ಶ್ರೀಕೃಷ್ಣ ಮಠಕ್ಕೆ ಪಾರಂಪರಿಕ ಹೊಸ ರೂಪ
ಆರು ತಿಂಗಳ ಬಳಿಕ ಸೆ. 28ರಿಂದ ಭಕ್ತರ ಆಗಮನಕ್ಕೆ ಶ್ರೀಮಠ ಮುಕ್ತ
Team Udayavani, Sep 24, 2020, 6:25 AM IST
ಕನಕ ಮಂಟಪದಿಂದ ಕಾಣಿಸುವ ಮುಖ್ಯಪ್ರಾಣ ದೇವರ ಗುಡಿ ಎದುರು ನಿರ್ಮಿಸಲಾದ ಹೆಂಚಿನ ಛಾವಣಿ.
ಉಡುಪಿ: ಶ್ರೀಕೃಷ್ಣ ಮಠವು 6 ತಿಂಗಳ ಬಂದ್ ಬಳಿಕ ಭಕ್ತರ ಪ್ರವೇಶಕ್ಕೆ ಸಿದ್ಧವಾಗಿದೆ. ಪರ್ಯಾಯ ಪೂಜಾದೀಕ್ಷೆಯಲ್ಲಿರುವ ಯುವ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಈ ಆರು ತಿಂಗಳ ಅವಧಿಯನ್ನು ಮಠದಲ್ಲಿ ಹಲವು ನಾಜೂಕಿನ ಪರಿವರ್ತನೆಗಳನ್ನು ತರಲು ಅವಕಾಶವಾಗಿ ಬಳಸಿಕೊಂಡಿದ್ದಾರೆ.
ಶ್ರೀಕೃಷ್ಣ ಮಠದ ಭೋಜನ ಶಾಲೆ, ಬಡಗುಮಾಳಿಗೆಗೆ ನೈಸರ್ಗಿಕ ಬಣ್ಣವನ್ನು ಕೊಡಲಾಗಿದೆ. ಮಾರ್ಚ್‌ಗೆ ಮೊದಲೇ ಭಕ್ತರು ದರ್ಶನಕ್ಕೆ ತೆರ ಳುವ ಮಾರ್ಗವನ್ನು ಬದಲಾಯಿಸಲಾಗಿತ್ತು. ರಾಜಾಂಗಣ ಪ್ರವೇಶದಿಂದಲೇ ಭೋಜನ ಶಾಲೆಯ ಮೇಲೇರಿ, ಅಲ್ಲಿಂದ ಕೃಷ್ಣಮಠದ ಗರ್ಭಗುಡಿ ಪ್ರವೇಶಿಸುವುದು ಹೊಸ ಮಾರ್ಗವಾಗಿದೆ.
ವಿಶೇಷ ಅನುಭವ
ಈ ದಾರಿಯಿಂದ ಸಾಗುವಾಗ ಪ್ರಾಚೀನ ಪರಂಪರೆಗೆ ತೆರಳಿದ ಅನುಭವವಾಗುತ್ತದೆ. ಗಾಳಿ-ಬೆಳಕು ಧಾರಾಳ ಸಿಗುತ್ತದೆ. ದೇವರ ದರ್ಶನಕ್ಕೆ ಇಳಿಯುವ ಮೊದಲೇ ಮೇಲ್ಭಾಗದಲ್ಲಿ ಗರ್ಭಗುಡಿಗೆ ಕಳೆದ ವರ್ಷ ಹೊದೆಸಿದ ಸ್ವರ್ಣ ಗೋಪುರವನ್ನು ವೀಕ್ಷಿಸಬಹುದು.
ಕೆಳಗೆ ಇಳಿದು ದೇವರ ದರ್ಶನ ಮಾಡಿ ಮುಖ್ಯಪ್ರಾಣನ ದರ್ಶನದ ಬಳಿಕ ಅಲ್ಲಿಯೇ ಮೇಲೇರಿ ಹೋಗಲು ಅವಕಾಶ ಕಲ್ಪಿಸಲಾಗಿದೆ. ಮೇಲ್ಭಾಗದಲ್ಲಿ ಬರುವುದು ಮತ್ತು ಹೋಗುವುದು ಎರಡನ್ನೂ ಸೇರಿಸಿದರೆ ಒಂದು ಪ್ರದಕ್ಷಿಣೆ ಬಂದಂತಾಗುತ್ತದೆ. ಭೋಜನ ಶಾಲೆಯ ಮುಖ್ಯ
ಪ್ರಾಣನ ಹೊರಭಾಗದಲ್ಲಿ ಕರಾವಳಿಯ ಸೊಗಡಾದ ಹೆಂಚಿನ ಮಾಡನ್ನು, ಮಧ್ವ ಸರೋವರದ ಮೆಟ್ಟಿಲ ಮೇಲೆ ಬೈಹುಲ್ಲಿನ ಮಾಡನ್ನು ನಿರ್ಮಿಸಲಾಗಿದೆ. ಸೆ. 28ರಿಂದ ಭಕ್ತರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದೆ. ಸದ್ಯ ಅಪರಾಹ್ನ 2ರಿಂದ ಸಂಜೆ 5ರ ವರೆಗೆ ಮಾತ್ರ ಪ್ರವೇಶಾವಕಾಶವಿದೆ. ಪರಿಸ್ಥಿತಿ ಗಮನಿಸಿ ಇತರ ವ್ಯವಸ್ಥೆ ಮಾಡುವುದಾಗಿ ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿ ತಿಳಿಸಿದೆ.
ಹಳೆ ಬೇರು-ಹೊಸ ಚಿಗುರು
ಶ್ರೀ ಅದಮಾರು ಮಠದ ಹಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಿಯತೀರ್ಥರ ಮಾರ್ಗದರ್ಶನದಲ್ಲಿ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥರು ಹಲವು ಹೊಸ ಯೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಿದ್ದಾರೆ. ಮಠಕ್ಕೆ ಬೇಕಾಗುವ ಬಾಳೆ ಎಲೆಗಳನ್ನು ಸ್ಥಳೀಯ ಕೃಷಿಕರಿಂದ ಪಡೆಯುವ ಪ್ರಯತ್ನಕ್ಕೆ ಬಾಳೆ ಮುಹೂರ್ತ ದಲ್ಲಿಯೇ ಚಾಲನೆ ನೀಡಲಾಗಿತ್ತು. ಕೃಷಿಕರು ಗದ್ದೆಗಳನ್ನು ಪಾಳುಬಿಡುವ ಬದಲು ವ್ಯವಸಾಯ ಮಾಡಬೇಕೆಂಬ ಆಶಯದಿಂದ ಹಲವರಿಗೆ ಪ್ರೋತ್ಸಾಹ ನೀಡಲಾಗಿದೆ. ನೇಕಾರಿಕೆಗೆ ಪ್ರೋತ್ಸಾಹ ಕೊಡುವ ದೃಷ್ಟಿ ಯಿಂದ ಕೈಮಗ್ಗದ ಶಾಲುಗಳನ್ನು ಖರೀದಿಸ ಲಾಗುತ್ತಿದೆ. ಇದೇ ಮೊದಲ ಬಾರಿ ಕೈಮಗ್ಗದ ಸೀರೆಯನ್ನು ಶುಕ್ರವಾರದ ದೇವರ ಅಲಂಕಾರಕ್ಕೆ ಬಳಸಲಾಯಿತು. ಅದಮಾರು ಮಠದಲ್ಲಿ ನೀರಿಂಗಿಸುವಿಕೆ, ಗೋಡೆಗಳಿಗೆ ನೈಸರ್ಗಿಕ ಬಣ್ಣವನ್ನು ಪರ್ಯಾಯದ ಮೊದಲೇ ನಿರ್ವಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.