200 ಎಕ್ರೆಗೂ ಹೆಚ್ಚು ಹಡಿಲು ಭೂಮಿ ಹಸುರಾಗಿಸಿದ ಸೋಮ ಪೂಜಾರಿ

ಉದ್ಯಮದ ಸ್ಪರ್ಶ ನೀಡಿದ ಯಶಸ್ವಿ ಕೃಷಿಕ

Team Udayavani, Dec 22, 2019, 4:06 AM IST

cd-28

ಹೆಸರು: ಸೋಮ ಪೂಜಾರಿ ಶಿರಿಯಾರ
ಏನೇನು ಕೃಷಿ: ಭತ್ತ, ಸೌತೆ, ಕುಂಬಳ, ಗೆಣಸು, ಬದನೆ, ಮೆಣಸು, ಹೈನುಗಾರಿಕೆ
ಎಷ್ಟು ವರ್ಷದ ಅನುಭವ: 46
ಕೃಷಿ ಪ್ರದೇಶ: 4ಎಕ್ರೆ ಸ್ವಂತ, 20ಎಕ್ರೆ ಗೇಣಿಗೆ ಜಮೀನು

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕೋಟ: ಶಿರಿಯಾರ ಸಮೀಪ ಕೊಳ್ಕೆಬೈಲಿನ ಸೋಮ ಪೂಜಾರಿ ಮೂಲತಃಕೃಷಿ ಕುಟುಂಬದವರು. 7ನೇ ತರಗತಿಗೆ ಶಾಲೆ ತ್ಯಜಿಸಿದ ಇವರು 16ನೇ ವಯಸ್ಸಿಗೆ ಕೃಷಿಯತ್ತ ಮುಖಮಾಡಿದ್ದರು. ಅನಂತರ ಭತ್ತ, ತರಕಾರಿ, ಹೈನು ಗಾರಿಕೆಯಲ್ಲಿ ತೊಡಗಿಕೊಂಡರು. ಕೃಷಿ ಚಟುವಟಿಕೆ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಯಾಂತ್ರೀಕೃತ ಕೃಷಿಗೆ ನವ ಉದ್ಯಮದ ಸ್ಪರ್ಶ ನೀಡಿ ಕಾಪುವಿನಿಂದ ಬೈಂದೂರುವರೆಗಿನ ಸುಮಾರು 1ಸಾವಿರ ಎಕ್ರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿಚಟುವಟಿಕೆಯಲ್ಲಿ ತೊಡಗಿಕೊಂಡು ಸುಮಾರು 200 ಎಕ್ರೆ ಹಡಿಲು ಭೂಮಿಯನ್ನು ಹಸುರಾಗಿಸಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ ಬ್ರಹ್ಮಾವರದ ಕೃಷಿ ಮೇಳ ಹಾಗೂ ಕೋಟ ಜಾನುವಾರು ಮೇಳದಲ್ಲಿ ಜಿಲ್ಲೆಯ ಅತ್ಯುತ್ತಮ ಯಾಂತ್ರೀಕೃತ ಪ್ರಗತಿಪರ ಕೃಷಿಕ ಪ್ರಶಸ್ತಿ, ಉತ್ತಮ ಕೃಷಿಕ ಪ್ರಶಸ್ತಿ ಜತೆಗೆ ಹತ್ತಾರು ಸಂಘ-ಸಂಸ್ಥೆಗಳ ಗೌರವಗಳು ಸಂದಿವೆ.

ಒಂದು ಸಾವಿರ ಎಕ್ರೆ ಯಾಂತ್ರೀಕೃತ ಕೃಷಿ
ಕಾರ್ಮಿಕರ ಕೊರತೆ ಮುಂತಾದ ಕಾರಣಗಳಿಂದ ಕೃಷಿ ಜಮೀನುಗಳು ಹಡಿಲು ಬೀಳುತ್ತಿರುವುದನ್ನು ಕಂಡು ಮರುಗಿದ ಪೂಜಾರಿಯವರು ರೈತನಿಗೆ ಯಾವುದೇ ಶ್ರಮವಿಲ್ಲದಂತೆ ನೇಜಿ ಬೆಳೆಯುವುದರಿಂದ ಹಿಡಿದು ಉಳುಮೆ, ನಾಟಿ, ಕಟಾವು ಮುಂತಾದ ಸಮಗ್ರ ಚಟುವಟಿಕೆಯನ್ನು ರಿಯಾಯಿತಿ ದರದಲ್ಲಿ ಮಾಡಿಕೊಟ್ಟರೆ ಕೃಷಿಯಲ್ಲಿ ಆಸಕ್ತಿ ಉಳಿಸಿಕೊಳ್ಳಬಹುದು ಎನ್ನುವ ನಿರ್ಧಾರಕ್ಕೆ ಬಂದರು. ಕೃಷಿಕರನ್ನು ಭೇಟಿಯಾಗಿ ತನ್ನ ಚಟುವಟಿಕೆ ಆರಂಭಿಸಿದರು. ಇದರ ಪರಿಣಾಮ ಇದೀಗ ಜಿಲ್ಲೆಯ ಸುಮಾರು 850ರಿಂದ 1000 ಎಕ್ರೆ ಗದ್ದೆಗಳಲ್ಲಿ ಮಾಲಕನ ಯಾವುದೇ ಶ್ರಮವಿಲ್ಲದೆ ಇವರ ನೇತೃತ್ವದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ ಮತ್ತು ಸುಮಾರು 200 ಎಕ್ರೆ ಹಡಿಲು ಭೂಮಿ ಹಸುರಾಗಿದೆ. ಇವರಲ್ಲಿ 30 ಜನ ಕಾರ್ಮಿಕರು ಇದ್ದು, 15ಮಂದಿ ಖಾಯಂ ನೌಕರರಂತೆ ದುಡಿಯುತ್ತಿದ್ದಾರೆ. 5ಟ್ರ್ಯಾಕ್ಟರ್‌, 2 ಪವರ್‌ ಟಿಲ್ಲರ್‌ಗಳನ್ನು ಹೊಂದಿದ್ದಾರೆ.

ಹೊಸದಾಗಿ ಕೃಷಿಕಡೆಗೆ ಮುಖ ಮಾಡುವ ಯುವಕರು ಹಾಗೂ ಅನುಭವದ ಕೊರತೆ ಇರುವವರಿಗೆ ಫೋನ್‌ ಮೂಲಕ ಹಾಗೂ ನೇರವಾಗಿ ಜಮೀನಿಗೆ ಭೇಟಿ ನೀಡಿ ಕೃಷಿಯ ಪ್ರತಿಯೊಂದು ಅಂಗದ ಕುರಿತು ಇವರು ಮಾಹಿತಿ ನೀಡುತ್ತಾರೆ. ಇದೀಗ 62ರ ಹರೆಯದಲ್ಲಿರುವ ಇವರ ಕೃಷಿ ಚಟುವಟಿಕೆಯ ಚುರುಕುತನ ಎನ್ನುವುದು ಹಲವರನ್ನು ಕೃಷಿ ಕಡೆಗೆ ಸೆಳೆಯುವಂತೆ ಮಾಡಿದೆ.ಸರಕಾರದ ಸಬ್ಸಿಡಿ ದರದಲ್ಲಿ ಸಿಗುವ ಯಂತ್ರಗಳನ್ನು ಖರೀದಿಸಿ ದರೆ ವರ್ಷದ ಎರಡು-ಮೂರು ತಿಂಗಳು ಹೊರತುಪಡಿಸಿದರೆ ಮಿಕ್ಕೆಲ್ಲ ಸಮಯದಲ್ಲಿ ಕೆಲಸವಿರುತ್ತದೆ ಮತ್ತು ತಿಂಗಳಿಗೆ ಲಕ್ಷಾಂತರ ಆದಾಯ ಗಳಿಸಬಹುದು ಜತೆಗೆ ಕೃಷಿಭೂಮಿ ಹಡಿಲು ಬೀಳುವುದನ್ನು ತಪ್ಪಿಸಬಹುದು. ಯುವ ಜನಾಂಗ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂಬುದು ಇವರ ಕಿವಿಮಾತಾಗಿದೆ.

ಕೃಷಿಯ ಜತೆ ತೋಟಗಾರಿಕೆ
ಸೋಮ ಪೂಜಾರಿಯವರು ತೋಟಗಾರಿಕೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದಾರೆ. ಸೌತೆ, ಕುಂಬಳ, ಗೆಣಸು, ಬದನೆ, ಮೆಣಸನ್ನು ಬೆಳೆಸಿದ್ದಾರೆ. ಟೊಮೇಟೋ, ಆಲುಗಡ್ಡೆ, ಬೀನ್ಸ್‌ ಬೆಳೆಯಲು ಪ್ರಯತ್ನವನ್ನೂ ಮಾಡಿದ್ದು, ಆದರೆ ಇಲ್ಲಿನ ಹವಾಮಾನಕ್ಕೆ ಒಗ್ಗದ ಕಾರಣ ಅದನ್ನು ಕೈಬಿಟ್ಟಿದ್ದಾರೆ.

ಗೋಮೂತ್ರ ಔಷ ಧವಾಗಿ ಗಿಡಗಳಿಗೆ ಸಿಂಪಡಿಸಿ ಯಶಸ್ಸನ್ನು ಕಂಡಿದ್ದಾರೆ. ಹೆಚ್ಚಾಗಿ ಹಟ್ಟಿಗೊಬ್ಬರ, ಸಾವಯವ ಬಳಸಿ ಕೃಷಿ ಮಾಡುತ್ತಾರೆ. ಅಗತ್ಯವಿದ್ದಲ್ಲಿ ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ.

ಕೃಷಿ ಉದ್ಯಮಕ್ಕೆ ಉತ್ತಮ ಭವಿಷ್ಯ
ಬೇರೆ ಜಿಲ್ಲೆಗೆ ಹೋಲಿಸಿದರೆ ಉಡುಪಿ, ದ.ಕ.ದಲ್ಲಿ ಕೃಷಿಯನ್ನು ಉದ್ಯಮವಾಗಿ ಸ್ವೀಕರಿಸುವ ಸಂಖ್ಯೆ ಕಡಿಮೆ. ಹೀಗಾಗಿ ಅನ್ಯ ಜಿಲ್ಲೆಗಳ ಯಂತ್ರೋಪಕರಣಗಳು ಇಲ್ಲಿಗೆ ಬರುತ್ತವೆೆ. ಆದರೆ ಉಭಯ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ಅತ್ಯಂತ ಯಶಸ್ವಿ ಉದ್ಯಮವಾಗಿ ಬೆಳೆಯಲು ಅವಕಾಶವಿದೆ.

ಲಾಭ ಖಂಡಿತಾ ಇದೆ
ಕೃಷಿಯಲ್ಲಿ ಶ್ರಮವಹಿಸಿ, ಕನಿಷ್ಠ ಮನೆಯ ಓರ್ವ ಸದಸ್ಯರಾದವರು ಸಂಪೂರ್ಣವಾಗಿ ತೊಡಗಿಸಿಕೊಂಡು ದುಡಿದರೆ ಖಂಡಿತಾ ಲಾಭವಿದೆ. ಭವಿಷ್ಯದಲ್ಲಿ ಕೃಷಿ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ ಹಾಗೂ ಲಕ್ಷಾಂತರ ಆದಾಯ ಗಳಿಸಲು ಸಾಧ್ಯವಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ನನ್ನ 24ಎಕ್ರೆ ಕೃಷಿಭೂಮಿಯಲ್ಲಿ ವರ್ಷಕ್ಕೆ 250ಕ್ಕೂ ಹೆಚ್ಚು ಕ್ವಿಂಟಾಲ್‌ ಭತ್ತ ಬೆಳೆಯ್ತುತೇನೆ. ಐದಾರು ಲೋಡ್‌ ತರಕಾರಿ ಇಳುವರಿ ಬರುತ್ತದೆ. ಕೃಷಿಯಲ್ಲಿ ಯಶಸ್ಸಿಗೆ ಅಧಿಕಾರಿಗಳೊಂದಿಗೆ ಸಂಪರ್ಕ ಅತೀ ಅಗತ್ಯ.ಶಂಕರ ಶೇರಿಗಾರ್‌ ಅಂತಹ ಉತ್ತಮ ಅಧಿಕಾರಿಗಳ ಮಾರ್ಗದರ್ಶನ ನನ್ನ ಈ ಮಟ್ಟಕ್ಕೆ ಬೆಳೆಸಿದೆ. ಯಾರೂ ಕೂಡ ಭೂಮಿಯನ್ನು ಹಡಿಲು ಹಾಕಬೇಡಿ. ಭತ್ತ ಕಷ್ಟವಾದರೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ಲಕ್ಷವಹಿಸಿ.
ಸೋಮ ಪೂಜಾರಿ, ಪ್ರಗತಿಪರ ಕೃಷಿಕ

ರಾಜೇಶ್‌ ಗಾಣಿಗ ಅಅಚ್ಲಾಡಿ 

ಟಾಪ್ ನ್ಯೂಸ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.