಸ್ಮಾರ್ಟ್ ಫೋನಿನಲ್ಲಿ ಆರೋಗ್ಯ ಸೇತು ಅಳವಡಿಕೆ!
ಜಿಲ್ಲೆಯಲ್ಲಿ ಮೂಡಿದೆ ಆರೋಗ್ಯ ಸಂರಕ್ಷಣೆ ಅರಿವು
Team Udayavani, Jul 25, 2020, 3:44 PM IST
ಸಾಂದರ್ಭಿಕ ಚಿತ್ರ
ಉಡುಪಿ: ಸೋಂಕಿನ ಮೂಲ ಪತ್ತೆಯಾಗದ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಚಲನವಲನಗಳ ಬಗ್ಗೆ ಎಚ್ಚರಿಕೆ ನೀಡುವ ಆರೋಗ್ಯ ಸೇತು ಆ್ಯಪ್ ಬಳಕೆದಾರರ ಸಂಖ್ಯೆ 2 ಲಕ್ಷ ಏರಿಕೆಯಾಗಿದ್ದು, ಜನರಲ್ಲಿ ಕೋವಿಡ್‌ನಿಂದ ಸ್ವಯಂ ರಕ್ಷಣೆಯ ಜಾಗೃತಿ ಮೂಡುತ್ತಿದೆ.
ಜಿಪಿಎಸ್ ತಂತ್ರಜ್ಞಾನ ಬಳಕೆ
ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಕೇಂದ್ರ ಸರಕಾರ ಆರೋಗ್ಯ ಸೇತು ಆ್ಯಪ್ ರೂಪಿಸಿದ್ದು, ಪ್ರತಿಯೊಬ್ಬರು ಆ್ಯಪ್ ಹೊಂದಿರಲೇ ಬೇಕು ಎನ್ನುವು ದನ್ನು ಸುಪ್ರೀಂ ಕೋರ್ಟ್ ಕಡ್ಡಾಯ ಮಾಡಿಲ್ಲ. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಸ್ಮಾರ್ಟ್ ಫೋನ್ ಹೊಂದಿರು ವವರು ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡರೆ ಸೋಂಕಿನಿಂದ ರಕ್ಷಣೆಯ ಪಡೆಯಬಹುದಾಗಿದೆ.
2 ಲಕ್ಷ ಆ್ಯಪ್ ಬಳಕೆ
ಉಡುಪಿ ಜಿಲ್ಲೆಯಲ್ಲಿ 2 ಲಕ್ಷ ಜನರು ಆರೋಗ್ಯ ಸೇತು ಆ್ಯಪ್ ಬಳಸುತ್ತಿ ದ್ದಾರೆ. ಉಡುಪಿ ನಗರದ 10 ಕಿ.ಮೀ. ವ್ಯಾಪ್ತಿಯಲ್ಲಿ 52,000 ಜನರು, ಕುಂದಾಪುರ ನಗರದ 10ಕಿ.ಮೀ. ವ್ಯಾಪ್ತಿಯಲ್ಲಿ 20,360 ಜನರು, ಕಾಪು ನಗರದಲ್ಲಿ 15,280, ಕಾರ್ಕಳ, ಬ್ರಹ್ಮಾವರ, ಕೋಟ, ಬೈಂದೂರು, ಹೆಬ್ರಿ ನಗರದ 10 ಕಿ.ಮೀ. ವ್ಯಾಪ್ತಿಯಲ್ಲಿ 70,000 ಜನರು ಹಾಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸುಮಾರು 42,000 ಜನರು ಆ್ಯಪ್ ಡೌನ್ ಮಾಡಿಕೊಂಡಿದ್ದಾರೆ.
ಪ್ರಾದೇಶಿಕ ಭಾಷೆಗೆ ಒಲವು!
ಕನ್ನಡ, ತಮಿಳು, ಇಂಗ್ಲಿಷ್, ಹಿಂದಿ ಸೇರಿದಂತೆ 11 ಭಾಷೆಯಲ್ಲಿ ಆ್ಯಪ್ ಲಭ್ಯವಿದೆ. ಪ್ರಾದೇಶಿಕ ಭಾಷೆಯಲ್ಲಿ ಆಯ್ಕೆ ನೀಡಿದ ಬಳಿಕ ಹಲವರು ಈ ಆ್ಯಪ್ ಆಸಕ್ತಿ ತೋರುತ್ತಿದ್ದಾರೆ.
10 ಕಿ.ಮೀ. ವರೆಗೆ ಮಾಹಿತಿ
ಆರೋಗ್ಯ ಸೇತು ಆ್ಯಪ್ ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ನಿರಂತರವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಸಹಾಯವಾಣಿ, ಬಳಕೆ ದಾರರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡುತ್ತದೆ.
ಆ್ಯಪ್ ಬಗ್ಗೆ ಜಾಗೃತಿ
ಸೋಂಕಿತರು ಕೂಡ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಆ್ಯಕ್ಟಿವ್ ಮೋಡ್‌ನಲ್ಲಿ ಇಟ್ಟಿದ್ದರೆ ಮಾತ್ರ ಮಾಹಿತಿ ಪಡೆಯಲು ಅನುಕೂಲ. ಇಲ್ಲವಾದರೆ ಅಪಾಯದ ಅರಿವು ಸಾಧ್ಯವಿಲ್ಲ. ಜಿಲ್ಲೆ ಯಲ್ಲಿ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಆ್ಯಪ್‌ಗೆ ಮಾಹಿತಿ ಆಪ್‌ಲೋಡ್ ಮಾಡಿದ 45 ದಿನಗಳಲ್ಲಿ ವಿವರ ಶಾಶ್ವತವಾಗಿ ಅಳಿಸಿ ಹೋಗಲಿದೆ.
ಜನರಿಂದ ಸ್ವಯಂ ಪರೀಕ್ಷೆ
ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 500 ಜನರು ಹೊಸ ದಾಗಿ ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡಿದ್ದು, ಅವರಲ್ಲಿ 300 ಜನರು ಸ್ವಯಂ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಿದೆ.
ನಿರೀಕ್ಷೆ ಮೀರಿ ಬಳಕೆ
ಆರೋಗ್ಯ ಸೇತು ಆ್ಯಪ್ ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಗಳು ಎನ್‌ಐಸಿಯ ಮಂಜುನಾಥ ಅವರನ್ನು ನೇಮಿಸಿದ್ದಾರೆ. ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಇದು ಜನರಲ್ಲಿ ಆರೋಗ್ಯದ ಬಗ್ಗೆ
ಅರಿವು ಮೂಡಿಸುತ್ತಿದೆ.
-ಡಾ| ಸುಧೀರ್‌ಚಂದ್ರ ಸೂಡ, ಡಿಎಚ್‌ಒ, ಉಡುಪಿ ಜಿಲ್ಲೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.