ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ
Team Udayavani, Sep 23, 2020, 1:36 AM IST
ಕೊಳಲಗಿರಿ ಪರಾರಿ ಪರಿಸರದಲ್ಲಿ ಭೂ ಕುಸಿತ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ರವಿವಾರ ಮುಂಜಾನೆ ಸುರಿದ ಭಾರೀ ಮಳೆಯಿಂದ 290 ಕೋ.ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಜಿಲ್ಲಾಡಳಿತ ನಡೆಸಿದ ಪ್ರಾಥಮಿಕ ಅಂದಾಜು ಇದಾಗಿದೆ. ಇದೇ ವೇಳೆ ತುರ್ತು ಪರಿಹಾರ ಕಾಮಗಾರಿಗಳಿಗೆ 40 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಜಿಲ್ಲಾಡಳಿತ ಸರಕಾರಕ್ಕೆ ಪತ್ರ ಬರೆದಿದೆ.
ಕೃಷಿ, ತೋಟಗಾರಿಕೆ, ಪಿಡಬ್ಲ್ಯುಡಿ, ಮೆಸ್ಕಾಂ ಮೊದಲಾದ ಇಲಾಖೆಗಳಿಂದ ವರದಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ಅಂತಿಮ ವರದಿ ಇನ್ನೂ ಸಿದ್ಧಗೊಂಡಿಲ್ಲ. ಮಂಗಳವಾರ ಮಳೆ ಪ್ರಮಾಣ ಇನ್ನಷ್ಟು ಕಡಿಮೆಯಾಗಿರುವುದರಿಂದ ಜನಜೀವನ ಸುಸ್ಥಿತಿಗೆ ಬರುತ್ತಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ವಿಧಾನಸಭಾಧಿವೇಶನ ನಡೆಯುತ್ತಿ ರುವುದರಿಂದ ಜಿಲ್ಲೆಯ ಶಾಸಕರ ಒತ್ತಡದ ಮೇರೆಗೆ ಪರಿಹಾರ ಮೊತ್ತ ಬಿಡುಗಡೆಯಾಗುವ ನಿರೀಕ್ಷೆ ಇದೆ. ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಂಗಳವಾರ ಮಣಿಪಾಲದ ಪ್ರೀಮಿಯರ್ ಎನ್‌ಕ್ಲೇವ್ ರಕ್ಷಣ ಗೋಡೆ ಕುಸಿದಿರುವ ಪ್ರದೇಶಕ್ಕೆ ಭೇಟಿ ನೀಡಿದರು. ಪೆರಂಪಳ್ಳಿ ಭಾಗದಲ್ಲಿ ಜನರನ್ನು ರಕ್ಷಿಸಿದ ಮನೆಗಳಿಗೆ ಭೇಟಿ ನೀಡಿದರು. ಜನರು ಮನೆಗಳನ್ನು ಶುಚಿ ಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ತೆನೆ ಬಂದ ಭತ್ತದ ಕೃಷಿ ಗದ್ದೆಗಳಿಗೆ ತೊಂದರೆಯಾಗಿದೆ.
ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳ ಸುಪರ್ದಿಯಲ್ಲಿ ತಲಾ 1 ಕೋ.ರೂ. ಈಗಾಗಲೇ ಇದ್ದು, ಜಿಲ್ಲಾಧಿ ಕಾರಿಯವರು ಹೆಚ್ಚುವರಿ ಯಾಗಿ ತಲಾ 2 ಕೋ.ರೂ. ತುರ್ತು ಪರಿಹಾರಕ್ಕಾಗಿ ಮಂಜೂರು ಮಾಡಿದ್ದಾರೆ.
ಕೊಳಲಗಿರಿ ಪರಾರಿಯಲ್ಲಿ ಭೂಕುಸಿತ
ಉಡುಪಿ: ಹಾವಂಜೆ ಉಪ್ಪೂರು ಗ್ರಾಮ ಗಳೆರಡಕ್ಕೂ ಸಂಬಂಧ ಪಟ್ಟ ರಿಂಗ್ ರೋಡ್ ಇರುವ ಕೊಳಲಗಿರಿ ಪರಾರಿ ಪರಿಸರದಲ್ಲಿ ಮಂಗಳವಾರ ಭೂ ಕುಸಿತ ಕಂಡುಬಂದಿದೆ. ಈ ಪ್ರದೇಶ ರಕ್ಷಿತಾರಣ್ಯ ದಿಂದ ಕೂಡಿದೆ. ಮಳೆಯಿಂದ ಭೂಕುಸಿತ ಉಂಟಾಗಿದ್ದು, ಹೆಚ್ಚಿನ ಮರಗಳು ನೆಲಕ್ಕುರುಳಿವೆ. ಎದುರು ಭಾಗದಲ್ಲಿ ಮದಗವಿರುವುದರಿಂದ ನೀರು ತುಂಬಿಕೊಳ್ಳುತ್ತಿದೆ. ಈ ಭೂ ಪ್ರದೇಶದ ಸುತ್ತಮುತ್ತ ಅನೇಕ ಮನೆಗಳಿವೆ. ಈ ಪ್ರದೇಶ ಇನ್ನಷ್ಟು ಕುಸಿತವಾಗುವ ಮತ್ತು ಹಾನಿಯಾಗುವ ಮೊದಲು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡರೆ ಪರಿಸರವನ್ನುಹಾಗೂ ಜೀವ ಹಾನಿಯನ್ನು ತಪ್ಪಿಸಲು ಸಾಧ್ಯ ಎಂದು ಸ್ಥಳೀಯರಾದ ಕೊಳಲಗಿರಿ ಪೌಲ್ ಅಲ್ಮೇಡಾ ಹಾಗೂ ಕೀಳಂಜೆಯ ಜಯಶೆಟ್ಟಿ ಬನ್ನಂಜೆ ತಿಳಿಸಿ¨ªಾರೆ.
ಪ್ರಾಥಮಿಕ ಅಂದಾಜಿನಂತೆ ಜಿಲ್ಲೆಯಲ್ಲಿ 290 ಕೋ.ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ತುರ್ತಾಗಿ 40 ಕೋ.ರೂ. ನೆರವನ್ನು ಕೋರಿ ಪತ್ರ ಬರೆದಿದ್ದೇನೆ. ತುರ್ತು ನೆರವಿಗೆ ಆಯಾ ತಹಶೀಲ್ದಾರ್ ಅವರ ಬಳಿ ತಲಾ 3 ಕೋ.ರೂ. ಇದೆ.
– ಜಿ. ಜಗದೀಶ್, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.