ಸಕಾಲದಲ್ಲಿ ವಿದ್ಯುತ್ ಬಿಲ್‌ಗೆ ಕ್ರಮ; ದಿನೇಶ್ ಉಪಾಧ್ಯ
ಉದಯವಾಣಿ ಫೋನ್ ಇನ್ ಕಾರ್ಯಕ್ರಮ
Team Udayavani, Jun 27, 2023, 3:30 PM IST
ಉಡುಪಿ: ಇಂಧನ (ವಿದ್ಯುತ್) ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉದಯವಾಣಿ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ಸೋಮವಾರ ಫೋನ್ ಇನ್ ಕಾರ್ಯಕ್ರಮ ನಡೆಯಿತು.
ಮೆಸ್ಕಾಂನ ಉಡುಪಿ ಜಿಲ್ಲಾ ಅಧೀಕ್ಷಕ ಎಂಜಿನಿಯರ್ ದಿನೇಶ್ ಉಪಾಧ್ಯ ಮತ್ತು ಇತರ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಜಿಲ್ಲೆಯ ಹಲವೆಡೆ ಈ ಬಾರಿ ವಿದ್ಯುತ್ ಬಿಲ್ ವಿಳಂಬದ ಜತೆಗೆ ಅಧಿಕ ದರ ಬಂದಿರುವ ಬಗ್ಗೆ ಕರೆಗಳು ಬಂತು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಲ್ಯಾಬ್ ದರ ಹೆಚ್ಚಳದ ಜತೆಗೆ ಗೃಹಜ್ಯೋತಿ ಯೋಜನೆಯ ಕಾರಣ ತುಸು ವಿಳಂಬವಾಗಿದೆ. ಮುಂದಿನ ದಿನದಲ್ಲಿ ಇದು ಸಮಯಕ್ಕೆ ಸರಿಯಾಗಿ ನಡೆಯಲಿದೆ. ಹಲವು ಪಟ್ಟು ಹೆಚ್ಚಳ ಬಿಲ್ ಬಂದಿದ್ದರೆ ಸಮೀಪದ ಮೆಸ್ಕಾಂ ಕಚೇರಿಯನ್ನು ಭೇಟಿಯಾಗಬಹುದು ಎಂದರು.
ಹಲವೆಡೆ ಚಾರ್ಜಿಂಗ್ ಸ್ಟೇಷನ್
ಜಿಲ್ಲೆಯ 20 ಕಡೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾಜಿಂಗ್ ಪಾಯಿಂಟ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ ಎಲ್ಲ ಕಡೆಗೂ ಟೆಂಡರ್ ಆಗದ ಕಾರಣ ಪ್ರಸ್ತುತ ಮಣಿಪಾಲ ಇನ್, ಮಲ್ಪೆ ಸೆಕ್ಷನ್ ಆಫೀಸ್, ಶಾರದಾ ಹೊಟೇಲ್, ಮಣಿಪಾಲ, ಕಾಪು, ಬ್ರಹ್ಮಾವರ ಸಬ್ ಡಿವಿಜನ್‌ನಲ್ಲಿ ಚಾರ್ಜಿಂಗ್ ಸ್ಟೇಷನ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಹಲವು ಕರೆ
ಲೋ ವೋಲ್ಟೆàಜ್, ವಿದ್ಯುತ್ ಕಡಿತ, ವಿದ್ಯುತ್ ಶುಲ್ಕ ಹೆಚ್ಚಳ, ಅಪಾಯಕಾರಿ ಮರಗಳ ತೆರವು, ಟ್ರಾನ್ಸ್‌ಫಾರ್ಮರ್ ಸಮಸ್ಯೆ, ಅಪಾಯಕಾರಿ ವಿದ್ಯುತ್ ಕಂಬ, ವಿದ್ಯುತ್ ಮೀಟರ್ ಬದಲಾವಣೆ ಸಹಿತ ವಿವಿಧ ಸಮಸ್ಯೆಗಳು ಸಾರ್ವ
ಜನಿಕರಿಂದ ಕೇಳಿಬಂತು. ಸಂಬಂಧಪಟ್ಟವರ ಆರ್‌ಆರ್ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆ ಪಡೆದ ಅಧಿಕಾರಿಗಳು ಅದನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದರು.
3.65 ಲಕ್ಷದಲ್ಲಿ 3.37 ಲಕ್ಷ ಮಂದಿ 200 ಯುನಿಟ್‌ಗಿಂತ
ಕಡಿಮೆ ಬಳಕೆದಾರರು
ಜಿಲ್ಲೆಯಲ್ಲಿ 3,64,000 ಮಂದಿ ವಿದ್ಯುತ್ ಬಳಕೆದಾರ ರಿದ್ದು, ಈ ಪೈಕಿ 3,37,000 ಮಂದಿ 200 ಯುನಿಟ್‌ಗಿಂತ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ.
ಗೃಹಜ್ಯೋತಿ ನೋಂದಣಿಗೆ ಸೂಚನೆ
ಜಿಲ್ಲೆಯ ವಿದ್ಯುತ್ ಬಳಕೆದಾರರು ಗೃಹಜ್ಯೋತಿ ಯೋಜನೆಗೆ ಸ್ಮಾರ್ಟ್‌ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್ ಮೂಲಕ ಸುಲಭದಲ್ಲಿ ನೋಂದಣಿ ಮಾಡಬಹುದು. ವಿದ್ಯುತ್ ಬಿಲ್, ಆಧಾರ್ ಸಂಖ್ಯೆ, ಆಧಾರ್ ಕಾರ್ಡ್ ನಲ್ಲಿರುವ ಫೋನ್ ಸಂಖ್ಯೆಯಿರುವ ಮೊಬೈಲ್ ಇದ್ದರೆ ಸಾಕು. ಸೆಕ್ಷನ್ ಆಫೀಸ್ ಅಥವಾ ಸೇವಾಸಿಂಧು ಮೂಲಕವೂ ನೋಂದಣಿ ಮಾಡಬಹುದು ಎಂದರು.
12ಕೋ.ರೂ.ವಿದ್ಯುತ್ ಬಾಕಿ
ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯಕ್ಕೆ 12 ಕೋ.ರೂ.ವಿದ್ಯುತ್ ಬಿಲ್ ಸಂಗ್ರಹಕ್ಕೆ ಬಾಕಿ ಉಳಿದಿದೆ. ಉಡುಪಿಯಲ್ಲಿ 8.28, ಕಾರ್ಕಳ 3.68 ಹಾಗೂ ಕುಂದಾಪುರದಲ್ಲಿ 0.50 ಕೋ.ರೂ. ವಿದ್ಯುತ್ ಪಾವತಿಗೆ ಬಾಕಿಯಿದೆ. ಆಸ್ಪತ್ರೆಗಳು ಸಹಿತ ಕಚೇರಿಗಳ ಪಾವತಿ ವಿಳಂಬವಾಗುವ ಬಾಕಿ ಉಳಿದುಕೊಂಡಿದೆ ಎಂದರು.
ಅಪಾಯಕಾರಿ ಮರ ತೆರವಿಗೆ ಅಡ್ಡಿ
ಸಕೆಲವೆಡೆ ಅಪಾಯಕಾರಿ ಮರಗಳಿಂದಾಗಿ ವಿದ್ಯುತ್ ತಂತಿಗಳಿಗೆ ಹಾನಿ ಉಂಟಾಗುತ್ತಿರುವ ಬಗ್ಗೆ ಬಂದ ಕರೆಗಳಿಗೆ ಪ್ರತಿಕ್ರಿಯಿಸಿ, ಮರಗಳ ತೆರವಿಗೆ ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ. ತಂತಿಗಳಿಗೆ ತಾಗುವ ಗೆಲ್ಲುಗಳನ್ನಷ್ಟೇ ಲೈನ್‌ಮ್ಯಾನ್‌ಗಳ ಮೂಲಕ ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲದಿದ್ದರೂ ಭಾರೀ ಮಳೆಯಾಗುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್
ಕಡಿತ ಮಾಡಲಾಗುತ್ತದೆ. ವಿಳಂಬವಾದರೆ 1912 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ದೂರು ನೀಡಬಹುದು ಎಂದರು.
ಬಜಗೋಳಿಯಲ್ಲಿ ಸಬ್‌ಸ್ಟೇಷನ್
ಕಾರ್ಕಳ ತಾಲೂಕಿನ ಮಾಳ ಮತ್ತಿತರ ಪ್ರದೇಶಗಳಲ್ಲಿ ಆಗುತ್ತಿರುವ ಲೋ ವೋಲ್ಟೆàಜ್ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಬಜಗೋಳಿಯಲ್ಲಿ ಮುಂದಿನ 18 ತಿಂಗಳಲ್ಲಿ ಸಬ್‌ಸ್ಟೇಷನ್ ನಿರ್ಮಾಣವಾಗಲಿದ್ದು, ಬಳಿಕ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಸೋಲಾರ್ ರೂಫ್ಟಾಪ್
ಸೋಲಾರ್ ರೂಪ್‌ಟಾಪ್ ಹಾಕಲಿಚ್ಛಿಸುವವರು ಎಂಎನ್‌ಆರ್ ಪೋರ್ಟಲ್ ಮೂಲಕ ನೋಂದಣಿ ಮಾಡಬಹುದು. ಸಬ್ಸಿಡಿ ಮೂಲಕ ಅಥವಾ ಖಾಸಗಿಯಾಗಿಯೂ ಸೋಲಾರ್ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಕರೆ ಮಾಡಿದವರು
ಚಿಕ್ಕಯ್ಯ ಶೆಟ್ಟಿ ತೆಕ್ಕಟ್ಟೆ, ಗೀತಾ ಭಟ್ ಉಡುಪಿ, ಪ್ರಕಾಶ್ ಪಡಿಯಾರ್ ಮರವಂತೆ, ಸುದರ್ಶನ್ ಉಪ್ಪಿನಕುದ್ರು, ಅಲ್ವರ್ ಆಲಿ ಕಾಪು, ರಾಜೇಶ್ ಶಿವಪುರ, ರಾಮಚಂದ್ರ ಆಚಾರ್ಯ ಉಡುಪಿ, ವಿಜಯ ಸಾಲ್ಯಾನ್ ಉಚ್ಚಿಲ, ಶ್ರೀನಾಥ್ ಹೆಬ್ಟಾರ್ ಮಣಿಪಾಲ, ದೇವಪ್ಪ ಶೆಟ್ಟಿ ಕುಂದಾಪುರ, ಪೆಡ್ರಿಕ್ ಡಿಸಿಲ್ವ ಶಿರ್ವ, ಚಂದ್ರ ಭಂಡಾರಿ ಕುಂದಾಪುರ, ಜಯ ಕೊರಂಗ್ರಪಾಡಿ, ಅಬ್ರಾಹಂ ಗಂಗೊಳ್ಳಿ, ವಿಜಯ ಕುಮಾರ್ ಕುಂದಾಪುರ, ಶ್ರೀನಿವಾಸ ಕಿದಿಯೂರು, ನಿತೇಶ್ ಬ್ರಹ್ಮಾವರ, ಅರುಣ್ ಮಣಿಪಾಲ, ಯಶವಂತ್ ದೊಡ್ಡಣಗುಡ್ಡೆ, ಪ್ರೇಮಾನಂದ ಅಂಜಾರು, ಶುಭಾ ಅಂಬಲಪಾಡಿ, ಮಾಧವ ಶೆಣೈ ಕೋಟ, ಜಯರಾಜ್ ಈಶ್ವರನಗರ, ರಾಮಕೃಷ್ಣ ಸಾಸ್ತಾನ, ಸುನೀತಾ ಮಣಿಪಾಲ, ಡಾ| ಪ್ರವೀಣ್ ಶೆಟ್ಟಿ ಹನೆಹಳ್ಳಿ, ವಸಂತ ಪೂಜಾರಿ ಕಟಪಾಡಿ, ಜಲಜಾ ಶೆಟ್ಟಿ ಮಾಳ, ಮಲ್ಲಿಕಾರ್ಜುನ ಮಜೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.