ಬೇಸಾಯದ ಜತೆಗೆ ಹೈನುಗಾರಿಕೆಯಲ್ಲೂ ಯಶಸ್ವಿಯಾದ ರೈತ ಸಾಧಕ

ತಾಲೂಕು ಕೃಷಿ ಪ್ರಶಸ್ತಿ ಪುರಸ್ಕೃತ ರೈತ ಮಾದರಿ ಕೃಷಿಯಲ್ಲಿಯೂ ಪರಿಣಿತ

Team Udayavani, Jan 6, 2020, 8:15 AM IST

28

ಹೆಸರು: ತಿಮ್ಮ ಪೂಜಾರಿ ಗಿಳಿಯಾರು
ಏನೇನು ಕೃಷಿ:ಭತ್ತ, ತರಕಾರಿ, ವಿವಿಧ ಧಾನ್ಯಗಳು, ಹೈನುಗಾರಿಕೆ
ಎಷ್ಟು ವರ್ಷ:13ವರ್ಷ
ಕೃಷಿ ಪ್ರದೇಶ:4 ಎಕ್ರೆ
ಸಂಪರ್ಕ:9448108395

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕೋಟ: ಕೋಟ ಗಿಳಿಯಾರಿನ ತಿಮ್ಮ ಪೂಜಾರಿಯವರು ಮೂಲತಃ ಕೃಷಿ ಕುಟುಂಬದವರು. ಹಿರಿಯರು ಮಾಡಿಟ್ಟ ಜಮೀನನ್ನು ಹಡವು ಹಾಕಬಾರದು ಎನ್ನುವ ಹಟಕ್ಕೆ ಬಿದ್ದು ಬೇಸಾಯದಲ್ಲಿ ತೊಡಗಿಸಿಕೊಂಡ ಇವರು ಇದೀಗ ಯಶಸ್ವಿ ಭತ್ತ ಬೆಳೆಗಾರರಾಗಿ, ಹೈನುಗಾರರಾಗಿ ಗುರುತಿಸಿಕೊಂಡಿದ್ದಾರೆ.

ತಿಮ್ಮ ಪೂಜಾರಿಯವರ ತಂದೆ ಆನಂದ ಪೂಜಾರಿಯವರು ಉತ್ತಮ ಕೃಷಿಕರಾಗಿದ್ದರು. ತಂದೆಯ ಜತೆಗೆ ಕೃಷಿಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಅವರ ಕಾಲಾನಂತರ 13ವರ್ಷಗಳಿಂದ ತಾವೇ ಕೃಷಿ ನಿರ್ವಹಿಸುತ್ತಿದ್ದಾರೆ. 4ಎಕ್ರೆ ಜಮೀನಿನಲ್ಲಿ ಭತ್ತ, ಶೇಂಗಾ, ಉದ್ದು, ಅವಡೆ, ಕಲ್ಲಂಗಡಿ ಮುಂತಾದ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. 12ದನಗಳನ್ನು ಸಾಕುವುದರ ಮೂಲಕ ಹೈನುಗಾರಿಕೆಯಲ್ಲೂ ತೊಡಗಿಕೊಂಡಿದ್ದಾರೆ. ಇವರ ಕೃಷಿ ಹಾಗೂ ಹೈನುಗಾರಿಕೆಗೆ ಪತ್ನಿ ಪ್ರೇಮಾ ತಿಮ್ಮ ಪೂಜಾರಿಯವರು ಬೆನ್ನೆಲುಬಾಗಿ ಸಹಕರಿಸುತ್ತಾರೆ.

ಹೊಸ ಹೊಸ ವಿಧಾನ ಅಳವಡಿಕೆ
ದೂರದರ್ಶನ, ಪತ್ರಿಕೆಗಳಲ್ಲಿ ಬರುವ ಕೃಷಿ ಸಂಬಂಧಿತ ವಿಚಾರಗಳನ್ನು ಅಧ್ಯಯನ ನಡೆಸಿ ತನಗೆ ಬೇಕಾದ್ದನ್ನು ಅಳವಡಿಸಿಕೊಳ್ಳುವುದು ಇವರ ವಿಶೇಷ. ಅದೇ ರೀತಿ ಈ ಭಾಗದಲ್ಲಿ ಪ್ರಥಮ ಬಾರಿಗೆ ಕಲ್ಲಂಗಡಿ ಬೆಳೆಗೆ ನೇರ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿ ಯಶಸ್ವಿಯಾಗಿದ್ದಾರೆ. ಮಟ್ಟುಗುಳ್ಳ ಮುಂತಾದ ತರಕಾರಿಗಳನ್ನು ಬೆಳೆದಿದ್ದಾರೆ. ಸ್ವತಃ ಶ್ರಮವಹಿಸಿ ದುಡಿಯುವ ಇವರು ಬೆಳೆಗಳಿಗೆ ಬೇಕಾಗುವ ಬೇರೆ ಬೇರೆ ರೀತಿಯ ಗೊಬ್ಬರಗಳನ್ನು ಜಮೀನಿನಲ್ಲೇ ತಯಾರಿಸುತ್ತಾರೆ.

ರೈತರಿಗೆ ಕೃಷಿ ಮಾಹಿತಿ
ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಅಧ್ಯಕ್ಷರಾಗಿರುವ ಇವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಕೃಷಿ ಅಧ್ಯಯನ ತಂಡದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿ ಅಲ್ಲಿನ ಕೃಷಿ ವಿಶ್ವವಿದ್ಯಾನಿಲಯ, ಅಧಿಕಾರಿಗಳು, ರೈತರನ್ನು ಭೇಟಿಯಾಗಿ ಹೊಸ ವಿಧಾನಗಳನ್ನು ಅಧ್ಯಯನ ನಡೆಸಿ ತನ್ನ ಜಮೀನಿನಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರ ಕೃಷಿ ಹಾಗೂ ಹೈನುಗಾರಿಕೆಯ ಕುರಿತು ಮಾಹಿತಿ ಪಡೆಯುವ ಸಲುವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಸೇರಿದಂತೆ ನೂರಾರು ಮಂದಿ ರೈತರು ಭೇಟಿ ನೀಡುತ್ತಾರೆ. ಜಿಲ್ಲಾಮಟ್ಟದ ಜಾನುವಾರು ಮೇಳ, ಪ್ರಾತ್ಯಕ್ಷಿಕೆ ಮುಂತಾದ ಯಶಸ್ವಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಗಳಿಗೆ ನಾಟಿ ಔಷಧದ ಕುರಿತು ಇವರು ಕೆಲವೊಂದು ಮಾಹಿತಿ ನೀಡುತ್ತಾರೆ.


ಪ್ರಶಸ್ತಿ ಪುರಸ್ಕಾರಗಳು
ಭತ್ತದಲ್ಲಿ ಅತ್ಯಧಿಕ ಇಳುವರಿ ಪಡೆಯುವ ಮೂಲಕ ಪ್ರಥಮ ಸ್ಥಾನಗಳಿಸಿ ಈ ಸಾಲಿನಲ್ಲಿ ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲಾ ಮಟ್ಟದ ಜಾನುವಾರು ಮೇಳದಲ್ಲಿ ಇವರ ಜಾನುವಾರುಗಳು 2 ಪ್ರಥಮ ಹಾಗೂ 1ದ್ವಿತೀಯ ಬಹುಮಾನವನ್ನು ಗಳಿಸಿದೆ. ಸಂಘ-ಸಂಸ್ಥೆಗಳು ಕೂಡ ಇವರನ್ನು ಗುರುತಿಸಿ ಗೌರವಿಸಿದೆ.ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪಶು ಆಹಾರ ಬಳಬೇಕು. ಇದರಿಂದಾಗಿ ಪಶುಗಳ ನಿರ್ವಹಣೆ ವೆಚ್ಚ ಕಡಿಮೆಯಾಗಿ ಹೈನುಗಾರಿಕೆ ಲಾಭವಾಗುತ್ತದೆ. ದಿನಕ್ಕೆರಡು ಬಾರಿ ಗದ್ದೆಗೆ ಭೇಟಿ ನೀಡಿ ಬೆಳೆಯ ಬೆಳವಣಿಗೆ, ಸಮಸ್ಯೆಗಳನ್ನು ಅವಲೋಕಿಸಬೇಕು. ಈ ರೀತಿ ಮಾಡುವುದರಿಂದ ಕೃಷಿಯಲ್ಲಿ ಯಶಸ್ವಿ ಸಾಧ್ಯ ಎನ್ನುವುದಾಗಿ ಇವರು ಅಭಿಪ್ರಾಯಿಸಿದ್ದಾರೆ.

ಕೃಷಿ ಯಶಸ್ವಿ ಉದ್ಯಮವಾಗಿ ಬೆಳೆಯಲಿದೆ
ಮುಂದೆ ಭವಿಷ್ಯದಲ್ಲಿ ಕೃಷಿ ಯಶಸ್ವಿ, ಲಾಭದಾಯಕ ಉದ್ಯಮವಾಗಿ ಬೆಳೆಯಲಿದೆ. ಹೀಗಾಗಿ ರೈತರು ಜಮೀನು ಮಾರಾಟ ಮಾಡಿದರೆ ಮುಂದೆ ಪಶ್ಚಾತ್ತಾಪ ಪಡುವ ದಿನ ಬರಬಹುದು. ಆದರೆ ಕೃಷಿಯಲ್ಲಿ ಯಶಸ್ವಿಯಾಗಬೇಕಾದರೆ ಕಠಿಣ ದುಡಿಮೆ, ಅಧ್ಯಯನ ಮಾಡುವ ಮನಸ್ಸು ಅಗತ್ಯ. ಭತ್ತದ ಬೆಳೆಯಲ್ಲಿ ಯಾವುದೇ ಕಾರಣಕ್ಕೆ ನಷ್ಟವಾಗುವುದಿಲ್ಲ.ಕೇವಲ ಒಂದೇ ವಿಧಾನಕ್ಕೆ ಜೋತು ಬೀಳದೆ ಮಿಶ್ರ ವಿಧಾನವನ್ನು ಅನುಸರಿಸಿದರೆ ಯಶಸ್ವಿ ಸಾಧ್ಯವಿದೆ. ಸಂಪೂರ್ಣವಾಗಿ ಪಶು ಆಹಾರವನ್ನು ಮೆಚ್ಚಿಕೊಂಡರೆ ಹೈನುಗಾರಿಕೆ ನಷ್ಟವಾಗುತ್ತದೆ ಹಾಗೂ ಇದಕ್ಕೆ ಪರ್ಯಾಯಾಗಿ ಜೋಳ, ಇತರ ಹುಲ್ಲು, ತರಕಾರಿಗಳನ್ನು ಬೆಳೆದು ಆಹಾರವಾಗಿ ನೀಡಬೇಕು. ಯುವಕರು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ, ಹವ್ಯಾಸವಾಗಿಯಾದರು ತೊಡಗಿಸಿಕೊಳ್ಳಿ
-ತಿಮ್ಮ ಪೂಜಾರಿ ಗಿಳಿಯಾರು, ಕೋಟ

ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.