ಪೇಜಾವರ ಶ್ರೀಗಳ ಕುರಿತ ಘಟನೆಗಳನ್ನು ಆಧರಿಸಿ ಪುಸ್ತಕ ಹೊರ ತರುವ ಯೋಜನೆ; ಮಾಹಿತಿಗಾಗಿ ಮನವಿ
Team Udayavani, Aug 4, 2020, 7:49 AM IST
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಕುರಿತ ಘಟನೆಗಳನ್ನು ಆಧರಿಸಿ ಪುಸ್ತಕವನ್ನು ಹೊರ ತರುವ ಯೋಜನೆ ಇದೆ. ಇವರಿಗೆ ಸಂಬಂಧಿಸಿದ ವಸ್ತುಗಳು, ಅಪೂರ್ವ ಮಾಹಿತಿಗಳನ್ನು ಕಳುಹಿಸಿಕೊಡಲು ವಿನಂತಿಸಲಾಗಿದೆ.
ಸ್ವಾಮೀಜಿಯವರು ಊರುಗಳಿಗೆ ಭೇಟಿ ನೀಡಿದಾಗ ಅವರು ಮಾಡಿದ ಉಪನ್ಯಾಸಗಳು, ಪತ್ರಿಕಾ ಹೇಳಿಕೆಗಳು, ಸಂದರ್ಶನಗಳು, ವಿಡಿಯೋಗಳು ಅವರಿಗೆ ಸಂಬಂಧಿಸಿದ ಮಾಹಿತಿಗಳು, ಅವರ ತಪಸ್ಸಿನ ಬಲದಿಂದ ನಡೆದ ಅಪೂರ್ವ ಅತಿಮಾನುಷ ಘಟನೆಗಳನ್ನು, ಪಾದುಕೆ ಮೊದಲಾದ ವಸ್ತುಗಳನ್ನು ಕಳುಹಿಸಿಕೊಡಲು ತಿಳಿಸಲಾಗಿದೆ.
ಅನೇಕರು ದೇಶದ ಅನೇಕ ಕಡೆ ಗಳಿಂದ ಅವರಕುರಿತ, ಕೃತಿಗಳನ್ನು, ಲೇಖನಗಳನ್ನು ಅಪೇಕ್ಷಿಸುತ್ತಿದ್ದಾರೆ. ಈಗ ಅವೆಲ್ಲವನ್ನೂ ಶೀಘ್ರವಾಗಿ ಸಂಗ್ರಹಿಸುವ ಕೆಲಸವಾಗುತ್ತಿದೆ. ಶ್ರೀಪಾದರ ಕುರಿತ ಬೇರೆ ಬೇರೆ ಧಾರ್ಮಿಕ ವ್ಯಕ್ತಿಗಳು, ಕವಿಗಳು, ಸಾಹಿತಿಗಳು, ರಾಜಕಾರಣಿಗಳು, ವಿಜ್ಞಾನಿಗಳು ಸೇರಿದಂತೆ ಇನ್ನಿತರ ಯಾವುದೇ ಕ್ಷೇತ್ರದವರ ಲೇಖನಗಳ ಸಂಗ್ರಹವಿದ್ದರೆ, ಅಥವಾ ಶ್ರೀಪಾದರೇ ಸ್ವತಃ ಆಯಾ ಸಂದರ್ಭಗಳಲ್ಲಿ ಬೇರೆ ಬೇರೆ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಬರೆದ ಲೇಖನಗಳ ಸಂಗ್ರಹವಿದ್ದರೆ ಮತ್ತು ತಾವೇ ಯಾರಾದರೂ ಶ್ರೀಪಾದರ ಮೇಲೆ ಹಾಡುಗಳನ್ನು, ಲಾವಣಿಗಳನ್ನು, ಕೃತಿಗಳನ್ನು ರಚಿಸಿದ್ದರೆ ದಯವಿಟ್ಟು ಕಳುಹಿಸಿಕೊಡಿ. ಅವೆಲ್ಲವೂ ಒಂದೇ ಕಡೆಯಲ್ಲಿ ಸಂಗ್ರಹವಾಗುತ್ತವೆ.
ಸಂಪರ್ಕ ವಿಳಾಸ: ಸಿ.ಎಚ್. ಬದರಿ ಆಚಾರ್ಯ, ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ತರಿಗುಪ್ಪೆ ರಸ್ತೆ, ಬೆಂಗಳೂರು (ದೂ: 9480620304).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.