ಹಳ್ಳಿ ಮಕ್ಕಳಿಗೆ ದೂರವಾದ ದೂರದರ್ಶನ ಪಾಠ
ವಿದ್ಯೆ ಕಲಿಸುವುದು ಪೋಷಕರಿಗೂ, ಶಿಕ್ಷಕರಿಗೂ ಸವಾಲು!
Team Udayavani, Jul 29, 2020, 12:27 PM IST
ಕಾರ್ಕಳ: ಕೋವಿಡ್-19 ಶಿಕ್ಷಣದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದ್ದು , ಮಕ್ಕಳಿಗೆ ವಿದ್ಯೆ ಕಲಿಸುವುದು ಹೆತ್ತವರಿಗೆ, ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಖಾಸಗಿ ಶಾಲೆಗಳಲ್ಲಿ ಆನ್‌ಲೈನ್ ಶಿಕ್ಷಣ ಆರಂಭವಾಗಿದೆ. ಗ್ರಾಮಾಂತರದ ಬಡ ಮಕ್ಕಳು ಆನ್‌ಲೈನ್ ಕ್ಲಾಸ್‌ನಿಂದ ವಂಚಿತರಾಗಿದ್ದಾರೆ. 8, 9, 10 ನೇ ತರಗತಿ ಮಕ್ಕಳಿಗೆ ದೂರದರ್ಶನ ಡಿಡಿ ಚಂದನದಲ್ಲಿ ಸೇತುಬಂಧ ಮೂಲಕ ಪಾಠ ಹೇಳಿ ಕೊಡಲಾಗುತ್ತಿದೆ. ಮುಂದೆ ಇದನ್ನು ಇತರ ತರಗತಿಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.
ಟಿವಿ ಇದ್ದರೂ ಕರೆಂಟಿಲ್ಲ
ಗ್ರಾಮೀಣ ಭಾಗದ ಬಡ ಕುಟುಂಬಗಳ ಎಲ್ಲ ಮನೆಗಳಲ್ಲಿ ಮೊಬೈಲ್, ಟಿವಿ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಟಿವಿ ಇಲ್ಲದ ಮನೆಗಳೂ ಇವೆ. ಸಿಡಿಲಿಗೆ ಕೆಲವರ ಟಿವಿ ಕೆಟ್ಟಿರುತ್ತದೆ. ಕೆಲವರು ನಿಗದಿತವಾಗಿ ರೀಜಾರ್ಜ್ ಮಾಡಿಸುವುದೂ ಕಡಿಮೆ. ಇಷ್ಟಿದ್ದರೂ ಕೆಲವು ಸಂದರ್ಭ ಕಾಡಿನ ಮಾರ್ಗದಲ್ಲಿ ವಿದ್ಯುತ್ ತಂತಿಗಳ ದೋಷದಿಂದ ಆಗಾಗ್ಗೆ ವಿದ್ಯುತ್ ವ್ಯತ್ಯಯಗಳಾಗುತ್ತಿರುತ್ತವೆ. ಕಬ್ಬಿನಾಲೆ, ಕೆರ್ವಾಶೆ, ಬೋಳ, ಸಚ್ಚೇರಿಪೇಟೆ, ಮುನಿಯಾಲು, ಮುಂಡ್ಕೂರು ಸಹಿತ ಕೆಲವು ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಕಲಿಕೆಗೆ ಅಡ್ಡಿಯಾಗಿದೆ.
ಇಲಾಖೆ ಪ್ರಯತ್ನ
ಸೇತುಬಂಧ ಕಾರ್ಯಕ್ರಮವು ಇಲಾಖೆಯ ವೆಬ್‌ಸೈಟ್, ಯೂಟ್ಯೂಬ್‌ಗಳಲ್ಲಿಯೂ ದೊರಕುತ್ತದೆ. ಟಿವಿ ಇಲ್ಲದ ಮನೆಗಳಲ್ಲಿ ಆ್ಯಂಡ್ರಾಯಿಡ್ ಇಲ್ಲದಿದ್ದರೂ ಕನಿಷ್ಠ ಕುಟುಂಬದ ಒಬ್ಬ ಸದಸ್ಯನಲ್ಲಿ ಕೀ ಬಟನ್ ಮೊಬೈಲ್ ಆದರೂ ಇರುತ್ತದೆ. ಮಕ್ಕಳನ್ನು ಶಿಕ್ಷಕರು ತಮ್ಮ ಮೊಬೈಲ್ ಮೂಲಕ ಸಂಪರ್ಕಿಸಿ ಅವರನ್ನು ಒಂದು ಕಡೆ ಸೇರಿಸಿ, ಸಾಮಾಜಿಕ ಅಂತರದೊಂದಿಗೆ ಪಾಠ ಮಾಡುವಂತಹ ವ್ಯವಸ್ಥೆಯನ್ನು ಕೂಡ ಶಿಕ್ಷಕರು ಅಗತ್ಯಬಿದ್ದರೆ ಮಾಡುತ್ತಾರೆ ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ 29,435 ಮಕ್ಕಳು
ಕಾರ್ಕಳ ತಾ|ನಲ್ಲಿ 166 ಸರಕಾರಿ ಶಾಲಾ-ಕಾಲೇಜು, 42 ಅನುದಾನಿತ, 37 ಖಾಸಗಿ ಶಾಲೆಗಳಿವೆ. ನವೋದಯ ಸಹಿತ ಇತರ 2 ಶಾಲೆ, ಒಟ್ಟು 247 ಶಾಲಾ-ಕಾಲೇಜು, 29,435 ಮಂದಿ ಮಕ್ಕಳಿದ್ದಾರೆ. ಬಹುತೇಕ ಸರಕಾರಿ ಶಾಲೆಗಳಿರುವುದು ಹಳ್ಳಿಯಲ್ಲಿ. ಆನ್‌ಲೈನ್, ದೂರದರ್ಶನ ಶಿಕ್ಷಣ ಈ ಮಕ್ಕಳಿಗೆ ಸರಿಯಾಗಿ ಈಗ ಕೈಗೆಟಕುತ್ತಿಲ್ಲ.
ಈ ವ್ಯವಸ್ಥೆ ಅನಿವಾರ್ಯ
ಕಲಿಕೆಯಲ್ಲಿ ನೇರ ತರಗತಿ ಸಂವಹನಕ್ಕೂ ಆನ್‌ಲೈನ್ ತರಗತಿಗೂ ಸರಿಸಾಟಿಯಿಲ್ಲ ಎನ್ನುವುದು ನಿಜ. ಎದುರು ಬದುರಿನ ಪಾಠದ ಸಂವಹನ ಶಕ್ತಿಯುತವಾಗಿರುತ್ತದೆ. ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ವ್ಯವಸ್ಥೆ ಅನಿವಾರ್ಯವಾಗಿದೆ.
-ಜಿ.ಎಸ್. ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.