ಮರಳಿನಲ್ಲಿಯೇ ಅಕ್ಷರಾಭ್ಯಾಸ ಆರಂಭಿಸಿದ ಶಾಲೆ
ಶತಮಾನ ಕಂಡ ನಂದಿಕೂರು ಮಾ. ಹಿ.ಪ್ರಾ.ಶಾಲೆ
Team Udayavani, Nov 6, 2019, 4:28 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1919 ಶಾಲೆ ಆರಂಭ
“ಅರಮನೆ ಕಾಡು ಶಾಲೆ’ ಎಂದು ಪ್ರಚಲಿತ
ಪಡುಬಿದ್ರಿಯಿಂದ 3ಕಿಮೀ ದೂರದಲ್ಲಿರುವ ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಿರಿಯರ ಅಭಿಪ್ರಾಯ ಹಾಗೂ ದೊರೆತ ದಾಖಲಾತಿಗಳಂತೆ ಇಲ್ಲಿನ ದುರ್ಗಾಪರಮೇಶ್ವರೀ ದೇವಸ್ಥಾನದ ಗೋಪುರದಲ್ಲಿ ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬರುತ್ತಿತ್ತು. ನೂರು ವರ್ಷಗಳ ಹಿಂದೆ ಪಡುಬಿದ್ರಿ ರಾಮರಾವ್ ಎಂಬ ಶಿಕ್ಷಕರು ಕಾಲ್ನಡಿಗೆಯಲ್ಲಿ ಬಂದು ಮುಳಿಹುಲ್ಲಿನ ಛಾವಣಿಯಲ್ಲಿ ಯಾವೊಂದು ಮೂಲ ಸೌಕರ್ಯಗಳಿಲ್ಲದೆ ಮರಳಿನಲ್ಲಿಯೇ ಅಕ್ಷರಾಭ್ಯಾಸವನ್ನು ನಡೆಸಿದ ಶಾಲೆ ಇದು. “ಅರಮನೆ ಕಾಡು ಶಾಲೆ’ ಎಂದು ಪ್ರಚಲಿತಗೊಂಡು ಬೆರಳೆಣಿಕೆಯ ವಿದ್ಯಾರ್ಥಿಗಳನ್ನು ಹೊಂದಿ, ಮುಂದೆ ಅಭಿವೃದ್ಧಿ ಹೊಂದುತ್ತಾ 600 ವಿದ್ಯಾರ್ಥಿಗಳು ಹಾಗೂ ಸುಮಾರು 20 ಶಿಕ್ಷಕ ವರ್ಗವನ್ನು ಹೊಂದಿತ್ತು.
ಇಲ್ಲಿನ ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ
ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಛಂದೋ ತಪಸ್ವಿ ಡಾ | ನಾರಾಯಣ ಶೆಟ್ಟಿ ಶಿಮಂತೂರು, ಅರ್ಥಶಾಸ್ತ್ರಜ್ಞರಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪನಿರ್ದೇಶಕನ ಹುದ್ದೆಯನ್ನೂ ಅಲಂಕರಿಸಿದ ಡಾ | ಸದಾನಂದ ಎಲ್. ಶೆಟ್ಟಿ , ಈಚೆಗಷ್ಟೇ ಸರ್ ಸಿ. ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿಯನ್ನು ಸ್ವೀಕರಿಸಿರುವ ಕೃಷಿ ವಿಜ್ಞಾನಿ ಡಾ | ಪಡುಬಿದ್ರಿ ಶಿವಪ್ರಸಾದ್ ರಾವ್ ಅವರಿದ್ದಾರೆ. ಅಲ್ಲದೆ ದೇಶದ ಸೇನೆ, ಉದ್ಯಮ, ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಯಕ್ಷಗಾನ, ಕಂಬಳ ಮತ್ತಿತರ ಕ್ಷೇತ್ರಗಳಲ್ಲೂ ಸಾಧನೆ ಮಾಡಿದವರಿದ್ದಾರೆ. ಸ್ವಂತ ಕಾಲ ಮೇಲೆ ನಿಲ್ಲುವಂತಹ ಮನೋಸ್ಥೈರ್ಯವನ್ನು ಪ್ರತಿಯೊರ್ವ ವಿದ್ಯಾರ್ಥಿಯಲ್ಲಿ ತುಂಬುವ ಕೆಲಸವನ್ನು ಈ ಸರಕಾರಿ ಶಿಕ್ಷಣ ಸಂಸ್ಥೆ ಮಾಡಿದೆ.
ಪ್ರಸ್ತುತ 37 ವಿದ್ಯಾರ್ಥಿಗಳ ವ್ಯಾಸಂಗ
1954 ರಲ್ಲಿ ಚೀಂಕ್ರಿಗುತ್ತು ರಾಘು ಶೆಟ್ಟಿ ಹಾಗೂ ಗ್ರಾಮಸ್ಥರ ನೆರವಿನಿಂದ ಶಾಲೆಯ ನೂತನ ಕೊಠಡಿಗಳು ನಿರ್ಮಾಣಗೊಂಡವು. ಈ ಶಾಲೆಯಲ್ಲಿ ವಿದ್ಯಾರ್ಜನೆಯನ್ನು ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಸಾಧನೆ ಗೈದಿರುವುದು ಸಂಸ್ಥೆಯ ಗೌರವವಾಗಿದೆ. ಒಂದರಿಂದ ಏಳನೇ ತರಗತಿವರೆಗಿರುವ
ಈ ಶಾಲೆಯಲ್ಲಿ ಇತ್ತೀಚಿನ ಕೆಲ ಬೆಳವಣಿಗೆಗಳು, ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ ಮತ್ತು ಸರಕಾರಿ ಶಾಲೆಗಳ ಮೇಲೆ ಜನರ ನಿರುತ್ಸಾಹ, ಮೂಲಸೌಕರ್ಯದ ಕೊರತೆಯಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಗೆ ಕಾರಣವಾಯಿತು. ಪ್ರಸ್ತುತ ಶಾಲೆಯಲ್ಲಿ ಒಂದರಿಂದ ಏಳನೆ ತರಗತಿವರೆಗೆ ಕೇವಲ ಮೂವತ್ತೇಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವಿವಿಧ ಅಭಿವೃದ್ಧಿ ಕಾರ್ಯ
ಶತಮಾನೋತ್ಸವದ ಸಂಭ್ರಮದಲ್ಲಿ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ ಅಗತ್ಯವಿರುವ ಮೂಲ ಸೌಕರ್ಯಗಳಾದ ಕಲಿಕಾ ಸಾಮಾಗ್ರಿಗಳು, ಪೀಠೊಪಕರಣ, ತರಗತಿ ಕೊಠಡಿಗಳಿಗೆ ವಿದ್ಯುತ್ ದೀಪಗಳ ಜೋಡಣೆ, ಕುಡಿಯುವ ನೀರು, ನಳ್ಳಿ ನೀರಿನ ವ್ಯವಸ್ಥೆ, ಅಕ್ಷರ ದಾಸೋಹ ಕೊಠಡಿಯ ನವೀಕರಣ, ಶಾಲಾ ಕಚೇರಿಗೆ ಆಧುನಿಕ ಸ್ಪರ್ಶ, ವಿದ್ಯಾರ್ಥಿಗಳಿಗೆ ಮತ್ತು ಕಚೇರಿ ಉಪಯೋಗಕ್ಕಾಗಿ ಕಂಪ್ಯೂಟರ್ ಹಾಗೂ ಪ್ರಿಂಟರ್ ವ್ಯವಸ್ಥೆ, ಶೌಚಾಲಯ ದುರಸ್ತಿ, ನಲಿ-ಕಲಿ ತರಗತಿಗೆ ಸಲಕರಣೆಗಳ ಜೋಡಣೆ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
ಶಾಲಾ ಹಳೆ ವಿದ್ಯಾರ್ಥಿಯಾಗಿ ಹೆಮ್ಮೆ ಎನಿಸಿದೆ. ಶಾಲಾಭಿವೃದ್ದಿಗಾಗಿ ನಂದಿಕೂರು ಎಜ್ಯುಕೇಶನ್ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿಕೊಂಡು 2019ರ ಜನವರಿಯಲ್ಲಿ ಶಾಲಾ ಶತಮಾನೋತ್ಸವ ಆಚರಿಸಲಾಗಿದೆ. ಇಲ್ಲಿದೆ.
– ಲಕ್ಷ್ಮಣ್ ಶೆಟ್ಟಿವಾಲ್,ಶಾಲಾ ಹಳೆ ವಿದ್ಯಾರ್ಥಿ.
4ವರ್ಷಗಳ ಹಿಂದೆ ವರ್ಗಾವಣೆ ಗೊಂಡು ನಂದಿಕೂರು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವೆನು. ಶತಮಾನೋತ್ಸವ ಕಂಡಿರುವ ಸರಕಾರಿ ಶಾಲೆ ಎಂಬ ಬಗೆಗೆ ತನಗೆ ಹೆಮ್ಮೆ ಇದೆ. ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. - ವಿಮಲಾ, ಪ್ರಭಾರ ಶಾಲಾ ಮುಖ್ಯ ಶಿಕ್ಷಕಿ.
– ಆರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.