ಏಣಗುಡ್ಡೆ: ಸಾಂಪ್ರದಾಯಿಕ ಮುಳ್ಳಮುಟ್ಟೆ ಆಚರಣೆ
ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ಸಾಂಪ್ರದಾಯಿಕ ಹಬ್ಬ
Team Udayavani, Nov 15, 2020, 9:35 PM IST
ಏಣಗುಡ್ಡೆ ನೀಚ ದೈವಸ್ಥಾನದ ಬಳಿ ಮುಳ್ಳಮುಟ್ಟೆಯನ್ನು ಸುಡುವ ಆಚರಣೆ ನಡೆಯಿತು.
ಕಟಪಾಡಿ: ಕಟಪಾಡಿ ಏಣಗುಡ್ಡೆ ನೀಚ ದೈವಸ್ಥಾನದ ಬಳಿ ಶನಿವಾರ ಮುಂಜಾವಿನಲ್ಲಿ ಮುಳ್ಳಮುಟ್ಟೆಯನ್ನು ಸುಡುವ ಆಚರಣೆಯು ಕಂಡು ಬಂದಿರುತ್ತದೆ.ತುಳುನಾಡಿನಲ್ಲಿ ನಡೆದು ಬಂದ ಕೋಲ, ಬಲಿ, ನೇಮ, ಅಂಕ, ಆಯನ, ಮಾರಿ, ಮಗ್ಗಿನ, ನಾಗಾರಾಧನೆ, ಭೂತಾರಾಧನೆ, ಜತೆಗೆ ಮುಳ್ಳಮುಟ್ಟೆಯು ಬೆಸೆದುಬಂದ ಸಂಪ್ರದಾಯವಾಗಿದೆ.
ಮುಳ್ಳಮುಟ್ಟೆಯ ಆಚರಣೆಯ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ದೈವಸ್ಥಾನದ ಮುಖ್ಯಸ್ಥ ಆನಂದ ಮಾಬ್ಯಾನ್, ಗುರಿಕಾರರಾದ ದಾಮೋದರ ಕೆ. ಪೂಜಾರಿ ನಡುಮನೆ, ಸೂರಪ್ಪ ಕುಂದರ್, ವಿನೋದರ ಪೂಜಾರಿ, ಮದಿಪು ನಾರಾಯಣ ಪೂಜಾರಿ, ಹರಿದಾಸ ಶ್ರೀಯಾನ್, ಗಣೇಶ್ ಮಿತ್ತೂಟ್ಟು, ರಾಜೇಂದ್ರ ಆಚಾರ್ಯ, ಸಿದ್ಧಾಂತ್ ಎ. ಮಾಬ್ಯಾನ್ ಮೊದಲಾದವರು ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಅರ್ಚಕ ರಮೇಶ್ ಕೋಟ್ಯಾನ್, ಸಮೀರ್ ಅಂಚನ್, ಕೃಷ್ಣ ಪೂಜಾರಿ ಸಾಂಪ್ರದಾಯಿಕ ಪೂಜಾ ವಿಧಿಗಳನ್ನು ನೆರವೇರಿಸಿದರು.