ಬರ ನಿರ್ವಹಣೆ, ಚರಂಡಿ ಕಾಮಗಾರಿ ತ್ವರಿತಗೊಳಿಸಿ
Team Udayavani, Jun 19, 2019, 6:07 AM IST
ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು, ಮಳೆನೀರು ಹರಿಯುವ ಚರಂಡಿಗಳ ನಿರ್ವಹಣೆ ಮತ್ತು ಸ್ವತ್ಛತೆಯನ್ನು ಚುರುಕುಗೊಳಿಸಬೇಕು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸೂಚನೆ ನೀಡಿದ್ದಾರೆ.
ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.
ಮೇಲಧಿಕಾರಿಗಳು ನಗರ ಮತ್ತು ಪಟ್ಟಣ ಪ್ರದೇಶಗಳೆರಡಕ್ಕೂ ಭೇಟಿ ನೀಡಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಡಳಿತ ಮತ್ತು ಕಾಮಗಾರಿಗೆ ವೇಗ ನೀಡಬೇಕು. ಮಳೆ ನೀರು ಚರಂಡಿಯ ಹೂಳೆತ್ತಿರುವ ಕುರಿತು 15 ದಿನಗಳೊಳಗೆ ಪರಿಶೀಲಿಸಿ ವರದಿ ನೀಡಬೇಕು ಎಂದರು. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿ ಹಣಕಾಸಿನ ಲಭ್ಯತೆ ಕುರಿತು ಜಿಲ್ಲೆಯ ಎಲ್ಲ ತಾ.ಪಂ. ಇಒಗಳಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದ ಸಚಿವರು, ಅಗತ್ಯ ಮೊತ್ತವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ನಗರದಲ್ಲಿ ವೈಫಲ್ಯ
ಗ್ರಾಮೀಣ ಭಾಗಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ನಡೆದಿದೆ. ಆದರೆ ಉಡುಪಿ ನಗರಸಭೆಯ 35 ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಲ್ಲಿ ಮಾತ್ರ ನಗರಸಭೆ ಮತ್ತು ಜಿಲ್ಲಾಡಳಿತದ ವತಿಯಿಂದ ಟ್ಯಾಂಕರ್ ನೀರು ಪೂರೈಕೆಯಾಗಿದೆ. ಇತರ ಕಡೆಗಳಿಗೆ ನಾನು ಮತ್ತು ನಗರಸಭಾ ಸದಸ್ಯರು ಸ್ವಂತ ಖರ್ಚಿ ನಿಂದ ನೀರು ಪೂರೈಸಿದ್ದೇವೆ ಎಂದು ಶಾಸಕ ರಘುಪತಿ ಭಟ್ ಗಮನ ಸೆಳೆದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿ ಸಿದ ಸಚಿವರು, ಇದು ಅಧಿಕಾರಿಗಳ ಗಂಭೀರ ಲೋಪವಲ್ಲವೆ, ನೀರು ಕೊಡಬಾರದೆಂದು ಸರಕಾರದ ಆದೇಶವಿತ್ತೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀರಿನ ಕೊರತೆಯಿಂದ ಕೆಲವು ಶಾಲೆಗಳಿಗೆ ರಜೆ ನೀಡಿರುವ ಬಗ್ಗೆಯೂ ಪ್ರಶ್ನಿಸಿದರು.
ಜಿಲ್ಲೆಯ 148 ಗ್ರಾ.ಪಂ.ಗಳಲ್ಲಿ 169 ಟ್ಯಾಂಕರ್‌ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದರು.
ಹಣ ಪಾವತಿಗೆ ಸೂಚನೆ
ಟ್ಯಾಂಕರ್ ನೀರು ಪೂರೈಸಿದವರಿಗೆ ಬಿಲ್ ಪಾವತಿಯಾಗಿಲ್ಲ. ಇದರಿಂದ ಕೆಲವೆಡೆ ನೀರು ಪೂರೈಕೆಯಾಗುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ದೂರಿದರು. ಬಾಕಿ ಇರುವ ಮೊತ್ತವನ್ನು 7 ದಿನದೊಳಗೆ ಪಾವತಿಸಬೇಕು. ಪಾವತಿ ಪಾರದರ್ಶಕ, ಶೀಘ್ರವಾಗಿರಲಿ ಎಂದು ಸಚಿವರು ಹೇಳಿದರು.
ಸರಕಾರಿ ಜಾಗ ರಕ್ಷಿಸಿ
ಸರಕಾರಿ ಜಾಗದ ಅತಿಕ್ರಮಣ ತಡೆ ಯಲು ಕೂಡಲೇ ಸೂಚನಾ ಫಲಕ, ಬೇಲಿ ಅಳವಡಿಸಬೇಕು. ಅತಿಕ್ರಮಣ ತೆರವುಗೊಳಿಸಿ. ಮೊದಲು ಶ್ರೀಮಂತರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.
ಆಧಾರ್ ತಿದ್ದುಪಡಿ ಗ್ರಾ.ಪಂ.ಗೆ ಕೊಡಿ
ಈ ಹಿಂದೆ ಗ್ರಾ.ಪಂ.ಗಳಲ್ಲಿಯೂ ಆಧಾರ್ ತಿದ್ದುಪಡಿಗೆ ಅವಕಾಶವಿತ್ತು. ಆದರೆ ಈಗ ಇಲ್ಲ ಎಂದು ಶ್ರೀನಿವಾಸ ಪೂಜಾರಿ ಗಮನ ಸೆಳೆದರು. ಈ ಬಗ್ಗೆ ಕೂಡಲೇ ಗಮನಿಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ವಿವಿಧ
ಪಿಂಚಣಿ ಯೋಜನೆಗಳ ಹಣ 7 ತಿಂಗಳಿಂದ ಮಂಜೂರಾಗದೆ ಇರುವ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.
ಹೆಣ್ಮಕ್ಕಳ ಬಗ್ಗೆ ಕಾಳಜಿ ಇರಲಿ
ಪ್ರಗತಿ ಪರಿಶೀಲನ ಸಭೆಗೆ ಸಚಿವೆ ಡಾ| ಜಯಮಾಲಾ ಗೈರು ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಅವರಿಗೆ ಈ ಸಭೆಯ ಬಗ್ಗೆ ಗೊತ್ತಿರಲಿಲ್ಲ. ಅವರು ಇಂದು ರಾಜ್ಯಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ. ಆದರೂ ನಿನ್ನೆ ರಾತ್ರಿ ಕರೆ ಮಾಡಿ ಅಗತ್ಯವಿದ್ದರೆ ಸಭೆ ರದ್ದು ಮಾಡುತ್ತೇನೆ ಎಂದಿದ್ದರು. ನಾನೇ ಬೇಡ ಎಂದಿದ್ದೆ. ಹೆಣ್ಮಕ್ಕಳ ಬಗ್ಗೆ ಕಾಳಜಿ ಇರಲಿ ಎಂದರು.
ಹಣದ ಕೊರತೆ ಇಲ್ಲ
18 ವರ್ಷಗಳಲ್ಲಿ 2005, 2007, 2010 ಮತ್ತು 2017 ಇಸವಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ವರ್ಷ ಬರಗಾಲ ಉಂಟಾಗಿದೆ. ಬರಗಾಲ ವಿಚಾರದಲ್ಲಿ ರಾಜಿ ಇಲ್ಲ. ಹಣಕಾಸಿನ ಕೊರತೆ ಇಲ್ಲ. ಉಡುಪಿ ಡಿಸಿ ಬಳಿಯೂ 24 ಕೋ.ರೂ. ಇದೆ. 6 ತಿಂಗಳ ಹಿಂದೆಯೇ ಎಲ್ಲ ಜಿಲ್ಲೆಯ ಅಧಿಕಾರಿಗಳಿಗೂ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೆ. ಅಧಿಕಾರಿಗಳು ಚುರುಕಾಗಬೇಕಿದೆ ಎಂದು ದೇಶಪಾಂಡೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.