ಸ್ವದೇಶೀ -ಯೋಗ ವ್ರತ: ರಾಮದೇವ್ ಕರೆ
ಉಡುಪಿಯ ಐದು ದಿನಗಳ ಯೋಗ ಶಿಬಿರ ಸಮಾಪನ
Team Udayavani, Nov 21, 2019, 6:00 AM IST
ಉಡುಪಿ: ಸ್ವದೇಶೀ ಉತ್ಪನ್ನಗಳನ್ನೇ ಬಳಸುವ ಮೂಲಕ ಸ್ವದೇಶಿ ವ್ರತಸ್ಥರಾಗಿ; ನಿತ್ಯ ಯೋಗ, ಪ್ರಾಣಾಯಾಮ ಅಭ್ಯಾಸ ಮಾಡುವ ಯೋಗವ್ರತಸ್ಥರಾಗಿ ಎಂದು ಬಾಬಾ ರಾಮದೇವ್ ಕರೆ ನೀಡಿದರು. ಬುಧವಾರ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ ಐದು ದಿನಗಳಿಂದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುತ್ತಿರುವ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ವಸ್ತು ಖರೀದಿಸುವಾಗ ಅದು ಭಾರತದಲ್ಲಿ ತಯಾರಾದದ್ದೇ, ವಿದೇಶೀ ಉತ್ಪನ್ನವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಾನು ಸ್ವದೇಶೀ ಉತ್ಪನ್ನಗಳಿಂದಲೇ 10 ಸಾವಿರ ಕೋ.ರೂ.ಗಳನ್ನು ಸಮಾಜಸೇವೆಗೆ ವಿನಿಯೋಗಿಸುತ್ತಿದ್ದೇನೆ ಎಂದರು. ಕೆಲವರು ವೈನ್, ಬಿಯರ್, ಕಾಫಿ, ಚಹಾ ಕುಡಿಯುತ್ತಾರೆ. ಇದರಲ್ಲಿ ಉತ್ತೇಜಕಾಂಶಗಳಿವೆ. ನಾನು ಯೋಗದ ಮೂಲಕ ಇಂಡೋರ್ಫಿನ್ ಉತ್ತೇಜಕವನ್ನು ಅನುಭವಿಸುತ್ತೇನೆ. ಸಂಗೀತದೊಂದಿಗೂ ಯೋಗವನ್ನು ಅನುಭವಿಸಲು ಸಾಧ್ಯ. ಯೋಗದಿಂದ ನಿರಾಶೆ, ಒತ್ತಡ, ದುಃಖ ಕಡಿಮೆ ಯಾಗುತ್ತದೆ ಎಂದರು.
ಗೋಹತ್ಯೆ ನಿಷೇಧಿಸಿ
ಸಸ್ಯಾಹಾರ ಪರಿಪೂರ್ಣವಾದುದು. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಗೋಹತ್ಯೆಯನ್ನಂತೂ ಸಂಪೂರ್ಣ ನಿಷೇಧಿಸಬೇಕು. ಜನಸಂಖ್ಯೆ ನಿಯಂತ್ರಣದ ಕಾನೂನು ಜಾರಿಗೊಳಿಸಬೇಕು. ರಾಮಮಂದಿರ ಪ್ರತೀಕವಷ್ಟೆ. ಅವರವರ ಕೆಲಸಗಳನ್ನು ಪ್ರಾಮಾಣಿಕತೆ ಯಿಂದ ಮಾಡಿದರೆ ರಾಮರಾಜ್ಯ ಸ್ಥಾಪನೆ ಮಾಡಿದಂತೆ. ಪ್ರತಿಯೊಬ್ಬರೂ ಸ್ವಧರ್ಮ ಪಾಲಿಸಬೇಕು ಎಂದರು.
ಬಾಬಾ ರಾಮದೇವ್ ಅವರನ್ನು ಸಮ್ಮಾನಿಸಿ ಆಶೀರ್ವಚನ ನೀಡಿದ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ರಾಮ ದೇವ್ ಅವರು ತುಳಸಿಯ ವಿಕಿರಣ ತಡೆಯುವ ಶಕ್ತಿಯನ್ನು ಉಲ್ಲೇಖೀ ಸಿದರು. ಪ್ರತೀ ದಿನ ಲಕ್ಷ ತುಳಸಿ ಅರ್ಚನೆ ನಡೆಸುತ್ತ ಬಂದಿರುವ ನಮಗೆ ಎರಡು ವರ್ಷಗಳಿಂದ ಋಣಾತ್ಮಕ ಶಕ್ತಿಗಳ ಸಮಸ್ಯೆ ಉಂಟಾಗದೆ ಧನಾತ್ಮಕ ಪರಿಣಾಮಗಳೇ ಅನುಭವಕ್ಕೆ ಬಂದಿವೆ. ಇಂತಹ ವಿಚಾರಗಳಿಗೆ ನಮ್ಮ ಜೀವನಾನುಭವವೇ ಅತಿ ಮುಖ್ಯ ಎಂದರು. ರಾಮದೇವ್ ಅಭಿನವ ಪತಂಜಲಿ ಎಂದು ಬಣ್ಣಿಸಿದರು.
ಬೆಂಗಳೂರಿನ ಯಾದವ ಪೀಠದ ಶ್ರೀ ಯಾದವಾನಂದ ಸ್ವಾಮೀಜಿ ರಾಮದೇವ್ ಅವರನ್ನು ಅಭಿನಂದಿ ಸಿದರು. ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ರಾಮದೇವ್ ಅವರ ಜತೆಗೂಡಿ ಕೆಲವು ಯೋಗಾಸನಗಳನ್ನು ಮಾಡಿದರು.
ವಿಮಾನ ಯೋಗ, ರೈಲು ಯೋಗ!
ನಾನು ಒಂದು ದಿನವೂ ಯೋಗವನ್ನು ಬಿಡುವುದಿಲ್ಲ. ನೀವೂ ಹಾಗೆಯೇ ಇರಿ. 18-20 ಗಂಟೆಗಳ ವಿಮಾನ ಪ್ರಯಾಣ ಮಾಡುವಾಗಲೂ ಆಸನ, ಪ್ರಾಣಾಯಾಮ ಮಾಡುತ್ತೇನೆ. ಒಮ್ಮೆ ಕಪಾಲಭಾತಿ ಮಾಡುವಾಗ ನನ್ನ ಆರೋಗ್ಯದಲ್ಲೇನೋ ಏರುಪೇರು ಆಗಿರಬಹುದು ಎಂದು ವಿಮಾನದ ತುರ್ತು ಆರೋಗ್ಯ ಸೇವಕರು ಬಂದರು. “ಆರೋಗ್ಯದ ಸಮಸ್ಯೆ ನನಗಲ್ಲ, ನಿಮಗೇ ಇರಬೇಕು’ ಎಂದೆ. ರೈಲಲ್ಲಿ ಹೋಗುವಾಗಲೂ ಯೋಗ ಮಾಡುತ್ತೇನೆ. ಪ್ರಾಣಾಯಾಮ, ಸರಳ ವ್ಯಾಯಾಮಕ್ಕೆ ವಿಮಾನ-ರೈಲು ಯಾನ ಅಡ್ಡಿಯಾಗುವುದಿಲ್ಲ.
– ಬಾಬಾ ರಾಮದೇವ್
ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ
ಕಲ್ಲಡ್ಕ: ಉಡುಪಿಯ ಯೋಗ ಶಿಬಿರ ಸಮಾಪನದ ಬಳಿಕ ಬಾಬಾ ರಾಮದೇವ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮತ್ತು ವಿಟ್ಲ ಸಮೀಪದ ಮೂರ್ಕಜೆಯ ಮೈತ್ರೇಯಿ ಗುರುಕುಲಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಕಲ್ಲಡ್ಕ ವಿದ್ಯಾಕೇಂದ್ರ ವಠಾರದಲ್ಲಿ ವಿದ್ಯಾರ್ಥಿಗಳ ಮಲ್ಲ ಕಂಭದ ಯೋಗ ಪ್ರದರ್ಶನ ವೀಕ್ಷಿಸಿದರು. ಪ್ರಾಥಮಿಕ ಶಿಕ್ಷಾವರ್ಗಕ್ಕೆ ಭೇಟಿ ನೀಡಿ ಮಕ್ಕಳ ವಿದ್ಯಾರ್ಜನೆಯ ಕ್ರಮ ವೀಕ್ಷಿಸಿದರು. ಈ ಸಂದರ್ಭ ವಿದ್ಯಾರ್ಥಿ ಳೊಂದಿಗೆ ಸಂಸ್ಕೃತದಲ್ಲಿಯೇ ಸಂವಾದ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.